ಗ್ಯಾರಂಟಿ ರದ್ದು ಸಿಎಂ, ಡಿಸಿಎಂ ವಿವೇಚನೆಗೆ ಬಿಟ್ಟದ್ದು

KannadaprabhaNewsNetwork | Published : Feb 1, 2024 2:04 AM

ಸಾರಾಂಶ

ಮಾಗಡಿ: ಗ್ಯಾರಂಟಿ ರದ್ದು ವಿಚಾರ ಸಿಎಂ, ಡಿಸಿಎಂ ಅವರ ವಿವೇಚನೆಗೆ ಬಿಟ್ಟದ್ದು ನಾನು ನನ್ನ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಮಾಗಡಿ: ಗ್ಯಾರಂಟಿ ರದ್ದು ವಿಚಾರ ಸಿಎಂ, ಡಿಸಿಎಂ ಅವರ ವಿವೇಚನೆಗೆ ಬಿಟ್ಟದ್ದು ನಾನು ನನ್ನ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದೇನೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಗ್ಯಾರಂಟಿಗಳನ್ನು ಜನ ತಿರಸ್ಕರಿಸಿದರೆ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿಗಳನ್ನು ರದ್ದು ಮಾಡಬೇಕಾಗುತ್ತದೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲ್ಲದಿದ್ದರೆ ಐದು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸಿದ್ದೇನೆ. ಕೇವಲ ಮಂತ್ರಾಕ್ಷತೆ ನೀಡಿ ಮತ ಪಡೆಯುವುದಾದರೆ ನಾವು 5 ಗ್ಯಾರಂಟಿ ನೀಡಿ ಪ್ರಯೋಜನವಿಲ್ಲ. 2025ಕ್ಕೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಬೇಕಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಮಂದಿರ ಉದ್ಘಾಟನೆಗೂ ಪ್ರಧಾನ ಮಂತ್ರಿಗಳಿಗೂ ಯಾವ ಸಂಬಂಧವಿದೆ. ಅಯೋಧ್ಯೆ ರಾಮಮಂದಿರ ಟ್ರಸ್ಟ್‌ ನವರು ಉದ್ಘಾಟನೆ ಮಾಡಬೇಕಿತ್ತು, ಮೋದಿಯವರನ್ನು ಯಾವ ಕಾರಣಕ್ಕೆ ತಂದು ದೇವಸ್ಥಾನ ಉದ್ಘಾಟನೆ ಮಾಡಿಸಿದ್ದಾರೆ. ಪೂರ್ಣವಾಗದ ದೇವಸ್ಥಾನವನ್ನು ಏಕೆ ಉದ್ಘಾಟನೆ ಮಾಡಿದ್ದಾರೆ. ಮನೆಮನೆಗೆ ಮಂತ್ರಾಕ್ಷತೆ ಕೊಡುತ್ತಿರುವ ಉದ್ದೇಶವಾದರೂ ಏನು ಎಂದು ಬಿಜೆಪಿ ಪಕ್ಷಕ್ಕೆ ಶಾಸಕರು ಪ್ರಶ್ನೆ ಮಾಡಿದರು.

ಮೋದಿರವರು 15 ಲಕ್ಷ ಕಪ್ಪು ಹಣ ಹಾಕಿದ್ದಾರಾ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆಗೆ ಮುನ್ನ ಜನಧನ್ ಖಾತೆಗೆ ದೇಶದಲ್ಲಿ ಲೂಟಿ ಹೊಡೆದಿರುವ ಕಪ್ಪು ಹಣವನ್ನು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಣ ಹಾಕುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಅವರು ಬದ್ಧರಾಗಿದ್ದಾರಾ? ಅವರು ಹಣ ಹಾಕಿ ಮತ ಕೇಳಿದ್ದರೆ ನಾವು ಅವರ ಮಾತನ್ನು ಕೇಳುತ್ತಿದ್ದೆವು. ಆಗ ಹಣೆಗೆ ಕುಂಕುಮವಿಟ್ಟು ಮತ ಕೇಳಿ, ಈಗ ಮಂತ್ರಾಕ್ಷತೆಯನ್ನು ಕೊಟ್ಟು ಮತ ಕೇಳುತ್ತಿದ್ದಾರೆ, ಇದು ಯಾವ ರೀತಿ ನ್ಯಾಯ ಎಂದು ಪ್ರಶ್ನಿಸಿದರು.

ನಾವು ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಬದ್ಧತೆಯಾಗಿದೆ. ವಿರೋಧಿಗಳು ನಾವು ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಿಲ್ಲ ಎಂದು ಟೀಕೆ ಮಾಡುತ್ತಿದ್ದರು. ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.

ಗಿಫ್ಟ್ ಕೂಪನ್ ಕೊಟ್ಟಿಲ್ಲ: ವಿರೋಧ ಪಕ್ಷದವರು ನನ್ನ ಚಿಹ್ನೆ ಗೊತ್ತಾಗಲಿ ಎಂದು ನನ್ನ ಹೆಸರು, ಫೋಟೋ, ಕ್ರಮ ಸಂಖ್ಯೆ ಇರುವ ಕಾರ್ಡ್‌ನ್ನು ಕೊಟ್ಟಿದ್ದೇನೆ. ನಾನು ಯಾವುದೇ ಗಿಫ್ಟ್ ಕೂಪನ್ ಹಂಚಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆಬೇರೆ ರೀತಿಯಲ್ಲಿ ಈ ಕೂಪನ್ ಗಳನ್ನು ಹಂಚಿರಬಹುದು ಇದು ವಿರೋಧಿಗಳು ಟೀಕೆ ಮಾಡುತ್ತಿದ್ದಾರೆಯೇ ಹೊರತು ಮತದಾರಲ್ಲ ಎಂದು ಬಾಲಕೃಷ್ಣ ಸ್ಪಷ್ಟನೆ ನೀಡಿದರು. ಪೋಟೋ 31ಮಾಗಡಿ1 :

ಶಾಸಕ ಬಾಲಕೃಷ್ಣ ಭಾವಚಿತ್ರ.

Share this article