ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜ.10ರಂದು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಹಸ್ತಾಂತರಿಸಿದರು
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಜ.10ರಂದು ತನ್ನ ಮನೆ ನಿರ್ಮಾಣದ ಸಂದರ್ಭದಲ್ಲಿ ಚಿನ್ನಾಭರಣಗಳ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿದ್ದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗುರುವಾರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಹಸ್ತಾಂತರಿಸಿದರು.
ಪ್ರಜ್ವಲ್‌ನ ತಾಯಿ ಗಂಗವ್ವನನ್ನು ಫಲಾನುಭವಿಯೆಂದು ಆಯ್ಕೆ ಮಾಡಿತ್ತು
ಕಳೆದ ಜ.22ರಂದು ಗ್ರಾಪಂ ವಿಶೇಷ ಗ್ರಾಮಸಭೆ ಪ್ರಜ್ವಲ್‌ನ ತಾಯಿ ಗಂಗವ್ವನನ್ನು ಫಲಾನುಭವಿಯೆಂದು ಆಯ್ಕೆ ಮಾಡಿತ್ತು. ನಂತರ ಗಣರಾಜ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಸರ್ಕಾರದಿಂದ ₹5 ಲಕ್ಷ ಬಹುಮಾನದೊಂದಿಗೆ ಸೈಟ್ ನೀಡುವ ಪತ್ರ ನೀಡಿದ್ದರು. ಅದರಂತೆ ಗುರುವಾರ ರಿತ್ತಿ ಕುಟುಂಬಕ್ಕೆ ನಿವೇಶನ ಸಿಕ್ಕಿದೆ.
ಕುಟುಂಬ ಸಂತಸ
ನಿವೇಶನವನ್ನು ತೋರಿಸಿರುವುದಕ್ಕೆ ಪ್ರಜ್ವಲ್ ರಿತ್ತಿ ಕುಟುಂಬವು ಸಂತಸ ವ್ಯಕ್ತಪಡಿಸಿದೆ.
Stay updated with the latest news from Gadag district (ಗದಗ ಸುದ್ದಿ) — covering local developments, civic issues, politics, culture, heritage, crime, and community stories. Get timely headlines, in-depth reporting and district-level updates from Gadag via Kannada Prabha.