ಜಿಲ್ಲೆಯನ್ನು ಕೂಡಲೇ ತೀವ್ರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ಸಮೀಕ್ಷೆ ಮಾಡಿ ಎಲ್ಲ ರೈತರಿಗೆ ನೇರ ಪರಿಹಾರ ಜಮಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕಿನ ರೈತರ ಕೃಷಿ ಸಾಲ ಮತ್ತು ಸಹಕಾರಿ ಸಾಲ ಮನ್ನಾ ಮಾಡಬೇಕು.
ಗದಗ: ಜಿಲ್ಲೆಯನ್ನು ತೀವ್ರ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಜಿಲ್ಲೆಯ ಗಜೇಂದ್ರಗಡ, ರೋಣ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಗದಗ, ಶಿರಹಟ್ಟಿ ಈ ಎಲ್ಲ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೆರೆ, ಕೊಳ, ಬಾವಿ, ಕೊಳವೆ ಬಾವಿಗಳು ಬತ್ತಿವೆ. ರೈತರು ಬೆಳೆದ ಜೋಳ, ಹತ್ತಿ, ಸಜ್ಜೆ, ಹೆಸರು, ಶೇಂಗಾ, ತೊಗರಿ, ಸೂರ್ಯಕಾಂತಿ ಮೆಕ್ಕೆಜೋಳ ಬೆಳೆಗಳು ಸಂಪೂರ್ಣವಾಗಿ ಒಣಗಿವೆ. ರೈತರು ಬಿತ್ತನೆಗೆ ಹಾಕಿದ ಬಂಡವಾಳವೂ ನಷ್ಟವಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಅಭಾವವಿದೆ. ಕುಡಿಯುವ ನೀರಿಗೆ ಟ್ಯಾಂಕರ್ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಆದ್ದರಿಂದ ಜಿಲ್ಲೆಯನ್ನು ಕೂಡಲೇ ತೀವ್ರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ಸಮೀಕ್ಷೆ ಮಾಡಿ ಎಲ್ಲ ರೈತರಿಗೆ ನೇರ ಪರಿಹಾರ ಜಮಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕಿನ ರೈತರ ಕೃಷಿ ಸಾಲ ಮತ್ತು ಸಹಕಾರಿ ಸಾಲ ಮನ್ನಾ ಮಾಡಬೇಕು. ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಮಂತೂರ, ಪೀರು ರಾಠೋಡ, ಮೈಬೂ ಹವಾಲ್ದಾರ, ಶರಣು ಮಾಟರಂಗಿ, ಅನಿಲ ರಾಠೋಡ, ರೂಪೇಶ್ ಮಾಳೋತ್ತರ, ಚನ್ನಪ ಗುಗಲೋತ್ತರ, ಮಾದೇವಿ ದೊಡ್ಮನಿ, ಶಿವಕ್ಕ ಬೇವಿನಮರದ, ಸರಸ್ವತಿ ಬಣಕಲ್, ಯಲ್ಲವ್ವ ಸಂದಿಮನೆ ಮುಂತಾದವರು ಇದ್ದರು.ಇಂದು ಶಿರೋಳ ಗವಿಮಠದಲ್ಲಿ ಶಿವಾನುಭವ ಕಾರ್ಯಕ್ರಮನರಗುಂದ: ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಗವಿಮಠದಲ್ಲಿ ಜು. 29ರಂದು ಸಂಜೆ 7.30ಕ್ಕೆ 34ನೇ ಮಾಸಿಕ ಶಿವಾನುಭವ ಹಾಗೂ ಗುರು ಪೌರ್ಣಿಮೆ ಮತ್ತು ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಜರುಗಲಿವೆ.ಸಾನ್ನಿಧ್ಯವನ್ನು ಅಭಿನವ ಯಚ್ಚರ ಶ್ರೀಗಳು ವಹಿಸುವರು. ಮುಖ್ಯಅತಿಥಿಗಳಾಗಿ ಮಾರುತಿ ಜಾನಮಟ್ಟಿ, ಗಣೇಶ ಹೊರಪೇಟಿ, ಎಚ್ಚರಪ್ಪ ಬಡಿಗೇರ, ಅನ್ನಪೂರ್ಣ ಬಡಿಗೇರ, ಶಿವಾನಂದ ಕಟ್ಟಿ, ಮಂಜುಳಾ ಕಟ್ಟಿ, ನಾಗಲಿಂಗ ಬಡಿಗೇರ, ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಗುರುಪಾದಪ್ಪ ಭಜಂತ್ರಿ ಅವರು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಸದ್ಭಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.