ಎಚ್ಡಿಡಿ-ಎಚ್ಡಿಕೆ ಕುರಿತು ಮಾತಾಡಲು ಬಾಲಕೃಷ್ಣಗೆ ಯೋಗ್ಯತೆ ಇಲ್ಲ

KannadaprabhaNewsNetwork |  
Published : Dec 22, 2025, 01:15 AM IST
21ಕೆಆರ್ ಎಂಎನ್ 10.ಜೆಪಿಜಿಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಸರು ಹೇಳಿಕೊಂಡು ಮೂರು ಬಾರಿ ಶಾಸಕನಾಗಿದ್ದೀಯ. ಅವರ ಕೃಪಾಕಟಾಕ್ಷದಿಂದ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದೀಯ. ನಿನಗೆ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಾಮನಗರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೆಸರು ಹೇಳಿಕೊಂಡು ಮೂರು ಬಾರಿ ಶಾಸಕನಾಗಿದ್ದೀಯ. ಅವರ ಕೃಪಾಕಟಾಕ್ಷದಿಂದ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದೀಯ. ನಿನಗೆ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀನು ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ರಾಜ್ಯ ನಾಯಕನಾಗ್ತೀನಿ ಅಂದುಕೊಂಡಿದ್ದೀಯ. ಹೀಗಾಗಿ ಕನಕಪುರದವರಿಗೆ ಪ್ರತಿದಿನ ಬಕೆಟ್ ಹಿಡೀತಾ ಇದ್ದೀಯಾ. ನೀನು ಅವಿವೇಕಿತನದ ಹೇಳಿಕೆ ಕೊಟ್ಟರೆ ನಾವು ಸುಮ್ಮನೆ ಇರುವುದಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೃಪೆಯಿಂದ ಗೆದ್ದು, ಕಾಂಗ್ರೆಸ್ ಮಾಡಿದಂತಹ ಹರಾಜಿನಲ್ಲಿ ನೀನು ಕಾಂಗ್ರೆಸ್ ಸೇರಿಕೊಂಡಿದ್ದೀಯಾ. ದೇವೆಗೌಡರ ಕುಟುಂಬದ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಿಯಾ. ಕುಮಾರಸ್ವಾಮಿಗೆ ನಾವೆಲ್ಲಾ ಪ್ರಾಮಾಣಿಕವಾಗಿದ್ದೇವೆ. ನಿನ್ನ ರೀತಿ ಉಂಡ ಮನೆಗೆ ದ್ರೋಹ ಮಾಡಿ ಹೋಗಿಲ್ಲ ಎಂದರು.

ದೇವೇಗೌಡರ ಹಾಗೂ ಕುಮಾರಸ್ವಾಮಿ ಕೊಡುಗೆ ರಾಜ್ಯಕ್ಕೆ ಹಾಗೂ ಈ ರಾಮನಗರ ಜಿಲ್ಲೆಗೆ ಸಾಕಷ್ಟಿದೆ. ಜಿಲ್ಲೆಯಲ್ಲಿ ಹಲವು ನದಿಗಳಿಗೆ ಸೇತುವೆಗಳನ್ನ ನಿರ್ಮಾಣ ಮಾಡಿರುವ ಕೀರ್ತಿ, ಜಿಲ್ಲೆ ಮಾಡಿರುವ ಕೀರ್ತಿ ನಮ್ಮ ನಾಯಕರಿಗೆ ಸಲ್ಲುತ್ತದೆ ಇದನ್ನ ಬಾಲಕೃಷ್ಣ ಅರ್ಥ ಮಾಡಿಕೊಳ್ಳಲಿ. ಈ ರಾಜ್ಯಕ್ಕೆ ದೇವೆಗೌಡರ ಕೊಡುಗೆ ಏನಿದೆ ಅನ್ನೋದನ್ನು ಡಿಬೇಟ್ ಮಾಡೋಣ. ನೀರಾವರಿ ಬಗ್ಗೆ ದೇವೆಗೌಡರ ಕುಟುಂಬಕ್ಕೆ ಅರಿವಿಲ್ಲ ಅಂತ ಹೇಳುತ್ತಿಯಾ, ಸತ್ತೆಗಾಲ ಯೋಜನಗೆ 540 ಕೋಟಿ ಅನುದಾನ ಕೊಟ್ಟಿದ್ದಾರೆ. ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಕುಮಾರಸ್ವಾಮಿ 175 ಕೋಟಿ ಅನುದಾನ ಕೊಟ್ಟಿದ್ದಾರೆ. ನಿನ್ನ ಹಾಗೆ ದುಡ್ಡು ಹೊಡೆಯುವ ಸ್ಕೀಮ್ ಅನ್ನು ನಮಗೆ ಹೇಳಿಕೊಡಲಿಲ್ಲ ಎಂದರು.

ಹೇಮಾವತಿ ನೀರಾವರಿ ಬಗ್ಗೆ ಒಂದೇ ಒಂದು ಆದೇಶ ಮಾಡಿಸಿದ್ದರೆ ತೋರಿಸಲಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಹೇಮಾವತಿ ಜಲಾಶಯದ ನೀರನ್ನು ಅಲೋಕೇಟ್ ಮಾಡಿದ್ದರು. ವಾಸ್ತವವಾಗಿ ಕುಮಾರಸ್ವಾಮಿ ಅವರೇ ಮಾಗಡಿಗೆ ನೀರು ಕೊಟ್ಟವರು. ಹರಕಲು ಬಾಯಿ ರೀತಿ ಮಾತನಾಡುವುದನ್ನು ಬಾಲಕೃಷ್ಣ ಬಿಡಬೇಕು.ಮಂಡ್ಯದಲ್ಲಿ ಕೈಗಾರಿಕೆ ಕಟ್ಟಲು ಸುಳ್ಳು ಹೇಳುತ್ತಿದ್ದಾರೆಂದು ಅನ್ನುತ್ತಾರೆ. ನಿಮ್ಮ ಊರು ಹುಲಿಕಟ್ಟೆಯಲ್ಲಿ 300 ಎಕರೆ ಅರಣ್ಯ ಜಾಗ ನಿಮ್ಮ ತಾತನ ಹೆಸರಿನಲ್ಲಿ ಒತ್ತುವರಿ ಮಾಡಿಕೊಂಡಿದ್ದೀರಲ್ಲ. ಅದನ್ನು ಬಿಟ್ಟುಕೊಟ್ಟರೆ ಕುಮಾರಸ್ವಾಮಿ ಕೈಗಾರಿಕೆ ಕಟ್ಟುತ್ತಾರೆ. ನಿಮಗೆ ಮೀಟರ್ ಇದ್ದರೆ ನಿಮ್ಮ ಪಕ್ಷದೊಂದಿಗೆ ಮಾತನಾಡಿ ಎಂದು ಸವಾಲು ಹಾಕಿದರು.

ಡಿಕೆ ಶಿವಕುಮಾರ್ ಎರಡು ಬಾರಿ ನೀರಾವರಿ ಸಚಿವರಾಗಿದ್ದರು. ಶ್ರೀರಂಗ ಏತ ನೀರಾವರಿ ಯೋಜನೆಗೆ ಅವರ ಕೊಡುಗೆ ಏನು? ಅವರ ಅವಧಿಯಲ್ಲಿ ಒಂದೇ ಒಂದು ಆದೇಶ ಮಾಡಲಿಲ್ಲ. 60 ವರ್ಷ ನಿಮ್ಮ ಕುಟುಂಬದ್ದೇ ಮಾಗಡಿಯಲ್ಲಿ ಅಧಿಕಾರ ಇತ್ತಲ್ಲ ಏನು ಮಾಡಿದ್ದೀಯಾ ಹೇಳಪ್ಪ. ಇರಿಗೇಷನ್ ಲ್ಯಾಂಡ್ ಹುಡುಕಿ ನೀರು ತರುವ ಕೆಲಸ ಮಾಗಡಿಯಲ್ಲಿ ಮಾಡಲಿಲ್ಲ.

ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಅಡಿಯಿಂದ ಮುಡಿವರೆಗೂ ಎಲ್ಲವನ್ನು ನಾನೇ ಮಾಡಿರೋದು. ಈ ಯೋಜನೆಯಲ್ಲಿ ನಿನ್ನದು ಒಂದೇ ಒಂದು ಗುಂಡುಪಿನ್ ಅಷ್ಟು ಕೊಡುಗೆ ಇಲ್ಲ. ನೀನು ಗೆದ್ದಿದ್ಯಾ, ಯಾರಿಗೋ ಬಕೆಟ್ ಹಿಡಿದುಕೊಂಡು ಇದ್ದಿಯಾ ಇರು. ಅದನ್ನು ಬಿಟ್ಟು ದೇವೆಗೌಡರ ಕುಟುಂಬದ ವಿಚಾರ ಮಾತನಾಡಿದರೆ ನಾವು ಸುಮ್ಮನೆ ಕೂರಲ್ಲ ಎಂದು ಎ.ಮಂಜುನಾಥ್ ಎಚ್ಚರಿಸಿದರು.

ಬಾಕ್ಸ್‌.................

ಬೈರಮಂಗಲದಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದರೆ ಮೆಚ್ಚುತ್ತಿದ್ದೆವು

ರಾಮನಗರ:

ಬಿಡದಿ ಟೌನ್ ಶಿಪ್ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡುವ ಸಲುವಾಗಿ ಕಿರುಹೊತ್ತಿಗೆ ಹೊರ ತಂದಿದ್ದಾರೆ. ಶಾಸಕ ಬಾಲಕೃಷ್ಣ ಅವರಿಗೆ ಏನಾದರು ಯೋಗ್ಯತೆ, ಸ್ವಾಭಿಮಾನ ಇದ್ದಿದ್ದರೆ ಭೈರಮಂಗಲದಲ್ಲಿ ಆ ಕಿರುಹೊತ್ತಿಗೆ ಬಿಡುಗಡೆ ಮಾಡಬೇಕಿತ್ತು ಎಂದು ಮಾಜಿ ಶಾಸಕ ಬಾಲಕೃಷ್ಣ ತರಾಟೆ ತೆಗೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯ ರೈತರಿಗೆ ಏನೆಲ್ಲಾ ಕೊಡುತ್ತೇವೆ ಅಂತಾ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ರೈತರ ಸಭೆ ಕರೆದು ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದರೆ ಅವರನ್ನು ಮೆಚ್ಚಬೇಕಿತ್ತು. ರೈತರ ಬಳಿ ಬರಲು ಅವರಿಗೆ ಭಯ,‌ ಅಂಜಿಕೆ ಇದೆ. ಹಸಿರು ಶಾಲು ಹಾಕೊಂಡು ಕಿರುಹೊತ್ತಿಗೆ ಬಿಡುಗಡೆ ಮಾಡಿದರೆ ರೈತರು ಒಪ್ಪಿಗೆ ಕೊಟ್ಟಿದ್ದಾರೆ ಅಂದುಕೊಂಡಿದ್ದಾರೆ ಎಂದು ಟೀಕಿಸಿದರು.

ಈ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮಾಡಿ ತರಬೇತಿ ಕೊಡುತ್ತೇವೆ, ಜಮೀನು ಕೊಡಿ ಅನ್ನುತ್ತಿದ್ದಾರೆ. ಇವರಿಗೆ ಜಮೀನು ಕೊಟ್ಟು ರೈತ ಮಹಿಳೆಯರು ಹಪ್ಪಳ, ಉಪ್ಪಿನಕಾಯಿ ಮಾಡಿಕೊಂಡು ಜೀವನ ನಡೆಸಬೇಕಾ? ಕಿರುಹೊತ್ತಿಗೆ ಬದಲು, ಪ್ರಿಲಿಮನರಿ ನೊಟಿಫೀಕೆಶನ್ ಮಾಡಿಸಿ ಎಂದು ಮಂಜುನಾಥ್ ಹೇಳಿದರು.

21ಕೆಆರ್ ಎಂಎನ್ 10.ಜೆಪಿಜಿ

ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ