ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿಯ ಆಗ್ರಾದ ಜೆ.ಪಿ. ಪ್ಯಾಲೇಸ್ ನಲ್ಲಿ 4 ದಿನ ನಡೆದ 16ನೇ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಮೈಸೂರು ಮತ್ತು ಚಾಮರಾಜನಗರ ರೆವೆನ್ಯೂ ಜಿಲ್ಲೆಗಳನ್ನೊಳಗೊಂಡಂತೆ ರಚಿಸಲಾಗಿರುವ ಅಲಯನ್ಸ್ ಜಿಲ್ಲೆ 255 ರ ಜಿಲ್ಲಾ ರಾಜ್ಯಪಾಲರಾಗಿ ಬಾಲಕೃಷ್ಣರಾಜು ಅವರು ಸರ್ವಾನುಮತದಿಂದ ಚುನಾಯಿತರಾದರು.
ಸಮ್ಮೇಳನದಲ್ಲಿ ಅಂತರ ರಾಷ್ಟ್ರೀಯ ಅಧ್ಯಕ್ಷ ಎಸ್. ಬಾಲಚಂದ್ರ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.ಅಂತರಾಷ್ಟ್ರೀಯ ನಿರ್ದೇಶಕರಾದ ನಾಗರಾಜ್ ವಿ. ಬೈರಿ ಅವರಿಂದ ಆಯ್ಕೆ ಪತ್ರ ಪಡೆದರು. ಜಿಲ್ಲೆಯ ಮೊದಲನೇ ಉಪ ಜಿಲ್ಲಾ ರಾಜ್ಯಪಾಲರಾಗಿ ಆಯ್ಕೆ ಆಗಿರುವ ಎಸ್. ವೆಂಕಟೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ, ಗಂಗಾಧರಪ್ಪ, ಜಿಲ್ಲಾ ಸಂಪುಟ ಖಜಾಂಚಿ ಕೃಷ್ಣೋಜಿ ರಾವ್, ಜಿಲ್ಲಾ ಪಿಆರ್.ಒ ಎನ್. ಬೆಟ್ಟೇಗೌಡ ಇದ್ದರು.