ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ನೆಹರು ಬಡಾವಣೆಯ ಶ್ರೀ ಬಲಮುರಿ ಸಿದ್ಧಿ ವಿನಾಯಕ ದೇವಸ್ಥಾನ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವಾಲಯದ 28ನೇ ವಾರ್ಷಿಕೋತ್ಸವ ಮತ್ತು 26 ನೇ ವರ್ಷದ ಉತ್ಸವ ಮೂರ್ತಿಯ ಮೆರವಣಿಗೆ ಹಿನ್ನೆಲೆಯಲ್ಲಿ ಬೆಳಗ್ಗೆ ದೇವಾಲಯದಲ್ಲಿ ಕಳಸ ಸ್ಥಾಪನೆ ಗಣಪತಿ ಪೂಜೆ ನಂತರ ದೇವಾಲಯಗಳ ಒಕ್ಕೂಟ ಸಮಿತಿಯ ಸಂಕಲ್ಪ ಹಾಗೂ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಯಿತು. ದೇವಾಲಯದ ಅರ್ಚಕ ಬಿ. ಪ್ರಕಾಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಿ ಜೆ ರೇಣು ಕುಮಾರ್, ಉಪಾಧ್ಯಕ್ಷ ಕೆ ವಿ ಅರುಣ, ಖಜಾಂಚಿ ಬಿ ಸಿ ಆನಂದ್, ಗೌರವಾಧ್ಯಕ್ಷ ಎಂ ಕೆ ಸುಂದರೇಶ್, ಸಹಕಾರ್ಯದರ್ಶಿ ಹನುಮರಾಜ್, ನಿರ್ದೇಶಕರು ಸಲಹೆಗಾರರು, ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಇದ್ದರು.