ಕೊಪ್ಪಳ: ಇಲ್ಲಿ ನಗರಕ್ಕೆ, ಗ್ರಾಮಕ್ಕೆ ಹೊಂದಿಕೊಂಡ ಬೃಹತ್ ಕೈಗಾರಿಕೆಗಳಿಂದ ಮಕ್ಕಳ, ಮಹಿಳೆಯರ, ವೃದ್ಧರ ಆರೋಗ್ಯಕ್ಕೆ ತೊಂದರೆ ಕೊಡುತ್ತಿವೆ. ಇಲ್ಲಿನ ವಾತಾವರಣ ಕೆಡಿಸಿ, ತಮ್ಮ ಲಾಭ ಒಂದೇ ಅನ್ನುವುದಾದರೆ ಜನರೇಕೆ ಅದನ್ನು ಸಹಿಸಿಕೊಳ್ಳಬೇಕು ಎಂದು ಪಂಜಾಬ್‌ನ ನಿವೃತ್ತ ಸೈನಿಕ ಅಮರಸಿಂಗ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಕಳಕಪ್ಪ ಟಿ. ಬೆಟಗೇರಿ ಮಾತನಾಡಿ, ಕೊಪ್ಪಳ, ಭಾಗ್ಯನಗರದ ಒಂದೂವರೆ ಲಕ್ಷ ಜನರ ಆರೋಗ್ಯ ಅಪಾಯದಲ್ಲಿದೆ ಎಂಬ ಅರಿವು ಶಾಸಕರಿಗೆ ಇರಬೇಕು. ಇಲ್ಲದಿದ್ದರೆ ಅದರ ಪರಿಣಾಮವನ್ನು ಜನರು ತಮ್ಮ ಪ್ರತಿಕ್ರಿಯೆ ರೂಪದಲ್ಲಿ ಹೋರಾಡಿ ತೋರಿಸುತ್ತಾರೆ ಎಂದರು.
ಧರಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡ ಟಿ. ರತ್ನಾಕರ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಭೀಮಸೇನ ಕಲಕೇರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಶರಣು ಶೆಟ್ಟರ್, ನಾಗಪ್ಪ ಅಬ್ಬಿಗೇರಿ, ಮಹಾದೇವಪ್ಪ ಮಾವಿನಮಡು, ಈಶ್ವರಪ್ಪ ಕೂಕನಪಳ್ಳಿ, ರಾಜಶೇಖರ ಏಳುಭಾವಿ, ವೈ. ಸತ್ಯನಾರಾಯಣ, ಯಮನೂರಪ್ಪ ಹಾಲಳ್ಳಿ, ನಾಗರಾಜ ಕುಷ್ಟಗಿ, ಬಿ.ಜಿ. ಕರಿಗಾರ, ಬಸವರಾಜಪ್ಪ ಶೆಟ್ಟರ್, ಶಿವಪ್ಪ ಹಲಗೇರಿ, ಈಶ್ವರಪ್ಪ, ದುರುಗೇಶ ಹಳ್ಳಿ ಇದ್ದರು.