ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್‌ಗೆ ಬಲಿಪ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Nov 05, 2025, 01:03 AM IST
ಎಕ್ಸಲೆಂಟ್ ಕಾಲೇಜಿನಲ್ಲಿ ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ | Kannada Prabha

ಸಾರಾಂಶ

ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲಿ ಭಾನುವಾರ ನಡೆಯಿತು. ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಡುಬಿದಿರೆ: ಕೀರ್ತಿಶೇಷ ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲಿ ಭಾನುವಾರ ನಡೆಯಿತು. ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದರಿಗೆ ಬದುಕಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ, ಸಮಾಜ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಬಲಿಪ ಭಾಗವತರು ಹಾಗೂ ಅವರ ಕುಟುಂಬಿಕರ ಸರಳ, ಸಜ್ಜನಿಕೆ ಪ್ರತಿಯೊಬ್ಬರಿಗೂ ಮಾದರಿ. ಇಂದಿಗೂ ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯದಿಂದ ಬಹುದುಕುತ್ತಿರುವುದು ಶ್ಲಾಘನೀಯ ಬಲಿಪರ ಮನೆಯ ಮಕ್ಕಳ ಶಿಕ್ಷಣಕ್ಕೆ ಎಕ್ಸಲೆಂಟ್ ಸಂಸ್ಥೆಯಲ್ಲಿ ಪ್ರೋತ್ಸಾಹ ನೀಡಲಾಗುವುದು ಎಂದರು.

ಡಾ.ವಾದಿರಾಜ ಕಲ್ಲೂರಾಯ ಸಂಸ್ಮರಣಾ ನುಡಿಗಳನ್ನಾಡಿ, ಯಕ್ಷಗಾನವೇ ಬಲಿಪರಿಗೆ ಆತ್ಮವಾಗಿತ್ತು. ಅವರು ಕಲೆಯನ್ನು ಪ್ರೀತಿಸುವ, ಆರಾಧನೆ ಮಾಡುವಂತವಾಗಿ ಪ್ರಾತಃಸ್ಮರಣೀಯರು. ಬಲಿಪ ಭಾಗವತರ ಗುಣಗಳನ್ನು ಪ್ರತಿಬಿಂಬಿಸುವಂತಹ ವ್ಯಕ್ತಿತ್ವ, ಶೈಲಿ ಪ್ರಸಾದ ಬಲಿಪರದ್ದು. ಅವರು ಮಗು ಮನಸ್ಸಿನ ಕಲಾವಿದ ಎಂದರು.ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಯುವರಾಜ್-ಜೈನ್ ರಶ್ಮಿತಾ ದಂಪತಿಯನ್ನು ಬಲಿಪರ ಕುಟುಂಬಸ್ಥರು ಗೌರವಿಸಿದರು.ಉದ್ಯಮಿ ಕೆ.ಶ್ರೀಪತಿ ಭಟ್, ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಬಲಿಪ ಮಾಧವ ಭಟ್, ಬಲಿಪ ನಾರಾಯಣ ಭಾಗವತರ ಪುತ್ರ ಶಿವಶಂಕರ ಬಲಿಪ ಮತ್ತಿತರರಿದ್ದರು. ವಿಕ್ರಂ ನಾಯಕ್ ಸನ್ಮಾನಪತ್ರ ವಾಚಿಸಿದರು. ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ