ದಸರಾ ಬಡಿಗೆ ಬಡಿದಾಟದಲ್ಲಿ 1 ಸಾವು, 120 ಮಂದಿ ಗಾಯ

Published : Oct 23, 2026, 11:27 AM IST
Stick

ಸಾರಾಂಶ

ದಸರಾ ನಿಮಿತ್ತ ನಡೆದ ಬಡಿಗೆ ಬಡಿದಾಟಿದಲ್ಲಿ ಒಬ್ಬ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿರುವ ಘಟನೆ ನೆರೆಯ ಆಂಧ್ರಪ್ರದೇಶದ ದೇವರಗುಡ್ಡದ ಮಾಳ ಮಲ್ಲೇಶ್ವರ ದೇವಾಲಯದಲ್ಲಿ ಬುಧವಾರ ನಡೆದಿದೆ.

ಬಳ್ಳಾರಿ: ದಸರಾ ನಿಮಿತ್ತ ನಡೆದ ಬಡಿಗೆ ಬಡಿದಾಟಿದಲ್ಲಿ ಒಬ್ಬ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿರುವ ಘಟನೆ ನೆರೆಯ ಆಂಧ್ರಪ್ರದೇಶದ ದೇವರಗುಡ್ಡದ ಮಾಳ ಮಲ್ಲೇಶ್ವರ ದೇವಾಲಯದಲ್ಲಿ ಬುಧವಾರ ನಡೆದಿದೆ.

ಆಂಧ್ರಪ್ರದೇಶದ ಆಲೂರು ಗ್ರಾಮದ ಪೋತಲಿಂಗ (30) ಮೃತ ವ್ಯಕ್ತಿ. ಘಟನೆಯಲ್ಲಿ 120ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. 8 ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಬಡಿಗೆ ಉತ್ಸವ?:

ದಸರಾ ಎಂದರೆ ನಾಡಿನೆಲ್ಲೆಡೆ ಸಂಭ್ರಮ, ಸಡಗರ. ನವರಾತ್ರಿಯ ಪೂಜೆ, ದೇವಿಯ ಆರಾಧನೆ, ಬನ್ನಿ ವಿನಿಮಯ ಹಾಗೂ ವಿಜಯದಶಮಿಯ ಶುಭಾಶಯಗಳ ಸುರಿಮಳೆ ಸಾಮಾನ್ಯ. ಆದರೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವರಗುಡ್ಡದಲ್ಲಿ ದಸರಾ ಆಚರಣೆಯೇ ವಿಭಿನ್ನ. ಇಲ್ಲಿ ದೇವರ ಉತ್ಸವದ ಸಂದರ್ಭದಲ್ಲಿ ಭಕ್ತರು ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಆಚರಣೆಯೇ ಸ್ಥಳೀಯವಾಗಿ ಬನ್ನಿ ಉತ್ಸವ ಎಂದು ಪ್ರಸಿದ್ಧವಾಗಿದೆ.

ಕನ್ನಡದಲ್ಲಿ ಕಾರಣಿಕ

ಆಂಧ್ರಪ್ರದೇಶದ ದೇವರಗುಡ್ಡದಲ್ಲಿ ಜರುಗಿದ ಮಾಳ ಮಲ್ಲೇಶ್ವರ ಉತ್ಸವದಲ್ಲಿ ಅರ್ಚಕ ಪ್ರತಿ ವರ್ಷದಂತೆ ಕನ್ನಡದಲ್ಲಿ ಭವಿಷ್ಯ ನುಡಿದ್ದಾರೆ. ಮಲ್ಲಿಗೆ ಹೂವದ ಹಿಂದೆ ‘ಗಂಗೆ ಮಾಳ ನಿಂತಾಳ ಎಚ್ಚರ’ ಎಂದು ಕಾರಣಿಕ ನುಡಿದರು. ಮಾಳ ಮಲ್ಲೇಶ್ವರ ಉತ್ಸವದ ಕಾರಣಿಕ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದ್ದು, ಈ ವರ್ಷದಲ್ಲಿ ರಾಜಕೀಯ ಅನೇಕ ಪಲ್ಲಟ ಆಗಲಿವೆ. ಅನೇಕರಿಗೆ ಅಪಾಯ ಕಾದಿದೆ ಎಂಬರ್ಥವಿದೆ. ಈ ಉತ್ಸವದಲ್ಲಿ ಆಂಧ್ರದ ಗಡಿಭಾಗದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

PREV
Stay informed with the latest news from Ballari district (ಬಳ್ಳಾರಿ ಸುದ್ದಿ) — covering mining & industry, local governance, civic issues, heritage & tourism, community events, agriculture, environment and regional developments on Kannada Prabha News.
Read more Articles on

Recommended Stories

ದಸರೆಗೆ ಪ್ರೇರಣೆಯಾಗಿದ್ದ ಮಹಾನವಮಿ ದಿಬ್ಬದಲ್ಲಿ ನೀರವ ಮೌನ
ಪ್ರಜಾಪ್ರಭುತ್ವಕ್ಕೆ ಕೋಮುವಾದವೇ ದುಷ್ಟಶಕ್ತಿ: ಎ.​ಕರುಣಾನಿಧಿ