ಮಲ್ಲಟ ಜೆಸ್ಕಾಂ ಉಪ ಕಚೇರಿಗೆ ಬೆಂಕಿ: ಸಿಬ್ಬಂದಿಗೆ ಹಲ್ಲೆ, ದೂರು

Published : Jun 25, 2026, 10:24 AM IST
Farmer sets fire to GESCOM office for power cut!

ಸಾರಾಂಶ

ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಯಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದೆ. ಹಲವು ಬಾರಿ ನೋಟಿಸ್ ನೀಡಿದ ಬಳಿಕವೂ ಪಾವತಿಸದ ಕಾರಣ ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಅವರು ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

ರಾಯಚೂರು: ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಯಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದೆ.

ಹಳ್ಳಿಹೊಸೂರು ಗ್ರಾಮದ ಗ್ರಾಹಕ ಶಿವಪ್ಪ ಗಡಿಗಿ

ಹಳ್ಳಿಹೊಸೂರು ಗ್ರಾಮದ ಗ್ರಾಹಕ ಶಿವಪ್ಪ ಬಸನಗೌಡ ಗಡಿಗಿ ಅವರ ಮನೆಯ 11,000 ರು. ವಿದ್ಯುತ್ ಬಾಕಿ ಬಾಕಿ ಉಳಿಸಿಕೊಂಡಿದ್ದರು ಹಲವು ಬಾರಿ ನೋಟಿಸ್ ನೀಡಿದ ಬಳಿಕವೂ ಪಾವತಿಸದ ಕಾರಣ ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಅವರು ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ

ಇದರಿಂದ ಆಕ್ರೋಶಗೊಂಡ ಶಿವಪ್ಪ ಗಡಿಗಿ ಅವರು ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಇದರ ಪರಿಣಾಮ ಕಚೇರಿಯ ದಾಖಲೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಬ್ಯಾಟರಿ ಮತ್ತು ನಗದು ಸೇರಿದಂತೆ ಸಾರ್ವಜನಿಕ ಆಸ್ತಿ ನಷ್ಟವಾಗಿದೆ ಆದರೆ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಘಟನೆ ಕುರಿತು ಜೆಸ್ಕಾಂ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರು ಮತ್ತು ನೌಕರರು ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

PREV
Stay informed with the latest news from Ballari district (ಬಳ್ಳಾರಿ ಸುದ್ದಿ) — covering mining & industry, local governance, civic issues, heritage & tourism, community events, agriculture, environment and regional developments on Kannada Prabha News.
Read more Articles on

Recommended Stories

3 ರಾಜ್ಯ ಸಿಎಂಗಳೆದುರು ಇಂದು ಟಿಬಿ ಡ್ಯಾಂ ಗೇಟ್‌ ಉದ್ಘಾಟನೆ
ಶೈಕ್ಷಣಿಕ, ಧಾರ್ಮಿಕ ಬೆಳವಣಿಗೆಯಲ್ಲಿ ವೀರಶೈವ ಮಠಗಳ ಪಾತ್ರ ಅನನ್ಯ