ಹೈದರಾಬಾದ್‌ನಲ್ಲಿ ಬಳ್ಳಾರಿ ವಿದ್ಯಾರ್ಥಿಗಳ ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ

KannadaprabhaNewsNetwork |  
Published : Oct 23, 2026, 01:45 AM IST
ಹೈದರಾಬಾದ್‌ನ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ನಡೆದ 91ನೇ ನಾಡಹಬ್ಬ ಉತ್ಸವದಲ್ಲಿ ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಕತ್ತಲೆ ರಾಜ್ಯದ ಮೂರ್ಖ ರಾಜ’ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ನಾಟಕ ನಿರ್ದೇಶಕ ಆರ್.ಪಿ. ಮಂಜುನಾಥ್ ಬಿ.ಜಿ. ದಿನ್ನೆ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಮೂರ್ಖ ರಾಜನ ಆಡಳಿತ ವ್ಯವಸ್ಥೆ, ಅವಿವೇಕದ ನಿರ್ಧಾರಗಳು ಹಾಗೂ ಅವುಗಳಿಂದ ಸಮಾಜದ ಮೇಲಾಗುವ ಪರಿಣಾಮ ವಿಡಂಬನಾತ್ಮಕವಾಗಿ ಕಟ್ಟಿಕೊಡುವ ನಾಟಕವು ಪ್ರೇಕ್ಷಕರ ಗಮನ ಸೆಳೆಯಿತು.

ಬಳ್ಳಾರಿ: ಹೈದರಾಬಾದ್‌ನ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ನಡೆದ 91ನೇ ನಾಡಹಬ್ಬ ಉತ್ಸವದಲ್ಲಿ ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕತ್ತಲೆ ರಾಜ್ಯದ ಮೂರ್ಖ ರಾಜ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತೆಲಂಗಾಣದ ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಅ.10ರಿಂದ 20ರವರೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಾಟಕ ಪ್ರದರ್ಶನ ನಡೆಯಿತು. ಕಾರಂತ ರಂಗಲೋಕ, ಭೈರಗಾಮದಿನ್ನೆ ಸಂಸ್ಥೆಯ ಸಹಕಾರದೊಂದಿಗೆ ಬಳ್ಳಾರಿಯ ಸ.ಸ.ಅ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಟಕ ವಿಭಾಗದ ವಿದ್ಯಾರ್ಥಿಗಳು ನಾಟಕ ಯಶಸ್ವಿಯಾಗಿ ಪ್ರದರ್ಶಿಸಿದರು.

ಖ್ಯಾತ ಹಿಂದಿ ಸಾಹಿತಿ ಭರತೇಂದು ಹರಿಶ್ಚಂದ್ರ ಮೂಲಕತೆ ಆಧರಿಸಿದ ಈ ನಾಟಕವನ್ನು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಕನ್ನಡಕ್ಕೆ ಅನುವಾದಿಸಿದ್ದು, ಆರ್.ಪಿ.ಮಂಜುನಾಥ್ ಬಿ.ಜಿ. ದಿನ್ನೆ ನಿರ್ದೇಶನ ಮಾಡಿದ್ದರು.

ಮೂರ್ಖ ರಾಜನ ಆಡಳಿತ ವ್ಯವಸ್ಥೆ, ಅವಿವೇಕದ ನಿರ್ಧಾರಗಳು ಹಾಗೂ ಅವುಗಳಿಂದ ಸಮಾಜದ ಮೇಲಾಗುವ ಪರಿಣಾಮ ವಿಡಂಬನಾತ್ಮಕವಾಗಿ ಕಟ್ಟಿಕೊಡುವ ನಾಟಕವು ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಅಭಿನಯ ಸಂಭಾಷಣೆ ಹಾಗೂ ಪಾತ್ರಗಳ ನಿರ್ವಹಣೆ ಪ್ರದರ್ಶನಕ್ಕೆ ಮೆರುಗು ನೀಡಿದವು.

ನಾಟಕ ವೀಕ್ಷಿಸಿದ ಹಿರಿಯ ಪ್ರಾಧ್ಯಾಪಕ ವಿ.ಬಿ. ತಾರಕೇಶ್ವರ್ ಅವರು ವಿದ್ಯಾರ್ಥಿಗಳ ಅಭಿನಯ ಹಾಗೂ ನಿರ್ದೇಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬಳ್ಳಾರಿಯ ವಿದ್ಯಾರ್ಥಿಗಳು ಹೊರರಾಜ್ಯದ ವೇದಿಕೆಯಲ್ಲಿ ಕನ್ನಡ ರಂಗಭೂಮಿಯ ಪ್ರತಿಭೆ ಅನಾವರಣಗೊಳಿಸಿರುವುದು ವಿಶೇಷವಾಗಿತ್ತು.

ನಾಟಕದಲ್ಲಿ ಮೂರ್ಖ ರಾಜನ ಪಾತ್ರದಲ್ಲಿ ಎಂ.ಆರ್.ಶ್ರೀಧರ್, ಮಂತ್ರಿಯಾಗಿ ಆರ್.ಪಿ.ರಾಕೇಶ್, ಕೊತ್ವಾಲನಾಗಿ ಗಣೇಶ ಹಾಗೂ ಸೈನಿಕರ ಪಾತ್ರಗಳಲ್ಲಿ ಟಿ.ಎನ್. ದೇವರಾಜ ಮತ್ತು ಆರ್.ಬಿ. ವೀರನಗೌಡ ಅಭಿನಯಿಸಿದರು. ಉಳಿದಂತೆ ಎನ್.ಕೆ. ಶರಣಬಸವ, ಹುಲಿರಾಜ, ರಾಘವೇಂದ್ರ, ಕೌಸಲ್ಯ, ಜಯಶ್ರೀ, ಚಂದ್ರಶೇಖರ, ಶ್ರೀನಿವಾಸ ಹಾಗೂ ಎಸ್. ಅಶೋಕ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಮಂದಿರದ ಪದಾಧಿಕಾರಿ ನರಸಿಂಹ ಜೋಶಿ, ಅಡವಿಯಾಚಾರ್, ಸಂಜಯ್ ಮನ್ಸಬ್ದಾರ್, ಪ್ರಹ್ಲಾದ ಜೋಶಿ, ಕೀರ್ತಿ ಸಾಗರ್ ಮಾನ್ವಿಕರ್, ಸುದೇಂದ್ರ ಕಾಟಗೇರಿ, ಪರಿಮಳರಾವ್, ರಾಘವೇಂದ್ರ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೊರನಾಡಿನಲ್ಲಿ ಕನ್ನಡ ರಂಗಭೂಮಿಯ ಸೊಗಡನ್ನು ಪರಿಚಯಿಸಿದ ಬಳ್ಳಾರಿಯ ವಿದ್ಯಾರ್ಥಿಗಳ ನಾಟಕ ಪ್ರದರ್ಶನವು 91ನೇ ನಾಡಹಬ್ಬ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಮನ ಸೆಳೆಯಿತು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಕಿಮ್ಸ್ ಆಸ್ಪತ್ರೆಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ವರದಿ ಕೇಳಿದ ರೈಲ್ವೆ ಇಲಾಖೆ