ಹೊಸಕೋಟೆ: ಬೆಂಗಳೂರು ಹಾಲು ಒಕ್ಕೂಟ ಕೇವಲ ಹೈನೋದ್ಯಮ ಅಷ್ಟೇ ಅಲ್ಲದೆ ಅಲ್ಲಿನ ಲಾಭಾಂಶದಲ್ಲಿ ಸಾಮಾಜಿಕ ಸೇವಾ ಕಾರ್ಯಗಳಿಗೂ ವಿಸ್ತರಿಸಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಮಾತನಾಡಿ, ಸುಮಾರು 6 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರನ ಘಟಕವನ್ನು ಸಿದ್ದಾರ್ಥನಗರದ ಜನರ ಬೇಡಿಕೆಗನುಗುಣವಾಗಿ ನೀಡಲಾಗಿದೆ. ೫ ರು. ನಾಣ್ಯದ ಮೂಲಕ 25 ಲೀಟರ್ ನೀರು ಪಡೆಯಬಹುದು. ಬಮುಲ್ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ಜೊತೆಗೆ ಸಮಾಜದ ಅಭಿವೃದ್ಧಿಗೂ ಮುಂದಡಿ ಇಟ್ಟಿದ್ದು ಹಲವರು ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಡಿ.ಕೆ.ಸುರೇಶ್ ಅವರು ಬಮುಲ್ ಅಧ್ಯಕ್ಷರಾಗಿ ಅಧಿಕಾರ ಪಡೆದ ನಂತರ ಬಮುಲ್ ಸೇವಾ ಚಟುವಟಿಕೆ ಮತ್ತಷ್ಟು ವೇಗ ಕಂಡಿದೆ ಎಂದರು.
ಈ ಸಂದರ್ಭದಲ್ಲಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜ್, ಮಾಜಿ ಅದ್ಯಕ್ಷರಾದ ಡಾ.ಸಿ.ಜಯರಾಜ್, ವಿಜಯ್ ಕುಮಾರ್ ಇತರರು ಹಾಜರಿದ್ದರು.ಫೋಟೋ: 25 ಹೆಚ್‌ಎಸ್‌ಕೆ 3
ಹೊಸಕೋಟೆಯ ಸಿದ್ದಾರ್ಥನಗರದಲ್ಲಿ ಬಮುಲ್ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಶರತ್ ಬಚ್ಛೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಉದ್ಘಾಟಿಸಿದರು.