ಹಗರಿಬೊಮ್ಮನಹಳ್ಳಿ: ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹೋದರತ್ವ... ಇವೆಲ್ಲ ನಮ್ಮ ಸಂವಿಧಾನದ ಆಧಾರ ಸ್ಥಂಭಗಳು. ವಿಶ್ವಕ್ಕೇ ಮಾದರಿಯಾಗಿರುವ ಸಂವಿಧಾನವನ್ನು ಸಮಗ್ರವಾಗಿ ಅನುಷ್ಠಾನಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ ಎಂದು ಶಾಸಕ ನೇಮರಾಜ್ ನಾಯ್ಕ ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಆರ್.ಕವಿತಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಗೀತ ಶಿಕ್ಷಕಿ ಶಾರದ ಮಂಜುನಾಥ, ಕಿಂಡ್ರಿ ಲಕ್ಷ್ಮೀಪತಿ, ಡಾ.ಹಾಲಮ್ಮ ಅರುಣ್, ರೇವಣಸಿದ್ದಾಚಾರಿ, ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಗಮನಾರ್ಹ ಸಾಧನೆಗೈದ ಸರ್ಕಾರಿ ಆದರ್ಶ ವಿದ್ಯಾಲಯದ ಎಂ.ಎಸ್.ರಾಹುಲ್, ಕೆ.ಶಾಬುದ್ಧೀನ್, ಪೌರ ಕಾರ್ಮಿಕರಾದ ಬಸಮ್ಮ, ಗಾಳೆಪ್ಪ, ಆರ್‌ಡಿಪಿಆರ್ ನವೀನ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಕೆ.ಶಿಲ್ಪ, ನಿವೃತ್ತ ಸೈನಿಕ ಹನುಮಂತ ರೆಡ್ಡಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದ ಅತಿ ಹೆಚ್ಚು ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿಗಳಾದ ಅಂಕಸಮುದ್ರ ಸರ್ಕಾರಿ ಪ್ರೌಢಶಾಲೆಯ ನಯನ, ವಟ್ಟಮನಹಳ್ಳಿ ಸ.ಪ್ರೌ.ಶಾಲೆಯ ಎಚ್.ವೀಣಾ ಹಾಗೂ ಪಿಂಜಾರ್ ಹೆಗ್ಡಾಳ್ ಸ.ಪ್ರೌ.ಶಾಲೆಯ ಸೌಂದರ್ಯ ಇವರಿಗೆ ಸರ್ಕಾರದಿಂದ ₹೫೦ ಸಾವಿರ ಪ್ರೋತ್ಸಾಹಧನ ನೀಡುವ ಮೂಲಕ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ಚನ್ನಮ್ಮ ವಿಜಯಕುಮಾರ್, ಮಂಜುಳಾ ಕೃಷ್ಣನಾಯ್ಕ್, ಮಂಗಳಾ ಗೌಡ, ಬಣಕಾರ ಸುರೇಶ, ಬಿ.ಗಂಗಾಧರ, ಜೋಗಿ ಹನುಮಂತಪ್ಪ, ದೀಪಕ್‌ಸಾ ಕಠಾರೆ, ನಾಗರಾಜ ಜನ್ನು, ಪಿ.ಹನುಮಂತಪ್ಪ, ನಾಮ ನಿರ್ದೆಶಕ ಸದಸ್ಯ ಮಂಜುನಾಥ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ಅಧಿಕಾರಿಗಳಾದ ಪ್ರಭಾರ ಬಿಇಒ ಎಂ.ಪ್ರಭಾಕರ, ಸಿಡಿಪಿಒ ಬೋರೇಗೌಡ, ಬಿಸಿಯೂಟ ಅಧಿಕಾರಿ ರಾಜಕುಮಾರ ನಾಯ್ಕ್, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸಿಪಿಐ ವಿಕಾಸ ಲಮಾಣಿ ಇದ್ದರು.
ತಾಪಂ ಇಒ ಪಿ.ವಿಶ್ವನಾಥ, ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ, ಶಿಕ್ಷಕ ಇಟ್ಟಿಗಿ ಪ್ರೌಭಾಕರ, ಕೆ.ಎಂ.ಶಿವಕುಮಾರ ನಿರ್ವಹಿಸಿದರು.