ಎಲ್ಲೆಡೆ ವಾಣಿಜ್ಯ ಸಿಲಿಂಡರ್ ಸಮಸ್ಯೆ: ಕಂಗಾಲಾದ ಉದ್ಯಮಿಗಳು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಅಡುಗೆ ಅನಿಲ ಪೂರೈಕೆ ಸಮಸ್ಯೆ ದಿನದಿಂದ ದಿನಕ್ಕೆಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಇದೀಗ ಸೌದೆ ಒಲೆ ಮೊರೆ ಹೋಗಿದ್ದಾರೆ.
ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದ ಕಳೆದೊಂದು ವಾರದಿಂದ ಅಡುಗೆ ಅನಿಲ ಅಭಾವ ಸಮಸ್ಯೆ ಎಲ್ಲೆಡೆ ತಲೆದೋರಿದೆ. ಗೃಹೋಪಯೋಗಿ ಅಡುಗೆ ಅನಿಲ ಅಭಾವ ಸಮಸ್ಯೆ ಅಷ್ಟೇನು ಇಲ್ಲದಿದ್ದರೂ. ವಾಣಿಜ್ಯ ಬಳಕೆ ಅಡುಗೆ ಅನಿಲ ಸಮಸ್ಯೆ ಹೆಚ್ಚಾಗಿದೆ.ಈ ಸಂಕಷ್ಟ ನಿಭಾಯಿಸಲು ಹೋಟೆಲ್ ಉದ್ದಿಮೆದಾರರು ಇದೀಗ ಸೌದೆ ಒಲೆ ಮೋರೆ ಹೋಗುತ್ತಿದ್ದಾರೆ. ಈಗಾಗಲೇ ಮೆನುವಿ ನಲ್ಲಿ ಹಲವು ತಿನ್ನಿಸುಗಳನ್ನು ಕಡಿತಗೊಳಿಸಲಾಗಿದೆ. ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದಾದ ಮಯೂರ ಹೋಟೆಲ್ ನಲ್ಲಿ ಪ್ರತಿ ದಿನ 4 ರಿಂದ 5 ವಾಣಿಜ್ಯ ಬಳಕೆ ಸಿಲಿಂಡರ್ ಅವಶ್ಯಕತೆ ಇದೆ. ಆದರೆ, ದಿನಕ್ಕೆ 2 ಸಿಲಿಂಡರ್‌ಗಳು ಸಿಗದ ಪರಿಸ್ಥಿತಿ ಇದ್ದು, ಇದಕ್ಕೆ ಪರ‍್ಯಾಯವಾಗಿ ಸೌದೆ ಒಲೆ ಮೋರೆ ಹೋಗಿ, ಮೆನುವಿನಲ್ಲೂ ಬದಲಾವಣೆ ಮಾಡಿದ್ದಾರೆ.
ಹೆಚ್ಚಿನ ಅಡುಗೆ ಅನಿಲ ಅಗತ್ಯವಿರುವ ತಿನಿಸುಗಳಾದ ದೋಸೆ, ಪೂರಿ, ಚೈನಿಸ್ ಫುಡ್, ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ತಿಂಡಿ ಕಡಿತಗೊಂಡಿದೆ. ಇಡ್ಲಿ, ರವೆ ಇಡ್ಲಿ ಸೇರಿದಂತೆ ಕಡಿಮೆ ಅನಿಲ ಬಳಕೆ ತಿಂಡಿ ಗಳಷ್ಟೆ ತಯಾರಿಸಲಾಗುತ್ತಿದೆ.
ದಂಟರಮಕ್ಕಿ ಕನಕವೃತ್ತದ ಅರಮನೆ ಹೋಟೆಲ್‌ನಲ್ಲಿ ದೋಸೆ, ಪೂರಿ ನಿಲ್ಲಿಸಲಾಗಿದೆ. ಗ್ಯಾಂಡ್ ಮಹಾರಾಜ ಹೋಟೆಲ್‌ನಲ್ಲಿ ಮೆನು ಬದಲಾವಣೆ ಜತೆಗೆ ಸೌದೆ ಒಲೆ ಬಳಕೆ ಆರಂಭಿಸಲಾಗಿದೆ. ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸಮೀಪದ ಇಂದಿರಾ ಕ್ಯಾಟೀನ್ ನಲ್ಲೂ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದ ಸೌದೆ ಒಲೆಯಲ್ಲಿ ಅಡುಗೆ ಮಾಡಿ ಗ್ರಾಹಕರಿಗೆ ನೀಡಲಾಗುತ್ತಿದೆ. ಒಟ್ಟಾರೆ, ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಹೋಟೆಲ್‌ಗಳಲ್ಲಿ ಮೆನು ಕಡಿತಗೊಳಿಸಿ ಸೌದೆ ಒಲೆ ಮೋರೆ ಹೋಗುತ್ತಿದ್ದಾರೆ.
--ಬಾಕ್ಸ್--ಬಡವರ ಹೋಟೆಲ್ ಪರಿಸ್ಥಿತಿ ಚಿಂತಾಜನಕ
ನಗರ ಮತ್ತು ಪಟ್ಟಣ ಪ್ರದೇಶಗಳ ಮಧ್ಯಮ ವರ್ಗದ ಹೋಟಲ್‌ಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಕೊರತೆಯಿಂದ ಮೆನುವಿನಲ್ಲಿ ಬದಲಾವಣೆ ಮಾಡಿದರೂ ಸಣ್ಣ ಜಾಗದಲ್ಲಿ ಉದ್ಯಮ ನಡೆಸುವಈ ಹೋಟೆಲ್ ಮಾಲೀಕರಿಗೆ ಸೌದೆ ಒಲೆಯ ಮೊರೆ ಹೋಗಲು ಸಾಧ್ಯವಾಗುತ್ತಿಲ್ಲ. ಉದ್ಯಮಕ್ಕೆ ಬೀಗ ಜಡಿದರೇ, ಜೀವನ ನಡೆಸುವುದೇ ಕಷ್ಟ. ಹಾಗಾಗಿ ಸಣ್ಣ ಹೋಟೆಲ್ ಉದ್ದಿಮೆದಾರರು ಕಂಗಲಾಗಿದ್ದಾರೆಕ್ಯಾಟರಿಂಗ್ ವ್ಯವಸ್ಥೆ ಸ್ಥಗಿತ: ಹೋಟೆಲ್‌ಗೆ ಬರುವ ಗ್ರಾಹಕರಿಗೆ ತಿಂಡಿ ತಿನಿಸು ನೀಡಿದರೇ ಸಾಕೆಂಬ ನಿರ್ಧಾರಕ್ಕೆ ಹೋಟೆಲ್ ಉದ್ದಿಮೆದಾರರು ಬಂದಿದ್ದು, ಕ್ಯಾಟರಿಂಗ್ ಸೌಲಭ್ಯ ನಿಲ್ಲಿಸಿದ್ದಾರೆ.ಸೌದೆ ಕೊರತೆ: ಹಿಂದೆ ಸೌದೆ ಎಲ್ಲೆಂದರಲ್ಲಿ ಸಿಗುತ್ತಿತ್ತು. ಆದರೆ, ಇಂದು ಸೌದೆ ವ್ಯಾಪಾರ ಕಣ್ಮರೆಯಾಗಿದೆ. ಹೋಟೆಲ್ ಉದ್ದಿಮೆದಾರರು ಸೌದೆ ಒಲೆ ಮೋರೆ ಹೋದರು. ಸೌದೆಯ ಸಮಸ್ಯೆಯೂ ಕಾಡುತ್ತಿದೆ.ಪೋಟೋಚಿಕ್ಕಮಗಳೂರಿನ ಮಯೂರ ಹೋಟೆಲ್ ನಲ್ಲಿ ಸೌದೆ ಒಲೆಯಲ್ಲಿ ಸೋಮವಾರ ಅಡಿಗೆ ಮಾಡುತ್ತಿರುವುದು.
