ಕನ್ನಡಪ್ರಭ ವಾರ್ತೆ ಮಂಗಳೂರು
ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದರೂ, ನದಿ, ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಆಗದೆ ಇರುವುದರಿಂದ ಮೀನಿನ ಬೆಲೆ ಗಗನಕ್ಕೇರುವ ನಿರೀಕ್ಷೆಯಿದೆ.ಜೂ.1ರಿಂದ ಜು.31 ಮೀನು ಸಂತಾನೋತ್ಪತ್ತಿ ಕಾಲ ಆಗಿರುವುದರಿಂದ ಈ ನಿಷೇಧ ಹೇರಲಾಗುತ್ತಿದೆ. ಹಾಗಾಗಿ ಶುಕ್ರವಾರದ ಮೊದಲೇ ಎಲ್ಲ ಯಾಂತ್ರೀಕೃತ ಬೋಟುಗಳು ಧಕ್ಕೆಯಲ್ಲಿ ಲಂಗರು ಹಾಕಿವೆ. ಇನ್ಮುಂದೆ 2 ತಿಂಗಳು ಸಮುದ್ರದಲ್ಲಿ ನಾಡ ದೋಣಿಗಳದ್ದೇ ಹವಾ. ಆದರೆ ಬಿರುಗಾಳಿ, ಭಾರಿ ಮಳೆ, ಚಂಡಮಾರುತ ಬಂದರೆ ಇವುಗಳೂ ಸಮುದ್ರಕ್ಕೆ ಇಳಿಯುವಂತಿಲ್ಲ. ಆದರೂ ಉತ್ತಮ ಮೀನು ಸಿಗುವ ನಿರೀಕ್ಷೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ.