ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶನಿವಾರ ಗಿರಣಿಯ ಸಭಾಭವನದಲ್ಲಿ ಲೆಕ್ಕಪರಿಶೋಧಕ ಮಹಾದೇವ ಹುಲಜತ್ತಿಯವರಿಗೆ ಸನ್ಮಾನಿಸಿ ಬೀಳ್ಕೊಡುಗೆ ನಂತರ ಮಾತನಾಡಿದ ಅವರು, ಪ್ರಾಮಾಣಿಕ, ಶ್ರದ್ಧೆ ಕಾರ್ಯಗಳು ಯುವಕರಿಗೆ ಸ್ಪೂರ್ತಿಯಾಗಲಿದ್ದು, ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಆಧ್ಯತೆಯಾಗಲಿದೆ ಎಂದರು.
ಮಹಾದೇವ ಹುಲಜತ್ತಿ ಮಾತನಾಡಿ, ರಾಜ್ಯದಲ್ಲಿಯೇ ನೇಕಾರರೆ ನಡೆಸುತ್ತಿರುವ ಏಕೈಕ ಸಹಕಾರಿ ನೂಲಿನ ಗಿರಣಿಯಾಗಿ ಇಂದಿಗೂ ಬನಹಟ್ಟಿಯಲ್ಲಿ ಕಾರ್ಯನಿರ್ವಹಣೆ ಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಈ ವೇಳೆ ಸುರೇಶ ಹಜಾರೆ, ಕಾಡು ಶಿರೋಳ, ಕಿರಣ ಬಡಿಗೇರ, ರವಿ ಜಮಖಂಡಿ, ರಮೇಶ ಸೊರಗಾಂವಿ, ವಿ.ಬಿ. ಕೊಲ್ಲಾಪುರ, ಎಸ್.ಎಂ. ಡಾಂಗೆ, ಪ್ರಿಯಾಂಕಾ ಬಡಿಗೇರ, ರೇಷ್ಮಾ ಹಳ್ಳೂರ ಸೇರಿದಂತೆ ಅನೇಕರಿದ್ದರು.