ಕನ್ನಡಪ್ರಭ ವಾರ್ತೆ ಅಥಣಿ
ಪರಿಶ್ರಮದಿಂದ ಪ್ರಗತಿ ಸಾಧಿಸಿ. ಸಾಧನೆಯಲ್ಲಿ ಸಂಪಾದಿಸಿದ್ದನ್ನು ಸಮಾಜ ಸಂಘಟನೆಗೆ ದಾನ ಮಾಡುವ ಪರಂಪರೆಯಲ್ಲಿ ಬಣಜಿಗ ಸಮಾಜ ಎತ್ತಿದ ಕೈ ಎಂದು ಹಿರಿಯ ಸಾಹಿತಿ ಸಂಗಮನಾಥ ಲೋಕಾಪೂರ ಹೇಳಿದರು.ಪಟ್ಟಣದಲ್ಲಿಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘ ಅಥಣಿ ತಾಲೂಕು ಘಟಕದಿಂದ ಸಾಧಕರ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶರಣರ ತತ್ವಗಳನ್ನು ಚಾಚು ತಪ್ಪದೆ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ಜೀವನ ನಡೆದ ಭವ್ಯ ಇತಿಹಾಸ ಬಣಜಿಗ ಸಮಾಜಕ್ಕಿದೆ. ಈ ಪರಂಪರೆಯ ಇತಿಹಾಸ ಅರಿತು ಇಂದಿನ ಯುವ ಜನಾಂಗ ಸಮಾಜದ ಪ್ರಗತಿಗೆ ಮುಂದಾಗಬೇಕು ಎಂದು ಕರೆ ನೀಡಿದರು.ಸಮಾರಂಭ ಉದ್ಘಾಟಿಸಿದ ಈಶ್ವರ ಬಿದರಿ ಮಾತನಾಡಿ, ನಮ್ಮ ಪರಂಪರೆಗಳ ಬಗ್ಗೆ ಸಮಾಜದ ಚಿಕ್ಕಮಕ್ಕಳಲ್ಲಿ ಪಾಲಕರು ಜಾಗೃತಿ ಮೂಡಿಸಬೇಕು. ಸಮಾಜ ಸಂಘಟನೆಗಾಗಿ ಯುವಕರನ್ನು ಮುಂಚೂಣಿಯಲ್ಲಿ ತರಬೇಕೆಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳಸಿದ್ಧ ಮಹಾಸ್ವಾಮೀಜಿ ಮಾತನಾಡಿ, ವೀರಶೈವ-ಲಿಂಗಾಯತ ಮಠಗಳ ಪ್ರಗತಿಗೆ ಬಣಜಗ ಸಮಾಜದ ಅಪಾರ ಕೊಡುಗೆ ಇದೆ ಎಂದು ಹೇಳಿದರು.ಸಂಘದ ಕಾರ್ಯಧ್ಯಕ್ಷ ಸಂಗಪ್ಪ ಉಣ್ಣಿ ನೇತೃತ್ವ ವಹಿಸಿದ್ದರು. ಸಂಘದ ಕಾರ್ಯಧ್ಯಕ್ಷ ಶಂಕರ ಬುರ್ಲಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶಿವಶಂಕರ ಹಂಜಿ, ಅಲ್ಲಪ್ಪ ನಿಡೋಣಿ, ಬಾಬುರಾವ ಮಹಾರಾಜರ ಭಾಗವಹಿಸಿದ್ದರು. ಸಮಾಜದ ಮುಖಂಡರಾದ ಡಾ.ಮಲ್ಲಿಕಾರ್ಜುನ ಹಂಜಿ, ಅಶೋಕ ಬುರ್ಲಿ, ಅನೀಲ ಮೆಣಸಿ, ಈಶ್ವರ ಪಾರಶೆಟ್ಟಿ, ಚಂದ್ರಕಾಂತ ಗುಡೋಡಗಿ, ಮಹೇಶ ಚುನಮುರಿ, ಅಕ್ಷಯ ಬುರ್ಲಿ, ಸಂಪತ್ತ ಸೋಳಸಿ, ರೇವನಸಿದ್ಧ ದೂಪ, ಜಗದೀಶ ಗೆಜ್ಜಿ, ಅನವಿರ ಅನೆಪನವರ ಇತರರು ಇದ್ದರುಡಾ.ಪ್ರಿಯವಂದಾ ಅಣೆಪ್ಪನವರ, ಐರಾವತಿ ಕೌಲಾಪೂರ ನಿರೂಪಿಸಿದರು. ಸ್ವಾಗತ ಸಂಗಪ್ಪ ಉಣ್ಣಿ, ಮಹೇಶ ಚುನಮುರಿ ಸಂಘದ ಕುರಿತು ಮಾತನಾಡಿದರು. ಅಮೃತಾ ದೂಪ ವಂದಿಸಿದರು.