ಬಣಜಿಗ ಸಮಾಜ ಸ್ವಾಭಿಮಾನಕ್ಕೆ ಹೆಸರುವಾಸಿ: ಎ. ಮುರಿಗೆಪ್ಪ

KannadaprabhaNewsNetwork |  
Published : Jun 01, 2026, 02:15 AM IST
ಸಮಾರಂಭವನ್ನು ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಬಣಜಿಗ ಸಮಾಜದ ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವು ಈಗ ಪ್ರಬಲ ಆಯುಧವಾಗಿದೆ. ಮಕ್ಕಳನ್ನು ಐಎಎಸ್‌, ಐಪಿಎಸ್. ಕೆಎಎಸ್‌ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾಣಿಸಿಕೊಳ್ಳುವಂತೆ ಬೆಳೆಸುವುದು ಅಗತ್ಯವಾಗಿದೆ.

ಲಕ್ಷ್ಮೇಶ್ವರ: ಬಣಜಿಗರು ಸಮಾಜದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮ ಕೈಲಾದ ಸಹಾಯ ಸಹಕಾರ ನೀಡಬೇಕು. ಬಣಜಿಗರು ಸ್ವಾಭಿಮಾನಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಹಂಪಿಯ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ತಿಳಿಸಿದರು.

ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ಕಾಲೇಜು ಸಭಾಭವನದಲ್ಲಿ ಭಾನುವಾರ ನಡೆದ ಬಣಜಿಗ ಸಮಾಜದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಬಣಜಿಗ ಸಮಾಜದ ಮಹಿಳೆಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವು ಈಗ ಪ್ರಬಲ ಆಯುಧವಾಗಿದೆ. ಮಕ್ಕಳನ್ನು ಐಎಎಸ್‌, ಐಪಿಎಸ್. ಕೆಎಎಸ್‌ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾಣಿಸಿಕೊಳ್ಳುವಂತೆ ಬೆಳೆಸುವುದು ಅಗತ್ಯವಾಗಿದೆ. ಮಗುವಿಗೆ ಸಂಸ್ಕಾರ, ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.

ಬಣಜಿಗರು ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಬಣಜಿಗ ಭವನ ನಿರ್ಮಾಣ ಮಾಡಿದಲ್ಲಿ ಸಭೆ, ಸಮಾರಂಭ ಮಾಡುವ ಮೂಲಕ ಸಂಘಟನೆಗೆ ಒತ್ತು ನೀಡುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ಮುಕ್ತಿಮಂದಿರದ ಧರ್ಮಾಧಿಕಾರಿ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಲೋಹಿತ ನೆಲವಿಗಿ, ಬಸವರಾಜ ವಡಕಣ್ಣವರ, ಶಿಕ್ಷಕ ಜೆ.ಎಸ್. ರಾಮಶೆಟ್ಟರ ಮಾತನಾಡಿದರು.ಈ ವೇಳೆ ಮಹಿಳಾ ಘಟಕ ಅಧ್ಯಕ್ಷೆ ರತ್ನಾ ಕರ್ಕಿ, ಪ್ರತಿಮಾ ಮಹಾಜನಶೆಟ್ಟರ ಇದ್ದರು. ಶಿವಯೋಗಿ ಗಾಂಜಿ, ಬಸವರಾಜ ಬೆಂಡಿಗೇರಿ, ಚಂದ್ರಶೇಖರ ಮಹಾಜನಶೆಟ್ಟರ, ಎಸ್.ವಿ. ಅಂಗಡಿ, ಪ್ರಕಾಶ ವಾಲಿ, ವಿಜಯ ಕೋಟಗಿ, ಪ್ರವೀಣ ರೋಣದ, ವಿರುಪಾಕ್ಷಪ್ಪ ತೆಗ್ಗಳ್ಳಿ, ಬಸವರಾಜ ಸಂಗಪ್ಪಶೆಟ್ಟರ, ಶಂಕರ ಸಿಳ್ಳಿನ, ಸಂತೋಷ ಕಾಶೆಟ್ಟಿ, ವಿಜಯ ಬೂದಿಹಾಳ, ಕೊಟ್ರೇಶ ಕತ್ತಿ, ನಿರ್ಮಲಾ ಅರಳಿ, ಅಶ್ವಿನಿ ಅಂಕಲಕೋಟಿ, ಅನೇಕರು ಇದ್ದರು. ನೀಲಕ್ಕ ಕುಂಬಿ ಸ್ವಾಗತಿಸಿದರು, ಗಾಯಿತ್ರಿ ವಡಕಣ್ಣವರ ಪ್ರಾಥಿಸಿದರು. ಬಸವರಾಜ ಕತ್ತಿಶೆಟ್ರ, ರೇಖಾ ವಡಕಣ್ಣವರ ನಿರೂಪಿಸಿದರು.

ವಿಶ್ವ ತಂಬಾಕು ನಿಷೇಧ ದಿನಾಚರಣೆ

ಗದಗ: ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ಅಂಗವಾಗಿ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಾಕ್‌ಥಾನ್- 2026 ಕಾರ್ಯಕ್ರಮ ಜರುಗಿತು.ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎನ್. ಪಾಟೀಲ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದರು.ಸಂಸ್ಥೆಯ ನಿರ್ದೇಶಕ ಡಾ. ವಿ.ಎಂ. ಪಾಟೀಲ ಮಾತನಾಡಿ, ಯುವಜನರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪಿ.ಆರ್. ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಪರವಾಗಿ ಹಂಪಿಯಲ್ಲಿ ಕಾಂಗ್ರೆಸ್‌ನಿಂದ ಪೂಜೆ
ವಿಜಯನಗರ ಜಿಲ್ಲೆಯಲ್ಲಿ ಇಂದಿನಿಂದ 1612 ಶಾಲೆ ಆರಂಭ