ಹಕ್ಕಿನಾಳು ಗ್ರಾಮದಲ್ಲಿ ಬಿರುಗಾಳಿಗೆ ಬಾಳೆತೋಟ ನಾಶ

KannadaprabhaNewsNetwork |  
Published : May 01, 2026, 01:15 AM IST
ಪೋಟೋ 4 : ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ಭಾರೀ ಬಿರುಗಾಳಿಗೆ 3 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಫಸಲು ನಾಶವಾಗಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ಭಾರೀ ಬಿರುಗಾಳಿಗೆ 3 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಫಸಲು ನಾಶವಾಗಿದ್ದು, ಲಕ್ಷಗಟ್ಟಲೇ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಕೃಷ್ಣಪ್ಪನವರ ಕುಟುಂಬ ಇದೀಗ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಭಾರೀ ಬಿರುಗಾಳಿಯಿಂದಾಗಿ 50 ಲಕ್ಷ ರುಪಾಯಿಗೂ ಅಧಿಕ ಮೌಲ್ಯದ ಬಾಳೆ ಫಸಲು ಹಾಳಾಗಿದೆ ಎಂದು ಅಂದಾಜಿಸಲಾಗಿದೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ಭಾರೀ ಬಿರುಗಾಳಿಗೆ 3 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಫಸಲು ನಾಶವಾಗಿದ್ದು, ಲಕ್ಷಗಟ್ಟಲೇ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಕೃಷ್ಣಪ್ಪನವರ ಕುಟುಂಬ ಇದೀಗ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಭಾರೀ ಬಿರುಗಾಳಿಯಿಂದಾಗಿ 50 ಲಕ್ಷ ರುಪಾಯಿಗೂ ಅಧಿಕ ಮೌಲ್ಯದ ಬಾಳೆ ಫಸಲು ಹಾಳಾಗಿದೆ ಎಂದು ಅಂದಾಜಿಸಲಾಗಿದೆ.

ರೈತ ಕೃಷ್ಣಪ್ಪನವರ ಕುಟುಂಬ 3 ಎಕರೆ ಜಮೀನಿನಲ್ಲಿ 12 ಲಕ್ಷ ರುಪಾಯಿ ಲಕ್ಷ ಖರ್ಚು ಮಾಡಿ 3000 ಬಾಳೆ ಗಿಡ ನಾಟಿ ಮಾಡಿದ್ದರು. ನಿರೀಕ್ಷೆಗೂ ಮೀರಿ ಬಾಳೆತೋಟ ಬೆಳೆದು ನಿಂತಿತ್ತು.

50 ಲಕ್ಷ ಆದಾಯದ ನಿರೀಕ್ಷೆ:

ಆದರೆ ನಿನ್ನೆ ಮೊನ್ನೆ ಬೀಸಿದ ಬಿರುಗಾಳಿಗೆ ಫಸಲಿಗೆ ಬಂದಿದ್ದ ರೈತನ ಬಾಳೆ ತೋಟ ಕ್ಷಣಾರ್ಧದಲ್ಲೇ ಸಂಪೂರ್ಣ ನೆಲಕಚ್ಚಿ ಹೋಗಿದೆ. ಮೂರು ಸಾವಿರ ಬಾಳೆ ಗಿಡಗಳು ಧರೆಗುರುಳಿದಿವೆ. ಇದರಿಂದ ರೈತನ ಕುಟುಂಬ ಕಂಗಾಲಾಗಿದ್ದು, ಬಿರುಗಾಳಿಯಿಂದ 50 ಲಕ್ಷ ರುಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದದೆ.

ಬಂಜರು ಭೂಮಿಯಲ್ಲಿ ಬಾಳೆ ಬೆಳೆದಿದ್ದ ರೈತ:

ಕೃಷಿಯಲ್ಲಿ ಸಾಧನೆ ಮಾಡಬೇಕು ಎನ್ನುವ ಆಸೆಯಿಂದ ಸರ್ಕಾರದಿಂದ ಮಂಜೂರಾಗಿರುವ ಬಂಜರು ಭೂಮಿಯನ್ನು ಸರಿಪಡಿಸಿ 2 ಕಿ.ಮೀ. ದೂರದಲ್ಲಿ ಬೋರ್‌ವೆಲ್ ಕೊರೆಯಿಸಿ ಬಾಳೆ ಬೆಳೆದಿದ್ದರು. ಫಸಲು ಚೆನ್ನಾಗಿ ಬಂದು, ಬಾಳೆಗಿಡಗಳು ಗೊನೆಯೊಡೆದು 30-40 ದಿನಗಳಲ್ಲಿ ಫಸಲು ಬರುತ್ತಿತ್ತು ಎಂದು ಅಲವತ್ತು ತೋಡಿಕೊಂಡರು.

ನಷ್ಟ ಪರಿಹಾರಕ್ಕೆ ಒತ್ತಾಯ:

ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ ಎಂದು ಕೃಷ್ಣಪ್ಪ ಮನವಿ ಮಾಡಿದ್ದಾರೆ.

ತಹಸೀಲ್ದಾರ್ ಭೇಟಿ ಪರಿಶೀಲನೆ:

ಬಿರುಗಾಳಿಯಿಂದ ನಾಶವಾಗಿರುವ ಬಾಳೆತೋಟಕ್ಕೆ ನೆಲಮಂಗಲ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಭೇಟಿ ನೀಡಿ ಪರಿಶೀಲಿಸಿ, ಶೇ.90 ಬೆಳೆ ನಾಶವಾಗಿದ್ದು, ಕೂಡಲೇ ಈ ಬಗ್ಗೆ ವರದಿ ತಯಾರಿಸಿ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸುತ್ತೇನೆ. ಇದೇ ರೀತಿ ತಾಲೂಕಿನಲ್ಲಿ ಗಾಳಿ ಮಳೆಯಿಂದಾಗಿ ರೈತರಿಗೆ ತೊಂದರೆಯಾಗಿದ್ದರೆ ಸಂಬಂಧಪಟ್ಟ ವಿಎ, ಆರ್ ಐಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದರೆ ಪರಿಹಾರ ಒದಗಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಪೋಟೋ 4 :

ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ಭಾರೀ ಬಿರುಗಾಳಿಗೆ 3 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಫಸಲು ನಾಶವಾಗಿರುವುದು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗೋಡು ಬಳಿ ಕಾಡಾನೆಗಳ ಸಂಚಾರ
ಬಿಸಿಲಿನ ಹಿನ್ನೆಲೆ ಬೇಲೂರಲ್ಲಿ ಪ್ರವಾಸಿಗರು ಇಳಿಮುಖ