ಅರಸೀಕೆರೆ: ಬಾಣಾವರದಲ್ಲಿ ಕಳೆದ 6 ರಿಂದ 15 ರ ವರೆಗೆ 11 ದಿನಗಳು ಶ್ರೀರಾಮ ಮಂದಿರದಲ್ಲಿ ವಿಜೃಂಭಣೆಯಲ್ಲಿ ಹಮ್ಮಿಕೊಂಡಿದ್ದ ವಸಂತ ಶ್ರೀ ರಾಮೋತ್ಸವ ವೈಭವದಿಂದ ನಡೆದು ಮಂಗಳವಾರ ಶ್ರೀ ರಾಮ ಪಟ್ಟಾಭಿಷೇಕದೊಂದಿಗೆ ತೆರೆ ಬಿದ್ದಿತು, ಈ ಯಶಸ್ಸಿಗೆ ಸಮಾಜ ಬಾಂಧವರು ಶ್ರೀರಾಮ ಭಕ್ತರ ಸಹಕಾರ ಕಾರಣವಾಗಿದೆ. ಎಂದು ಬಾಣಾವರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಎಸ್ ಗೋಪಾಲಕೃಷ್ಣ ಹೇಳಿದರು
ಕಾರ್ಯದರ್ಶಿ ವೇದ ಬ್ರಹ್ಮ ಹರೀಶ್ ಶರ್ಮಾ ನಿತ್ಯ ಕಾರ್ಯಕ್ರಮಗಳು ನಡೆಯಲು ಸಮಯ ಪಾಲನೆ ಬಹಳ ಮುಖ್ಯವಾಗಿತ್ತು. ಎಲ್ಲರೂ ಸಹಕರಿಸಿದರು ಮತ್ತು ಇಂದಿನ ಶ್ರೀರಾಮ ಪಟ್ಟಾಭಿಷೇಕ ಹೋಮಾದಿ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು ಇದು ಎಲ್ಲರೂ ತೋರಿದ ಶ್ರದ್ಧಾಭಕ್ತಿ ಕಾರಣವಾಗಿದೆ. ಎಂದರು.
ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಅರಸೀಕೆರೆ ಬೇರೆಯಲ್ಲ ಬಾಣವರ ಬೇರೆ ಅಲ್ಲ ಇಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಬಹಳ ವ್ಯವಸ್ಥಿತವಾಗಿ ಶ್ರದ್ಧಾಭಕ್ತಿಯಿಂದ ನಡೆಸುತ್ತಾ ಬಂದಿದ್ದೀರಿ ನಮ್ಮ ತಾಲೂಕು ಬ್ರಾಹ್ಮಣ ಸಂಘದಿಂದ ನಿಮಗೆ ಸಹಕಾರವಿರುತ್ತದೆ, ಇಂದು ನಮಗೂ ಈ ಒಂದು ಸುಸಂದರ್ಭದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಕ್ಕೆ ಕೃತಜ್ಞರಾಗಿದ್ದೇವೆ ಎಂದರುತಾಲೂಕು ಕಾರ್ಯದರ್ಶಿ ಸುಬ್ರಹ್ಮಣ್ಯ ನಿರ್ದೇಶಕರಾದ ಹರೀಶ್ ಡಿ.ಎಸ್ ರಾಮಸ್ವಾಮಿ, ಬಾಣಾವರ ಸಂಘದ ಸಹ ಕಾರ್ಯದರ್ಶಿ, ಬಿ ಎಸ್ ಸುಬ್ಬಾಭಟ್ಟ ಮೊದಲಾದವರು ಉಪಸ್ಥಿತರಿದ್ದರು.