ಚತುಷ್ಪಥವಾಗಲಿದೆ ಬೆಂಗಳೂರು ತುಮಕೂರು ರೈಲು ಮಾರ್ಗ

KannadaprabhaNewsNetwork |  
Published : Apr 26, 2026, 02:15 AM IST
್ಿ | Kannada Prabha

ಸಾರಾಂಶ

ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಸಚಿವ ವಿ. ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯಸಚಿವ ವಿ. ಸೋಮಣ್ಣ ತಿಳಿಸಿದರು.

ಮಾರುತಿನಗರ ಹಾಗೂ ಕ್ಯಾತ್ಸಂದ್ರ ನಿಲ್ದಾಣದ ಬಳಿ ಎರಡು ಪಾದಚಾರಿ ಸುರಂಗ ಮಾರ್ಗಳ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.

ಯಲಹಂಕದಿಂದ ಯಶವಂತಪುರ, ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಹೊಸ ಮೆಮು ರೈಲು ಸೇವೆಯನ್ನುಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಯಲಹಂಕದಲ್ಲಿ ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ. ತುಮಕೂರಿನ ತಿಮ್ಮರಾಜನಹಳ್ಳಿಯಲ್ಲಿ ಇಂಟಿಗ್ರೇಟೆಡ್ ಕಂಟೈನಲ್ ಲಾಜಿಸ್ಟಿಕ್ ನಿರ್ಮಾಣಗೊಳ್ಳಲಿದ್ದು ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ರಾಯದುರ್ಗ- ತುಮಕೂರು ಹೊಸ ರೈಲು ಮಾರ್ಗ ಯೋಜನೆಯ ಕಾಮಗಾರಿ ತ್ವರಿತವಾಗಿ ಸಾಗುತ್ತಿದ್ದು ಈ ಯೋಜನೆಯು ಡಿಸೆಂಬರ್ 2027ರ ವೇಳೆಗೆ ಪೂರ್ಣಗೊಳ್ಳಲಿದೆ. ತುಮಕೂರು - ದಾವಣಗೆರೆ- ಚಿತ್ರದುರ್ಗ ಹೊಸ ರೈಲು ಯೋಜನೆಯು ಸಹ ತ್ವರಿತಗತಿಯಿಂದ ಸಾಗುತ್ತಿದೆ. ಈ ಪಾದಚಾರಿ ಸಬ್‌ ವೇಗಳ ನಿರ್ಮಾಣದಿಂದ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಲಭವಾಗಿ ಹಳಿಯನ್ನು ದಾಟಲು ಅನುಕೂಲವಾಗಲಿದೆ ಎಂದರು.

ರೈಲುಹಳಿಗಳ ಬಳಿ ಅತಿಕ್ರಮ ಪ್ರವೇಶ ತಡೆಗಟ್ಟಿ ಸುರಕ್ಷತೆ ಹೆಚ್ಚಿಸುತ್ತದೆ. ಕ್ಯಾತ್ಸಂದ್ರ ರೈಲು ನಿಲ್ದಾಣದ ಸಮೀಪದ ಹಳೆಯ ಲೆವೆಲ್ ಕ್ರಾಸಿಂಗ್ ಬಳಿ ಸುಮಾರು 5.5 ಕೋಟಿ ರು.ವೆಚ್ಚದಲ್ಲಿ ಪಾದಚಾರಿ ಸಬ್‌ ವೇ ನಿರ್ಮಿಸಲಾಗುತ್ತಿದೆ ಎಂದರು.ತುಮಕೂರು ಮತ್ತು ಕ್ಯಾತ್ಸಂದ್ರ ರೈಲು ನಿಲ್ದಾಣಗಳ ನಡುವೆ ಮಾರುತಿನಗರದಲ್ಲಿ ಸುಮಾರು 3.4 ಕೋಟಿ ವೆಚ್ಚದಲ್ಲಿ ಪಾದಚಾರಿ ಸಬ್‌ ವೇ ನಿರ್ಮಿಸಲಾಗುವುದು. ಈ ಎರಡು ಕಾಮಗಾರಿಗಳು ಜನವರಿ 2027 ಕ್ಕೆ ಪೂರ್ಣಗೊಳ್ಳಲಿದೆ ಎಂದರು. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಿಗೆ ಸೋನಿಯಾ, ಪ್ರಿಯಾಂಕಾ ಅಷ್ಟೇ ಮಹಿಳೆಯರು: ಹರೀಶ್
ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಮಾಡಿಕೊಳ್ಳಲಿ