ಬಂಗಾರಪ್ಪ ಅವರು ನಾಡಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ: ಬೇಳೂರು ವಾಗ್ದಾಳಿ

KannadaprabhaNewsNetwork | Published : Mar 21, 2024 1:02 AM

ಸಾರಾಂಶ

ಬಂಗಾರಪ್ಪ ಅವರು ನಾಡಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಬಂಗಾರಪ್ಪ ಪುತ್ರಿಯಾದ ಗೀತಾ ಅವರ ಗೆಲುವಿಗೆ ಆ ಕೊಡುಗೆಯೇ ಸಾಕ್ಷಿಯಾಗಲಿದೆ. ಗೀತಾ ಈ ಜಿಲ್ಲೆಗೆ ಏನೂ ಮಾಡಿದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಸಂಸದರಾಗುವ ಮೊದಲು ಬಿ.ವೈ. ರಾಘವೇಂದ್ರ ಅವರು ಈ ಜಿಲ್ಲೆಗೆ ಏನು ಮಾಡಿದ್ದರು ಎಂದು ಶಿವಮೊಗ್ಗದಲ್ಲಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬಂಗಾರಪ್ಪ ಅವರು ನಾಡಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಬಂಗಾರಪ್ಪ ಪುತ್ರಿಯಾದ ಗೀತಾ ಅವರ ಗೆಲುವಿಗೆ ಆ ಕೊಡುಗೆಯೇ ಸಾಕ್ಷಿಯಾಗಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ನಗರದ ಲಗನಾ ಕಲ್ಯಾಣ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಗೀತಾ ಈ ಜಿಲ್ಲೆಗೆ ಏನೂ ಮಾಡಿದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಸಂಸದರಾಗುವ ಮೊದಲು ಬಿ.ವೈ. ರಾಘವೇಂದ್ರ ಅವರು ಈ ಜಿಲ್ಲೆಗೆ ಏನು ಮಾಡಿದ್ದರು ಎಂದು ಪ್ರಶ್ನಿಸಿದರು.

ಬಸ್‌ಸ್ಟ್ಯಾಂಡ್‌ ರಾಘು ಕೇವಲ ಸುಳ್ಳು ಹೇಳುತ್ತಾರೆ. ಜಿಲ್ಲೆಯಲ್ಲಿ ಭಾರಿ ಅಭಿವೃದ್ಧಿ ಮಾಡಿದ್ದೇವೆ ಅಂತಾರೆ. ಇನ್ನು ಹೈವೇ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಅಭ್ಯರ್ಥಿಗೆ ದಾಖಲೆ ಸಮೇತ ಉತ್ತರ ಕೊಡುತ್ತೇವೆ. ಯಡಿಯೂರಪ್ಪ ಹಾಗೂ ಅವರ ಕುಟುಂಬ ಹಡಬೆ ದುಡ್ಡು ಮಾಡಿ ರಾಶಿ ಹಾಕಿಕೊಂಡಿದ್ದಾರೆ. ಆ ದುಡ್ಡಿನಲ್ಲಿ ಚುನಾವಣೆ ಗೆಲ್ಲುತ್ತಿದ್ದಾರೆ. ಇದು ಈ ಬಾರಿ ನಡೆಯಲ್ಲ ಎಂದರು.

ಬಂಗಾರಪ್ಪ ನಾಯಕತ್ವದಲ್ಲಿ ಹಲವು ಜನಪರ ಯೋಜನೆ ಈ ರಾಜ್ಯಕ್ಕೆ ಕೊಟ್ಟಿದ್ದಾರೆ. ಈಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಜನಪರ ಯೋಜನೆ ಕೊಟ್ಟಿದ್ದಾರೆ. ಕೇಂದ್ರ ಹಾಗೂ ರಾಜ್ಯದ ನಾಯಕರು ಸಮರ್ಥವಾದ‌ ಅಭ್ಯರ್ಥಿ ಕೊಟ್ಟಿದ್ದಾರೆ. ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಪಕ್ಷ ಹಾಗೂ ಅಭ್ಯರ್ಥಿ ಮೇಲೆ ತಾರದೇ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮ ವಹಿಸಬೇಕಿದೆ ಎಂದು ಕರೆ ನೀಡಿದರು.

ಈಶ್ವರಪ್ಪರನ್ನು ರಾಜಕೀಯದಿಂದ ತೆಗೆದರು:

ಯಡಿಯೂರಪ್ಪ ಹಾಗೂ ಅವರ ಕುಟುಂಬ ನನ್ನನ್ನು 10 ವರ್ಷ ರಾಜಕೀಯದಿಂದ ತೆಗೆದರು. ಮನೆಯಲ್ಲಿ ಕೂರುವ ಹಾಗೆ ಮಾಡಿದ್ದರು. ಈಗ ಈಶ್ವರಪ್ಪ ಅವರನ್ನು ತೆಗೆದಿದ್ದಾರೆ. ಈಶ್ವರಪ್ಪ ಮಾತೆತ್ತಿದರೆ ಹಿಂದುತ್ವ ಅಂತಾರೆ. ಅಂಥವರನ್ನೇ ಯಡಿಯೂರಪ್ಪ ರಾಜಕೀಯವಾಗಿ ಮುಗಿಸಿದ್ದಾರೆ. ಈಶ್ವರಪ್ಪ ಅವರಿಗೆ ಇದು ಬೇಕಾಗಿತ್ತಾ ಎಂದು ಲೇವಡಿ ಮಾಡಿದರು.

- - - (-ಫೋಟೋ: ಗೋಪಾಲಕೃಷ್ಣ ಬೇಳೂರು)

Share this article