- ಗೋರ್ ಸೇನಾ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾತಿ ಗಣತಿ ಸರಿಯಾಗಿ ಮಾಡದೇ ಪರಿಶಿಷ್ಟರ ಒಳಮೀಸಲಾತಿ ಜಾರಿಗೊಳಿಸಬಾರದು ಎಂದು ಗೋರ ಸೇನಾ ಜಿಲ್ಲಾ ಘಟಕವು ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಬಂಜಾರಾ ಸಮಾಜದ ಮುಖಂಡರು ಮಂಗಳವಾರ ಮುಖ್ಯಮಂತ್ರಿಗೆ ಬರೆದ ಮನವಿ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸಲ್ಲಿಸಿದ್ದು, ಸರಿಯಾದ ಅಧ್ಯಯನ ನಡೆಸದೇ ಒಳಮಿಸಲಾತಿ ಜಾರಿಗೊಳಿಸಬಾರದು.ಒಳಮೀಸಲಾತಿ ಹಾಗೂ ವರ್ಗೀಕರಣವು ಬಂಜಾರಾ ಸಮಾಜದ ವಿರೋಧಿಯಾಗಿದೆ. ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಲು ತಂದ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.ಆಲ್ ಇಂಡಿಯಾ ಬಂಜಾರಾ ಸಮಾಜದ ಜಿಲ್ಲಾಧ್ಯಕ್ಷ ಗೋವರ್ಧನ್ ರಾಠೋಡ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿ ಬನಸಿಧರ್ ರಾಠೋಡ್, ಗೋರ ಸೇನಾ ಜಿಲ್ಲಾಧ್ಯಕ್ಷ ಉತ್ತಮ ಜೆ ಜಾಧವ್, ಜಿಲ್ಲಾ ಉಪಾಧ್ಯಕ್ಷ ನೀಲಕಂಠ ರಾಠೋಡ್, ಪ್ರಧಾನ ಕಾರ್ಯದರ್ಶಿ ರಮೇಶ್ ಎಂ ಜಾಧವ್, ಸಂತೋಷ್ ಎನ್ ಬಾಣೋತ್, ಬಾಬುರಾವ್ ಕೆ ಜಾಧವ್, ಸುನೀಲ ಎಸ್ ರಾಠೋಡ್, ಅಶೋಕ್ ತಳಘಾಟ, ಕೃಷ್ಣ ರಾಠೋಡ್, ಸರಿತಾ ರಾಠೋಡ್, ನಿರ್ಮಲಾ ರಾಠೋಡ್, ಧನರಾಜ್ ಅಲೀಪುರ್ ಮುಂತಾದವರು ಉಪಸ್ಥಿತರಿದ್ದರು.
--ಚಿತ್ರ 15ಬಿಡಿಆರ್54
ಪರಿಶಿಷ್ಟರ ಒಳಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಗೋರ ಸೇನಾ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.--