ಬಂಜಾರ ಸ್ವಾಭಿಮಾನಿ ಸಮಾಜ

KannadaprabhaNewsNetwork |  
Published : Dec 18, 2023, 02:00 AM IST
ಹೊಸಪೇಟೆಯಲ್ಲಿ ಭಾನುವಾರ ನಡೆದ ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾಸಂಘದ ವಿಜಯನಗರ ಜಿಲ್ಲಾ ಘಟಕಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು. | Kannada Prabha

ಸಾರಾಂಶ

ಬಂಜಾರ ಸಮಾಜ ಶ್ರಮಜೀವಿ ಸಮಾಜವಾಗಿದ್ದು, ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಈ ಸಮಾಜದವರು ಶಿಕ್ಷಣ ಪಡೆದು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳನ್ನು ಪಡೆಯಬೇಕು. ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಚೇತರಿಕೆ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು.

ಹೊಸಪೇಟೆ: ಬಂಜಾರ ಸ್ವಾಭಿಮಾನಿ ಸಮಾಜವಾಗಿದೆ. ಈ ಸಮಾಜದ ಶ್ರೇಯೋಭಿವೃದ್ಧಿಗಾಗಿ ವಿಜಯನಗರ ಜಿಲ್ಲೆಯಲ್ಲಿ ಶ್ರಮಿಸಲಾಗುವುದು. ಹೊಸಪೇಟೆಯಲ್ಲಿ ಬಂಜಾರ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.

ನಗರದ ಒಳಾಂಗಣ ಕ್ರೀಡಾಂಗಣದ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಲಂಬಾಣಿ ಸೇವಾ ಸಂಘದ ವಿಜಯನಗರ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಬಂಜಾರರಿಗೆ ಅನುಕೂಲ ಮಾಡಲು ರಾಜ್ಯ ಸರ್ಕಾರದ ಬಳಿ ಚರ್ಚಿಸುವೆ. ಸಮಾಜದ ಏಳ್ಗೆಗಾಗಿ ಜಿಲ್ಲಾ ಕೇಂದ್ರದಲ್ಲಿ ಭವನ ನಿರ್ಮಾಣಕ್ಕೆ ತಾಂಡಾ ಅಭಿವೃದ್ಧಿ ನಿಗಮದ ಜತೆಗೆ ಚರ್ಚಿಸಿ, ಸರ್ಕಾರ ಮಟ್ಟದಿಂದ ಮಂಜೂರು ಮಾಡಿಸುವೆ ಎಂದರು.

ಬಂಜಾರ ಸಮಾಜ ಶ್ರಮಜೀವಿ ಸಮಾಜವಾಗಿದ್ದು, ದುಡಿಮೆಯನ್ನೇ ನೆಚ್ಚಿಕೊಂಡಿದ್ದಾರೆ. ಈ ಸಮಾಜದವರು ಶಿಕ್ಷಣ ಪಡೆದು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳನ್ನು ಪಡೆಯಬೇಕು. ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಚೇತರಿಕೆ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಶಿವಪ್ರಕಾಶ್ ಮಹಾರಾಜ ಹಾಗೂ ವಿಷ್ಣು ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಬಂಜಾರ ಸಮಾಜ ಧಾರ್ಮಿಕ, ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರಕೃತಿ ಆರಾಧಕರಾಗಿರುವ ಈ ಸಮಾಜದ ಕುಲಗುರು ಸಂತ ಸೇವಾಲಾಲ್‌ರ ಆದರ್ಶಗಳನ್ನು ಮೈಗೂಡಿಸಿಕೊಂಡು ಶಾಂತಿಪ್ರಿಯರಾಗಿ ಸಮಾಜದಲ್ಲಿ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದರು.

ವಿಜಯನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಿ. ಲಾಲ್ಯನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ರಾಜ್ಯ ಘಟಕದ ಕಾರ್ಯಾಧ್ಯಕ್ಷ ವಿಠ್ಠಲ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘ ರಾಜ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಬಿ. ಸಿದ್ದ್ಯಾ ನಾಯ್ಕ, ರಾಜ್ಯ ಖಜಾಂಚಿ ಧರ್ಮರಾಜ್ ನಾಯ್ಕ, ಕಲಬುರಗಿ ಜಿಲ್ಲಾಧ್ಯಕ್ಷ ಬಿ.ಬಿ. ನಾಯ್ಕ, ಬಂಜಾರ ವಿದ್ಯಾರ್ಥಿ ಯುವ ಘಟಕದ ರಾಜ್ಯಾಧ್ಯಕ್ಷ ಗಿರೀಶ್ ನಾಯ್ಕ ಹಾಗೂ ಹೈದರಾಬಾದಿನ ಶ್ರೀನಿವಾಸ ಗೌಡ, ಕೆ. ರವಿನಾಯ್ಕ, ರಘುರಾಮ್ ನಾಯ್ಕ, ಕೆ. ರಾಮನಾಯ್ಕ, ಗೋವಿಂದನಾಯ್ಕ, ಹರ‍್ಯಾ ನಾಯ್ಕ, ಕೆ. ಲಕ್ಷ್ಮಣ ನಾಯ್ಕ, ಕೆ. ರಾಮ ನಾಯ್ಕ, ಆರ್. ಚಂದ್ರಶೇಖರ್ ನಾಯ್ಕ, ಕೃಷ್ಣ ನಾಯ್ಕ, ಡಿ.ಎಸ್. ಗಜಾನಂದ ನಾಯ್ಕ, ಕೆ.ಆರ್. ನಾರಾಯಣಸ್ವಾಮಿ ನಾಯ್ಕ , ಮೋತಿನಾಯ್ಕ, ಗೋವಿಂದ ನಾಯ್ಕ, ಜಯ ನಾಯ್ಕ, ಜಿ.ಆರ್. ರವಿನಾಯ್ಕ ಮತ್ತಿತರರಿದ್ದರು. ಎಲ್.ಹಾಲ್ಯಾ ನಾಯ್ಕ, ಯಲ್ಲಪ್ಪ ಭಂಡಾರಿ, ವಿ. ಜ್ಯೋತಿನಾಯ್ಕ, ಎಲ್. ಸೇವ್ಯಾನಾಯ್ಕ ನಿರ್ವಹಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ