ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರು: ಸರ್ದಾರ್ ಸ್ವಾಮೀಜಿ

KannadaprabhaNewsNetwork |  
Published : Mar 17, 2024, 01:45 AM IST
ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರುಃ ಸರ್ದಾರ್ ಸ್ವಾಮೀಜಿ | Kannada Prabha

ಸಾರಾಂಶ

ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರು. ಅನಾದಿ ಕಾಲದಿಂದಲೂ ಸೇವಾಲಾಲರ ಆದರ್ಶ ಪಾಲಿಸಿಕೊಂಡು ಸಮಾಜ ಮುಖಿಯಾಗಿ ಬದುಕುತ್ತಿದ್ದಾರೆ ಎಂದು ಸರ್ದಾರ್ ಸ್ವಾಮೀಜಿ ಹೇಳಿದರು.

ತರೀಕೆರೆ ತಾಲೂಕು ಬಂಜಾರ ಸಂಘದಿಂದ ಸಂತಶ್ರೀ ಸೇವಾಲಾಲರ ೨೮೫ ನೇ ಜಯಂತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಸ್ವಾಭಿಮಾನದಿಂದ ಬದುಕುತ್ತಿರುವ ಬಂಜಾರರು. ಅನಾದಿ ಕಾಲದಿಂದಲೂ ಸೇವಾಲಾಲರ ಆದರ್ಶ ಪಾಲಿಸಿಕೊಂಡು ಸಮಾಜ ಮುಖಿಯಾಗಿ ಬದುಕುತ್ತಿದ್ದಾರೆ ಎಂದು ಸರ್ದಾರ್ ಸ್ವಾಮೀಜಿ ಹೇಳಿದರು.ತರೀಕೆರೆ ತಾಲೂಕು ಬಂಜಾರ ಸಂಘದಿಂದ ಬಂಜಾರ ಧರ್ಮಗುರು ಕುಲದೈವ , ಸಂತಶ್ರೀ ಸೇವಾಲಾಲರ ೨೮೫ ನೇ ಜಯಂತಿಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಬಂಜಾರರಲ್ಲಿ ಒಗ್ಗಟ್ಟು ಮೂಡಬೇಕು ಪ್ರಸ್ತುತದಲ್ಲಿ ವಿದ್ಯಾವಂತ ರಾದ ಸಮಾಜದ ಯುವಕರು ಸಮಾಜ ಒಗ್ಗಟ್ಟಿನಿಂದ ಇರುವುದಕ್ಕೆ ಪ್ರತಿಯೊಂದು ತಾಂಡಗಳಲ್ಲಿ ನಿವೆಲ್ಲರೂ ಸೇರಿ ಸಭೆ ನಡೆಸುವ ಮೂಲಕ ಸರ್ಕಾರದ ಸೌಲಭ್ಯ ಬಡವರಿಗೆ ಕೊಡಿಸುವ ಪ್ರಯತ್ನ ಮಾಡಬೇಕು. ಇಂದು ಸಮಾಜದ ಪ್ರತಿಯೊಬ್ಬರು ೧೨ ನೇ ಶತಮಾನದ ಕ್ರಾಂತಿಕಾರಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಸರಿದಾರಿಯಲ್ಲಿ ಸಾಗಲು ಒಗ್ಗಟ್ಟಾಗಿರಬೇಕೆಂದು ಕರೆ ನೀಡಿದರು.ಕಂದಾಯ ಉಪವಿಭಾಗಾಧಿಕಾರಿ ಡಾ. ಕಾಂತರಾಜ್ ಮಾತನಾಡಿ ಬಂಜಾರ ಸಮುದಾಯಕ್ಕೆ ಸಂತ ಸೇವಾಲಾಲರು ರಾಯಭಾರಿಯಾಗಿದ್ದವರು. ಈ ಸಮುದಾಯಕ್ಕೆ ಮಾತ್ರವಲ್ಲದೆ ಪ್ರತಿಯೊಂದು ಸಮುದಾಯದಲ್ಲಿ ಇದ್ದ ಕೆಲವು ಮೂಡ ನಂಬಿಕೆ ಮತ್ತು ಆಚರಣೆ ವಿರೋಧಿಸಿ ಮಹಿಳೆಯರಿಗೂ ಸೂಕ್ತ ಸ್ಥಾನವನ್ನು ಪ್ರತಿಪಾದಿಸಿದರು ಎಂದು ಹೇಳಿದರು.

ಬಂಜಾರ ಸಂಘದ ತಾಲೂಕು ಅಧ್ಯಕ್ಷ ಕರಕುಚ್ಚಿ ರಾಮಾನಾಯ್ಕ ಮಾತನಾಡಿ ಸಮಾಜದಲ್ಲಿ ಪ್ರತಿವರ್ಷ ಸೇವಾಲಾಲ್ ಜಯಂತ್ಯುವ ಆಚರಿಸುತ್ತೇವೆ, ನಮ್ಮ ಸಮಾಜಕ್ಕೆ ಸಮುದಾಯ ಭವನದ ಅವಶ್ಯಕತೆ ಇದ್ದು ಈಗಾಗಲೇ ಬೇಲೇನಹಳ್ಳಿ ಗ್ರಾಪಂ ನಿಂದ ಲಕ್ಕವಳ್ಳಿ ಕ್ರಾಸ್‌ಬಳಿ ೧೦೦ ಅಡಿ ಜಾಗ ಮಂಜೂರು ಮಾಡಿ ತಾಲೂಕು ಪಂಚಾಯಿತಿಗೆ ಸೂಕ್ತ ಕ್ರಮಕ್ಕೆ ಕಳುಹಿಸಿದ್ದು ಅದು ನನೆಗುದಿಗೆ ಬಿದ್ದಿದೆ.

ಶಾಸಕ ಜಿ.ಎಚ್.ಶ್ರೀನಿವಾಸ್ ಇದರ ಬಗ್ಗೆ ಗಮನ ಹರಿಸಿ ಈ ಜಾಗವನ್ನು ಸಮಾಜದ ಉಪಯೋಗಕ್ಕೆ ಕೊಡಲು ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಈ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಶಿವಪ್ರಕಾಶ್ ಮಹಾರಾಜ್ ಕೊಟ್ಟೂರು, ರಚನಾ ಶ್ರೀನಿವಾಸ್, ಬಂಜಾರ ಸಂಘದ ಕಾರ್ಯಾಲಯದ ಹೆಚ್.ಎಲ್ ಮಂಜುನಾಥ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್. ಮಹೇಂದ್ರ, ಪುರಸಭಾ ಮುಖ್ಯಾಧಿಕಾರಿ ಎಚ್. ಪ್ರಶಾಂತ್, ಡಾ, ಕೆ.ಪಿ. ಸುರೇಶ್ ನಾಯ್ಕ, ಎಚ್.ಶಾಂತನಾಯ್ಕ ಮಾತನಾಡಿದರು.

ಯೊಗೇಂದ್ರ ಕುಮಾರ್ ನಾಯ್ಕ, ಎಚ್.ಕೆ. ಹಾಲನಾಯ್ಕ ಆರ್. ಸತ್ಯಪ್ಪ, ಗೋವಿಂದನಾಯ್ಕ, ಟಿ.ಚಂದ್ರನಾಯ್ಕ, ಯೋಗೀಶ್ ನಾಯ್ಕ, ವೈ.ಕೆ.ಶಿವಮೂರ್ತಿ, ಶೇಷಗಿರಿನಾಯ್ಕ, ದೊರೆಸ್ವಾಮಿ ನಾಯ್ಕ, ಕರಕುಚ್ಚಿ ಕುಮಾರ, ಲಿಂಗದಹಳ್ಳಿ ಕೃಷ್ಣನಾಯ್ಕ, ಎಚ್.ಇ ಪ್ರದೀಪ್ ನಾಯ್ಕ, ದಾಸೂನಾಯ್ಕ ಮಲ್ಲಾನಾಯ್ಕ, ಬಿ ಕೃಷ್ಣನಾಯ್ಕ, ಆರ್. ಸತ್ಯಪ್ಪ ಇತರರು ಇದ್ದರು.15ಕೆಟಿಆರ್.ಕೆ.3ಃ

ತರೀಕೆರೆಯಲ್ಲಿ ಏರ್ಪಡಿಸಿದ್ದ ಬಂಜಾರ ಧರ್ಮಗುರು ಕುಲದೈವ , ಸಂತಶ್ರೀ ಸೇವಾಲಾಲರ ೨೮೫ ನೇ ಜಯಂತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ದಾರ ಸ್ವಾಮಿ ನೆರವೇರಿಸಿದರು. ಕಂದಾಯ ಉಪ ವಿಭಾಗಾಧಿಕಾರಿ ಡಾ.ಕಾಂತರಾಜ್, ಬಂಜಾರ ಸಂಘದ ಅಧ್ಯಕ್ಷ ಕರಕುಚ್ಚಿ ರಾಮಾನಾಯಕ್, ಕಾರ್ಯಾದ್ಯಕ್ಷ ಎಚ್.ಎಲ್.ಮಂಜುನಾಥ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!