ಕನ್ನಡಪ್ರಭ ವಾರ್ತೆ ಚಡಚಣ
ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದಲ್ಲಿ ಬ್ಯಾಂಕ್‌ಗಳ ಅಭಿವೃದ್ಧಿ ಸಾಧ್ಯ ಎಂದು ದಿ.ಕರ್ನಾಟಕ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.ಪಟ್ಟಣ ಪಂಡರಪುರ ರಸ್ತೆಯ ಮಾಲಾಪುರ ಕಾಂಪ್ಲೆಕ್ಸ್‌ದಲ್ಲಿ ಗುರುವಾರ ಆಯೋಜಿಸಲಾದ ದಿ.ಕರ್ನಾಟಕ ಕೋ-ಆಫ್ ಕ್ರೆಡಿಟ್ ಸೊಸೈಟಿಯ 6ನೇ ಶಾಖೆ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಉದ್ದೇಶವೇನೆಂದರೆ ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು, ಸಮಾಜಕ್ಕೆ ವಿಷಮುಕ್ತ ಆಹಾರವನ್ನು ಪೂರೈಸುವುದು, ಈ ಉದ್ದೇಶದಿಂದ ರೈತರಿಗೆ ಹೆಚ್ಚೆಚ್ಚು ತಿಳುವಳಿಕೆ ಕೊಡುವ ಕಾರ್ಯಾಗಾರ ಮಾಡುತ್ತೇವೆ ಎಂದು ತಿಳಿಸಿದರು.
ಶಾಸಕ ವಿಠ್ಠಲ ಕಟಕಧೋಂಡ ಉದ್ಘಾಟಿಸಿ ಮಾತನಾಡಿ, ನಿಷ್ಠೆ, ಪ್ರಾಮಾಣಿಕಮ ಹೊಸತನ ವಿಷೇಶ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾಗಿದೆ ಎಂದರು.ಸಹಕಾರಿ ಸಂಘಗಳು ಬರಿ ಸಾಲ ಕೊಡುವುದಕ್ಕೆ ಸೀಮಿತವಾಗದೇ ರೈತರಿಗೆ ಕ್ರೀಮಿನಾಶಕ, ಸಾವಯವ ರಸಗೊಬ್ಬರ ಔಷಧಗಳು, ಮಹಣಿ ಸೇರಿದಂತೆ ಇತರೆ ಸೌಲಭ್ಯಗಳು ಸುಗಮವಾಗಿ ಕೊಡುವ ಮೂಲಕ ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಸಿಬ್ಬಂದಿ ಶ್ರವಹಿಸಬೇಕು. ಅಲ್ಲದೇ ರೈತರು ಆದಾಯಕ್ಕೆ ತಕ್ಕಂತೆ ಸಾಲ ನೀಡಿ ಸಾಲಮನ್ನಾದಂತಾ ಕಾರ್ಯ ನಿಗದಿತ ಸಮಯದಲ್ಲಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಹಕಾರಿ ಸಂಘಗಳ ಜೊತೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ದೊಡ್ಡ ಪೈಪೋಟಿ ನಡೆಯುತ್ತಿದೆ. ಆದರೂ ಸಹಕಾರಿ ಸಂಘಗಳನ್ನು ಹಿಂದುಕ್ಕಿಲು ಸಾಧ್ಯವಾಗುತ್ತಿಲ್ಲ. ಕೋ-ಆಫ್ ಸೊಸೈಟಿಗಳ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವುದರಿಂದ ಕ್ಷೇತ್ರ ಗಣನೀಯವಾಗಿ ಬೆಳೆಯುತ್ತಿದೆ. ಸಂಘದ ಪ್ರತಿನಿಧಿಗಳು ವೃತ್ತಿಪರ, ಶಿಸ್ತು ಹಾಗೂ ಬದ್ಧತೆ ಮೈಗೂಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಎದಯರಾಗಿದೆ ಎಂದರು.ಹತ್ತಳ್ಳಿ- ಹಾವಿನಾಳ ಗುರು ಗುರುಪಾದೇಶ್ವರ ಮಹಾಸ್ವಾಮೀಜಿ, ಹಾವಿನಾಳದ ಚಂದ್ರಶೇಖರ ಸ್ವಾಮೀಜಿ, ಚಿಕ್ಕ ರೂಗಿಯ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ.ಪಾಟೀಲ(ಹಲಸಂಗಿ), ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಜವಳಿ ವ್ಯಾಪಾರಸ್ಥ ಅಜಿತ ಮುತ್ತಿ, ಮುಖಂಡರಾದ ಕಾಂತೂಗೌಡ ಪಾಟೀಲ, ವಿ.ಜಿ.ಮುತ್ತಿ, ಸಿದ್ದಣ್ಣಸಾಹುಕಾರ ಬಿರಾದಾರ, ಸಂಗಮೇಶ ಅವಜಿ, ರಾಜಶೇಖರ ಡೋಣಗಾಂವ, ಸಂಗಪ್ಪ ಭಂಡರಕವಟೆ, ಡಿ.ಬಿ.ಕಟಗೇರಿ, ಸಿದ್ದಣ್ಣಸಾಹುಕಾರ ಬಿರಾದಾರ, ಸಾಹೇಬಗೌಡ ಬಿರಾದಾರ, ಆರ್.ಡಿ ಹಕ್ಕೆ, ಮಹಾದೇವ ಯಂಕಂಚಿ, ನೂತನ ಪಟ್ಟಣ ಪಂಚಾಯತಿ ಸದಸ್ಯರು, ಸಂಘದ ಆಡಳಿತ ಮಂಡಳಿ ಹಾಗೂ ಬ್ಯಾಂಕ್‌ನ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಸಿಬ್ಬಂದಿ ಇದ್ದರು.