ಬ್ಯಾಂಕ್‌ ಅಭಿವೃದ್ಧಿ ಪೂರಕ ಯೋಜನೆ ಜಾರಿ

KannadaprabhaNewsNetwork | Published : Jan 11, 2025 12:49 AM

ಸಾರಾಂಶ

ಕಳೆದ ಹಲವು ದಶಕಗಳಿಂದ ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು, ಅಧಿಕಾರದ ಚುಕ್ಕಾಣಿ ನನಗೆ ನೀಡಿದ್ದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.

ಗಜೇಂದ್ರಗಡ: ಬ್ಯಾಂಕಿನ ಹೊಸ ಶಾಖೆ ಆರಂಭದ ಜತೆಗೆ ಸದಸ್ಯರು ಹಾಗೂ ಗ್ರಾಹಕರಿಗೆ ಯಶಸ್ವಿನಿ ಯೋಜನೆ ಲಾಭದ ಜತೆಗೆ ಬ್ಯಾಂಕಿನ ಅಭಿವೃದ್ಧಿ ಪೂರಕ ಯೋಜನೆಗಳ ಜಾರಿಗೆ ತರಲು ಶ್ರಮಿಸುವೆ ಎಂದು ದಿ. ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷ ಸುರೇಶ ಕಾಳಪ್ಪ ಚನ್ನಿ ಹೇಳಿದರು.

ಪಟ್ಟಣದ ರೋಣ ರಸ್ತೆಯ ದಿ.ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದರು.

ಕಳೆದ ಹಲವು ದಶಕಗಳಿಂದ ಬ್ಯಾಂಕಿನ ನಿರ್ದೇಶಕ ಮಂಡಳಿಯವರು ಬ್ಯಾಂಕನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು, ಅಧಿಕಾರದ ಚುಕ್ಕಾಣಿ ನನಗೆ ನೀಡಿದ್ದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.ಸದಸ್ಯರ ಹಾಗೂ ಗ್ರಾಹಕರಿಗೆ ಯಶಸ್ವಿನಿ ಯೋಜನೆ ಲಾಭದ ಜತೆಗೆ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೆ ತರುವ ಆಶಯ ಹೊಂದಿದ್ದೇನೆ. ಪ್ರಸಕ್ತ ವರ್ಷ ಬ್ಯಾಂಕಿನ ೨ ಹೊಸ ಶಾಖೆಗಳ ಆರಂಭದ ಗುರಿ, ಸದಸ್ಯರು ಮತ್ತು ಗ್ರಾಹಕರಿಗೆ ಸೌಲಭ್ಯ ಒದಗಿಸಲು ತಂತ್ರಜ್ಞಾನದ ಸಮರ್ಥವಾಗಿ ಜಾರಿಗೆ ತರಲು ಯೋಜನೆ ಹಾಕಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಬ್ಯಾಂಕ್‌ನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಶಿದ್ದಪ್ಪ ಗುರುಶಾಂತಪ್ಪ ಬಂಡಿ ಮಾತನಾಡಿ, ವಿಶ್ವಾಸ,ನಂಬಿಕೆ ಹಾಗೂ ಸಾಮಾಜಿಕ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಮೂಲಕ ಪಟ್ಟಣದ ದಿ. ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈಗಾಗಲೇ ಶತಮಾನೋತ್ಸವ ಪೂರೈಸಿ ಹೊಸ ಮೈಲಿಗಲ್ಲಿನತ್ತ ದಿಟ್ಟ ಹೆಜ್ಜೆಯನ್ನಿಟಿದೆ. ಇಂತಹ ಪ್ರತಿಷ್ಠಿತ, ಜನರ ವಿಶ್ವಾಸದ ಪ್ರತಿರೂಪವಾದ ಬ್ಯಾಂಕಿನ ಉಪಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಅಭಾರಿ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿ ನಿರ್ದೇಶಕರ ಹಾಗೂ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದ ಅಧ್ಯಕ್ಷರೊಂದಿಗೆ ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸುವೆ ಎಂದರು.

ಶತಮಾನ ಪೂರೈಸಿರುವ ಪಟ್ಟಣದ ದಿ. ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಪುಷ್ಪಾ ಕಡಿವಾಳ ಹಾಗೂ ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಮುಧೋಳ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಈ ವೇಳೆ ನಿಕಟಪೂರ್ವ ಅಧ್ಯಕ್ಷ ಸುಹಾಸಕುಮಾರ ಪಟ್ಟೇದ, ಪರಣ್ಣ ಕಡ್ಡಿ, ಪವಾಡೆಪ್ಪ ಮ್ಯಾಗೇರಿ, ಡಾ.ಬಿ.ವಿ. ಕಂಬಳ್ಯಾಳ, ವೀರೇಶ ನಂದಿಹಾಳ, ಶಿದ್ದಲಿಂಗಪ್ಪ ಕನಕೇರಿ, ಕಲ್ಲಪ್ಪ ಸಜ್ಜನರ, ಪರಸಪ್ಪ ತಳವಾರ, ರಾಮಣ್ಣ ನಿಡಗುಂದಿ, ರಾಜಮತಿ ಪದ್ಮರಾಜ ಹೂಲಿ, ಸುಜಾತ ಉಮೇಶ ಮಣಸಗಿ, ಬ್ಯಾಂಕಿನ ವ್ಯವಸ್ಥಾಪಕ ರಾಜು ಹೊಸಂಗಡಿ, ನಾಗರಾಜ ಹೊಸಂಗಡಿ, ಪ್ರದೀಪ ಮ್ಯಾಗೇರಿ, ಮಹಾಂತೇಶ ಇಂಡಿ, ವಿಶ್ವನಾಥ ಕರಬಶಟ್ಟಿ, ವಿನಯ ಕೆಂಬಾವಿ ಸೇರಿ ಇತರರು ಇದ್ದರು.

Share this article