ಕನ್ನಡಪ್ರಭ ವಾರ್ತೆ ಲೋಕಾಪುರ
ಬ್ಯಾಂಕಿನ ಆಡಳಿತದಲ್ಲಿ ಸದಸ್ಯರು ಮತ್ತು ಗ್ರಾಹಕರು ಇಟ್ಟಿರುವ ವಿಶ್ವಾಸ. ಸಹಕಾರಿ ತತ್ವಗಳ ಮನೋಭಾವದೊಂದಿಗೆ ರಾಜಿ ಮಾಡಿಕೊಳ್ಳದೆ ಬ್ಯಾಂಕನ್ನು ನಡೆಸುವುದರಿಂದ ಉತ್ತಮವಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಹೇಳಿದರು.ಪಟ್ಟಣದ ದಿ.ಲೋಕಾಪುರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಲೋಕಾಪುರ ಇದರ ಬೆಳ್ಳಿಹಬ್ಬದ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬ್ಯಾಂಕಿನ ಧ್ಯೇಯವಾಕ್ಯವೆಂದರೆ ಗುಣಮಟ್ಟದ ಗ್ರಾಹಕ ಸೇವೆ ನೀಡುವುದು ಮತ್ತು ತನ್ನ ಗುರಿಗಳನ್ನು ಸಾಧಿಸಲು ದೃಢ ಬದ್ಧತೆಯೊಂದಿಗೆ ನವೀನ ವಿಧಾನಗಳನ್ನು ಸಂಯೊಜಿಸುವುದು ಮತ್ತು ಕಾರ್ಯಗತೊಳಿಸುವುದಾಗಿದೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸ್ವಯಂ ಉದ್ಯೋಗ ಯೋಜನೆಗಳಿಗೆ ಸಾಲ ನೀಡುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡುವುದು ಬ್ಯಾಂಕಿನ ಮುಖ್ಯ ಉದ್ದೇಶವಾಗಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಸಂಗಮೇಶ ಬಟಕುರ್ಕಿ ಮಾತನಾಡಿ, ಬ್ಯಾಂಕಿನ ಅಭಿವೃದ್ಧಿಗೆ ಷೇರುದಾರರು, ನಿರ್ದೇಶಕರು ಸೇರಿದಂತೆ ಸಿಬ್ಬಂದಿ ಸಹಕಾರದೊಂದಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನಮ್ಮ ಬ್ಯಾಂಕಿನಿಂದ ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ಡಾ. ಚಂದ್ರಶೇಖರ ಸ್ವಾಮಿಗಳು, ಮಹಾರುದ್ರಯ್ಯ ಮಹಾಸ್ವಾಮಿಗಳು, ಜ್ಯೋತಿಷ್ಯರತ್ನ ಗಣೇಶ ಚಿತ್ರಗಾರ, ಸಂಸ್ಥೆಯ ಅಧ್ಯಕ್ಷ ಮಹಾದೇವಿ ಕಡಕೋಳಮಠ, ಉಪಾಧ್ಯಕ್ಷ ಲಾಲಸಾಹೇಬ ತೊರಗಲ್, ನಿರ್ದೇಶಕರಾದ ಸಂಕಪ್ಪ ಗಂಗಣ್ಣವರ, ಲೋಕೇಶ ಶೆಟ್ಟರ್, ಕೃಷ್ಣರಾಜ ವಿಭೂತಿ, ಅಶೋಕ ಕೊಳ್ಳೊಳ್ಳಿ, ತುಳಜಪ್ಪ ಮುದ್ದಾಪುರ, ಬಾಳಪ್ಪ ಹುಲ್ಯಾಳ, ಈರಣ್ಣ ಯರಗಟ್ಟಿ, ಮಾಲಾ ಸಕ್ರಿ, ಮಂಜುಳಾ ಹಿರೇಮಠ, ನಾಗವ್ವ ಮುತ್ತಣ್ಣವರ, ಮುಖ್ಯಕಾರ್ಯನಿರ್ವಾಹಕ ಪ್ರವೀಣ ಗಂಗಣ್ಣವರ, ಪ್ರಕಾಶ ಚೌಧರಿ, ಲೋಕಯ್ಯ ಹಿರೇಮಠ, ಹಸನಸಾಬ ಅಳ್ಳಿಗಿಡದ ಹಾಗೂ ಸ್ಥಳೀಯ ಮತ್ತಿತರು ಇದ್ದರು.