ರಕ್ತದಾನ ಶಿಬಿರ । ವಿಶ್ವ ರೆಡ್ ಕ್ರಾಸ್ ದಿನಾಚರಣೆ । ರಕ್ತ ನೀಡುವ ಬಗ್ಗೆ ಜಾಗೃತಿ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗಎಲ್ಲ ದಾನಗಳಿಗಿಂತ ರಕ್ತದಾನ ತುಂಬಾ ಶ್ರೇಷ್ಠವಾದ ದಾನ ದಾನದಿಂದ ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಪಿ.ದಿನೇಶ್ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಶುಕ್ರವಾರ ಶೋಭಾ ಕಡಿದಾಳ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ, ಬೃಹ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ರಕ್ತದ ಕೊರತೆ ಸಾಕಷ್ಟು ಇದೆ. ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ಯುವತಿಯರು ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡಬೇಕು. ಮೂಢನಂಬಿಕೆಯಿಂದ ಹೊರ ಬಂದು ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವ ಪುಣ್ಯದ ಕೆಲಸದಲ್ಲಿ ನಾವು, ನೀವೆಲ್ಲರೂ ಪಾಲ್ಗೊಳ್ಳೋಣ ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನ ಎಂದರು.
ಶಿಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ನಿಜವಾದ ಮನಕುಲದ ಸೇವೆಯನ್ನು ಇಂದು ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಸಂಸ್ಥೆ ಮಾಡುತ್ತ ಇದೆ ಎಂದರು.ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಸುದರ್ಶನ್ ತಾಯಿ ಮನೆ ಮಾತನಾಡಿ, ಇಂದು ರಕ್ತದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ನಮ್ಮ ದೇಹದಲ್ಲಿ ರಕ್ತದಾನ ಮಾಡುವ ಶಕ್ತಿ ಇದ್ದಾಗಲೇ ರಕ್ತದಾನ ಮಾಡಬೇಕು. ನಾವು ಕೊಡುವ ಒಂದು ಯೂನಿಟ್ ರಕ್ತದಿಂದ ಇಂದು ನಾಲ್ಕು ಜನರ ಪ್ರಾಣವನ್ನು ಉಳಿಸಬಹುದಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ರಸ್ತೆ ಅಪಘಾತಗಳು ಆದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಮಾತೃ ಮರಣ ತಡೆಯಲು ರಕ್ತದ ಅವಶ್ಯಕತೆ ಇರುತ್ತದೆ. ಇದಕ್ಕೆ ನಾವು ರಕ್ತದಾನ ಮಾಡಬೇಕು ರಕ್ತ ಅಮೂಲ್ಯವಾದದ್ದು ಎಂದು ತಿಳಿಸಿದರು.
ರೆಡ್‌ಕ್ರಾಸ್ ನಿರ್ದೇಶಕಿ ಡಾ.ರೇಷ್ಮಾ ಮಾತನಾಡಿ, ಇಂತಹ ಪವಿತ್ರ ಕಾರ್ಯದಲ್ಲಿ ನಮ್ಮ ಮಕ್ಕಳು ಪಾಲ್ಗೊಳ್ಳುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ಇರುವ ಎಲ್ಲಾ ವಿದ್ಯಾರ್ಥಿಗಳು ಸಹ ರಕ್ತದಾನ ಮಾಡಲು ಅವರಿಗೆ ಪ್ರೇರೇಪಿಸುತ್ತೇವೆ ಎಂದರು.ಆರ್.ಗಿರೀಶ್, ಕೆ.ಸಿ.ಬಸವರಾಜ, ಗೌರವ ಕಾರ್ಯದರ್ಶಿ ಡಾ.ದಿನೇಶ್, ಉಪಾಧ್ಯಕ್ಷ ಟಿ.ಆರ್.ಅಶ್ವಥ್ ನಾರಾಯಣ್. ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಧು ರಕ್ತದಾನಿ ಧರಣೇಂದ್ರ ದಿನಕರ್, ದೈಹಿಕ ಶಿಕ್ಷಣ ನಿರ್ದೇಶಕ ಎನ್.ಎಚ್.ಶೀಲಾ ಹಾಜರಿದ್ದರು.