ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕಾಗಿ ಯದುವೀರ್‌ಗೆ ಮತ ನೀಡಿ: ಜಿ.ಡಿ. ಹರೀಶ್ ಗೌಡ

KannadaprabhaNewsNetwork |  
Published : Apr 13, 2024, 01:00 AM IST
62 | Kannada Prabha

ಸಾರಾಂಶ

ಮೈಸೂರು ರಾಜರ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಮೀಸಲಾತಿ, ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಬೆಂಬಲಿಸುವಂತೆ ಕೋರಿ, ಕಾಂಗ್ರೆಸ್ ಸುಳ್ಳು, ಅಸೂಯೆ, ದ್ವೇಶ ಭಾವನೆಯ ಪಕ್ಷವಾಗಿದೆ. ಸಿದ್ದರಾಮಯ್ಯರ ಅವಧಿಯ ಚಾಮುಂಡೇಶ್ವರಿ ಕ್ಷೇತ್ರ, ಇಂದಿನ ಚಾಮುಂಡೇಶ್ವರಿ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಿದೆ

ಕನ್ನಡಪ್ರಭ ವಾರ್ತೆ ಹುಣಸೂರು

ಕೃಷಿ ಮತ್ತು ರೈತರಿಗೆ ಹೆಚ್ಚಿನ ಆಧ್ಯತೆ ನೀಡುವ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆ ಮತ ನೀಡುವ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹುಣಸೂರು ತಾಲೂಕಿನ ಜನತೆ ಮುಂದಾಗಬೇಕು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಕರೆ ನೀಡಿದರು.

ಬನ್ನಿಕುಪ್ಪೆ ಮತ್ತು ಗಾವಡಗೆರೆ ಜಿಪಂ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ ನಂತರ ಗಾವಡಗೆರೆ ಮರಾಠ ಸಮುದಾಯ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೈಸೂರು ರಾಜರ ಅವಧಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಮೀಸಲಾತಿ, ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಬೆಂಬಲಿಸುವಂತೆ ಕೋರಿ, ಕಾಂಗ್ರೆಸ್ ಸುಳ್ಳು, ಅಸೂಯೆ, ದ್ವೇಶ ಭಾವನೆಯ ಪಕ್ಷವಾಗಿದೆ. ಸಿದ್ದರಾಮಯ್ಯರ ಅವಧಿಯ ಚಾಮುಂಡೇಶ್ವರಿ ಕ್ಷೇತ್ರ, ಇಂದಿನ ಚಾಮುಂಡೇಶ್ವರಿ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ತಾಲೂಕಿನಲ್ಲಿ ಕನಿಷ್ಟ 25 ಸಾವಿರ ಬಹುಮತ ಬರುವಂತೆ ನೀವೆಲ್ಲರು ಬೂತ್ ಮಟ್ಟದಲ್ಲಿ ಜನರಿಗೆ ತಿಳುವಳಿಕೆ ನೀಡಿ ಮತ ಹಾಕಿಸುವ ಕೆಲಸ ಮಾಡಬೇಕು, ತಾಲೂಕಿನಲ್ಲಿ ಮತ್ತೆ ಹೆಚ್ಚು ಮತ ನೀಡಿ ನನಗೆ ಕೆಲಸಮಾಡಲು ಸಹಕಾರಿ ಆಗಬೇಕು ಎಂದು ಅವರು ಮನವಿ ಮಾಡಿದರು.

ಬಿಜಿಪಿ. ಜಿಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಮ್ಮ ವಂಶದಲ್ಲಿ ಹಿಂದೆ ಹಲವು ರಾಜರು ಮೈಸೂರು ರಾಜ್ಯದ ಜನತೆಯ ಹಿತಕ್ಕಾಗಿ ದುಡಿದ ಕುಟುಂಬ, ನನ್ನ ಕನಸು ಸಹ ರೈತ, ಬಡವ, ಕಾರ್ಮಿಕರ ಪರವಾಗಿ ಸದಾ ಇರುತ್ತೇನೆ, ನಾನು ಸಹ ಜನರ ಸೇವೆ ಮಾಡಬೇಕು ಎಂಬ ಹಂಬಲದಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ, ಮುಂದೆ ಜನರ ಸೇವೆಯೆ ನನ್ನ ಮುಖ್ಯ ಗುರಿ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್, ರಂಜಿತಾ ಚಿಕ್ಕಮಾದು, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ದೇವರಾಜ್ ಒಡೆಯರ್, ಮುಖಂಡರಾದ ದೇವರಳ್ಳಿ ಸೋಮೇಶೇಖರ್, ಜಾಬಗೆರೆ ರಮೇಶ್ಕುಮಾರ್, ನಾಗಣ್ಣ, ಹೊನ್ನಪ್ಪ ರಾವ್, ಹರವೆ ಶ್ರಿಧರ್, ನಾಗರಾಜ್ ಮಲ್ಲಾಡಿ, ಮಂಜುನಾಥ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಮಚಂದ್ರ ಇದ್ದರು.

ಗಾವಡಗೆರೆ ಗುರುಲಿಂಗ ಜಂಗಮದೇವರ ಮಠ ಮತ್ತು ಮಾದಹಳ್ಳಿ ಉಕ್ಕಿನಕಂತೆ ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ನಟರಾಜ ಸ್ವಾಮೀಜಿ ಹಾಗೂ ಸಾಂಬಸಾದಶಿವ ಸ್ವಾಮೀಜಿ ಆಶೀರ್ವಚನ ಪಡೆದುಕೊಂಡರು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್