ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸುದೀರ್ಘ 12 ವರ್ಷಗಳ ಜನಪರ ಆಡಳಿತ, ಅಭಿವೃದ್ಧಿ ಮತ್ತು ಸೇವಾ ಸಂಕಲ್ಪದ ಅಂಗವಾಗಿ ಬಂಟ್ವಾಳ ಮಂಡಲದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ವಿಶೇಷ ಸಂಪರ್ಕ ಅಭಿಯಾನ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಮುಂದಿನ ದಿನಗಳು ಚುನಾವಣಾ ವರ್ಷಗಳಾಗಿರುವುದರಿಂದ ಕಾರ್ಯಕರ್ತರು ಪಕ್ಷ ಸಂಘಟನೆಯ ಜವಾಬ್ದಾರಿಯ ಜೊತೆಗೆ ಗ್ರಾಮದ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ಅಭಿಯಾನದ ವೇಳೆ ಹಿರಿಯ ಕಾರ್ಯಕರ್ತರಾದ ಗೋಪಾಲ ಸುವರ್ಣ (ಜಾಕ್‌ಹೌಸ್), ಪ್ರಮೋದ್ ಕುಮಾರ್ (ಅಜ್ಜಿಬೆಟ್ಟು), ಶಾಂತವೀರ ಪೂಜಾರಿ (ನಾವೂರು), ದಾಮೋದರ ನಾಯಕ್ (ಉಳಿ), ಬೂಬ ಸಪಲ್ಯ (ಮೂಡುಪಡುಕೋಡಿ), ವಿಶ್ವನಾಥ ಗೌಡ (ರಾಯಿ), ಕರುಣೇಂದ್ರ ಪೂಜಾರಿ (ಕೊಂಬ್ರರಬೈಲು), ಭಾಸ್ಕರ (ಅಜೆಕಲ), ರಮೇಶ್ ಪೂಜಾರಿ, ಪ್ರಭಾಕರ (ಬೋಳಂಗಡಿ), ಶಿವಾನಂದ (ಬರಿಮಾರು), ನಾರಾಯಣ ಗೌಡ (ಏಮಾಜೆ ನೆಟ್ಲಮುಡ್ನರು), ಪಿ.ಜಿ. ಕೇಶವ ಭಟ್ (ಕರೋಪಾಡಿ) ಹಾಗೂ ಪಿ. ಲಿಂಗಪ್ಪ (ಕನ್ಯಾನ) ಅವರ ಮನೆಗಳಿಗೆ ಭೇಟಿ ನೀಡಿ ಗೌರವ ಅಭಿನಂದನೆ ಸಲ್ಲಿಸಲಾಯಿತು.ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ ಹಾಗೂ ಸುದರ್ಶನ ಬಜ, ಬಿಜೆಪಿ ವಕ್ತಾರ ಮಾಧವ ಮಾವೆ, ಪಕ್ಷದ ಪ್ರಮುಖರಾದ ದೇವಪ್ಪ ಪೂಜಾರಿ, ಸುಲೋಚನ ಜಿ.ಕೆ. ಭಟ್, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್‌ದಾಸ್ ಬಂಟ್ವಾಳ, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ಪುಷ್ಪರಾಜ್ ಚೌಟ, ಅಭಿಷೇಕ್ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ಸಂಪತ್ ಕುಮಾರ್, ದಿನೇಶ್ ಶೆಟ್ಟಿ ದಂಬೆದಾರ್, ರತ್ನಾಕರ್ ಚೌಟ, ಕಮಲಾಕ್ಷಿ ಕೆ. ಪೂಜಾರಿ, ಹರ್ಷಿಣಿ ಪುಷ್ಪಾನಂದ, ಲಖಿತಾ ಆರ್. ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಪ್ರಣಾಮ್ ರಾಜ್, ತನಿಯಪ್ದ ಗೌಡ, ಹರೀಶ್ ರೈ ಪೆರಾಜೆ, ಸನತ್ ಕುಮಾರ್ ರೈ, ನಾಗೇಶ್ ಭಂಡಾರಿ, ಅಶೋಕ್ ರೈ ನೇರಳಕಟ್ಟೆ, ಸುರೇಶ್ ಟೈಲರ್, ಭಾಸ್ಕರ ಟೈಲರ್, ಹರಿಪ್ರಸಾದ್, ಜನಾರ್ದನ ಬೊಂಡಾಲ, ಹರೀಶ್ ಶೆಟ್ಟಿ ಪಡು, ಸುರೇಶ್ ಕುಲಾಲ್, ಸದಾನಂದ ನಾವೂರ, ಚಿದಾನಂದ ರೈ ಕಕ್ಯ, ಸುರೇಶ್ ಮೈರ, ವಸಂತ ಪೂಜಾರಿ, ರಶ್ಮಿತ್ ಶೆಟ್ಟಿ, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಸಂದೇಶ್ ಶೆಟ್ಟಿ ಪೊಡಂಬು, ಸತೀಶ್ ಪೂಜಾರಿ, ವಿಜಯ ಕುಮಾರ್ ಅಮ್ಟಾಡಿ, ಬಬಿತಾ ಕೋಟ್ಯಾನ್, ಜಯಂತ್ ಗೌಡ, ಜಗದೀಶ್ ಭಂಡಾರಿ, ಮೋನಪ್ಪ ದೇವಶ್ಯ, ಜಿನರಾಜ್ ಕೋಟ್ಯಾನ್, ಜಯಶ್ರೀ, ಅಕ್ಷತಾ, ಆನಂದ ಶಂಭೂರು, ಸದಾಶಿವ ಪೂಜಾರಿ, ರವೀಶ್ ಶೆಟ್ಟಿ ಕರ್ಕಳ, ಅರವಿಂದ, ನಾರಾಯಣ ಶೆಟ್ಟಿ ತೋಟ, ಶಕೀಲಾ ಪೂಜಾರಿ, ರಘ ಶೆಟ್ಟಿ ಕನ್ಯಾನ, ಆಶ್ವಥ್ ಶೆಟ್ಟಿ ಕರೋಪಾಡಿ, ನವೀನ್ ಕನ್ಯಾನ, ಮಾಂತೇಶ್ ಹಾಗೂ ಪ್ರಕಾಶ್ ಅಂಚನ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.