ಶಾಲಾ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ

KannadaprabhaNewsNetwork |  
Published : Jun 19, 2026, 02:45 AM IST
18ಎಸ್‌ಬಿಐ | Kannada Prabha

ಸಾರಾಂಶ

ರೋಟರಿ ಕ್ಲಬ್, ಭಾರತೀಯ ದಂತ ವೈದ್ಯ ಸಂಘ ಮತ್ತು ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ 18ನೇ ವರ್ಷದ ಶಾಲಾ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಜೂ. 17ರಂದು ಸೂಳಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಬೆಳ್ತಂಗಡಿ: ರೋಟರಿ ಕ್ಲಬ್, ಭಾರತೀಯ ದಂತ ವೈದ್ಯ ಸಂಘ ಮತ್ತು ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಸಹಯೋಗದಲ್ಲಿ ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ 18ನೇ ವರ್ಷದ ಶಾಲಾ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಜೂ. 17ರಂದು ಸೂಳಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಸಮಾರಂಭದ ಅತಿಥಿಗಳಾಗಿದ್ದ ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಧರ ಕೆ.ವಿ., ಕಾರ್ಯದರ್ಶಿ ಡಾ. ರಾಘವೇಂದ್ರ ಪಿದಮಲೆ ಮತ್ತು ಡಾ. ಮುಕ್ತಾ ಪಟವರ್ಧನ್ ಅವರು ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು. ದಾನಿಗಳಾದ ಡಾ. ಶಶಿಧರ ಡೋಂಗ್ರೆ ಉದ್ಘಾಟಿಸಿದರು. ಡಾ. ಸುಷ್ಮಾ ಡೋಂಗ್ರೆ, ಡಾ. ಮನೀಷ್ ಡೋಂಗ್ರೆ ಮತ್ತು ಬಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ ಅವರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರವೀಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಬರೆಯುವ ಪುಸ್ತಕ, ಸಮವಸ್ತ್ರ, ಬ್ಯಾಗ್, ಕೊಡೆ, ಪೆನ್ನು, ಪೆನ್ಸಿಲ್, ಪೇಸ್ಟ್ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು.

ಇದೇ ವೇಳೆ, ಜೆ.ಇ.ಇ. ಮೈನ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸೂಳಬೆಟ್ಟಿನ ಪ್ರಥಮ ಗೋಖಲೆ ಮತ್ತು ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಳದಂಗಡಿಯ ಸಾಕ್ಷಿ ಅವರನ್ನು ಅಭಿನಂದಿಸಿ, ಡೋಂಗ್ರೆ ಕುಟುಂಬಸ್ಥರು ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದರು.ಶಿಕ್ಷಕಿ ರೀಟಾ ರೋಡ್ರಿಗಸ್, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ, ಅಕ್ಷರ ದಾಸೋಹದ ಲವಿನಾ ಮತ್ತು ಚಿತ್ರಾಕ್ಷಿ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಮೊರಾಸ್ ಅವರು ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಆರ್‌ಜಿ ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್
ವನ್ಯಪ್ರಾಣಿ ಮಾನವ ಸಂಘರ್ಷ ತಡೆಗೆ ಶಾಶ್ವತ ಕ್ರಮ