ಬಂಟ್ವಾಳ: ವಿಧಾನ ಪರಿಷತ್ ಚುನಾವಣೆ ಶಾಂತಿಯುತ

KannadaprabhaNewsNetwork |  
Published : Jun 04, 2024, 12:30 AM IST
ಬಂಟ್ವಾಳದಲ್ಲಿ ಶಾಂತಿಯುತ ಮತದಾನ | Kannada Prabha

ಸಾರಾಂಶ

ವಿಧಾನ ಪರಿಷತ್ ಸ್ಥಾನಗಳಿಗೆ ಮಂಗಳವಾರ ಮತದಾನ ಬಂಟ್ವಾಳದಲ್ಲಿ ಶಾಂತಿಯುತವಾಗಿ ನಡೆದಿದ್ದು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೮೩ ಶೇ. ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ೭೪ ಶೇ. ಮತದಾನವಾಗಿದೆ. ತಾಲೂಕಿನಲ್ಲಿ 3487 ಪದವೀಧರ ಮತದಾರರಿದ್ದು ಈ ಪೈಕಿ ೨೫೯೮ ಮತದಾರರು ಮತ ಚಲಾಯಿಸಿದ್ದರೆ, ಶಿಕ್ಷಕರ ಕ್ಷೇತ್ರದ. 961 ಶಿಕ್ಷಕ ಮತದಾರರ ಪೈಕಿ ೭೪೪ ಶಿಕ್ಷಕರು ಮತದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮತದಾನ ಬಂಟ್ವಾಳದಲ್ಲಿ ಶಾಂತಿಯುತವಾಗಿ ನಡೆದಿದ್ದು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೮೩ ಶೇ. ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ೭೪ ಶೇ. ಮತದಾನವಾಗಿದೆ.

ಬಂಟ್ವಾಳ ತಾಲೂಕಿನಲ್ಲಿ 3487 ಪದವೀಧರ ಮತದಾರರಿದ್ದು ಈ ಪೈಕಿ ೨೫೯೮ ಮತದಾರರು ಮತ ಚಲಾಯಿಸಿದ್ದರೆ, ಶಿಕ್ಷಕರ ಕ್ಷೇತ್ರದ. 961 ಶಿಕ್ಷಕ ಮತದಾರರ ಪೈಕಿ ೭೪೪ ಶಿಕ್ಷಕರು ಮತದಾನ ಮಾಡಿದ್ದಾರೆ. ಒಂದು ಟೆಂಡರ್‌ ಮತ ಎಂದು ದಾಖಲಾಗಿದೆ ಎಂದು ತಹಸೀಲ್ದಾರ್‌ ಅರ್ಚನಾ ಭಟ್‌ ಮಾಹಿತಿ ನೀಡಿದ್ದಾರೆ.

ಬಂಟ್ವಾಳ ತಾಲೂಕು ಆಡಳಿತ ‌ಶಿಕ್ಷಕ ಮತದಾರರಿಗೆ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾ.ಪಂ.ನ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದರೆ. ಪದವೀಧರ ಕ್ಷೇತ್ರದ ಮತದಾರರಿಗೆ ತಾಲೂಕಾಡಳಿತ ಕಚೇರಿಯ (ಮಿನಿವಿಧಾನಸೌಧ) ಎರಡನೇ ಮಹಡಿಯ ಕೊಠಡಿ ಸಂಖ್ಯ ೭, ೧೫ ಮತ್ತು ೧೬ ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕರಿಗೆ ಸಂಕಷ್ಟ:

ಮಿನಿ ವಿಧಾನ ಸೌಧದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನಡೆಸಿದ್ದ ಹಿನ್ನೆಲೆಯಲ್ಲಿ ಕಚೇರಿ ಕೆಲಸಕ್ಕೆ ಬಂದಿದ್ದ ನೂರಾರು ಸಾರ್ವಜನಿಕರು ವಾಪಾಸು ತೆರಳುವಂತಾಯಿತು. ಸಬ್‌ ರಿಜಿಸ್ಟ್ರಾರ್‌ ಕಚೇರಿಯೂ ಇದೇ ಮಿನಿವಿಧಾನ ಸೌಧದಲ್ಲಿದ್ದು, ೨೦ ಕ್ಕೂ ಅಧಿಕ ಮಂದಿಗೆ ಸೋಮವಾರವೇ ರಿಜಿಸ್ಟ್ರೇಶನ್‌ ಗಾಗಿ ದಿನಾಂಕವನ್ನೂ ನೀಡಲಾಗಿತ್ತು.

ಆದರೆ ಈ ಕುರಿತಾಗಿ ಸಂವಹಮದ ಕೊರತೆಯಿಂದಾಗಿ ನೋಂದಣಿ ಕಾರ್ಯಕ್ಕೆಂದು ಬಂದಿದ್ದ ಹಲವರನ್ನು ಪೊಲೀಸರು ವಾಪಾಸು ಕಳುಹಿಸಿದರೆ, ಇನ್ನೂ ಕೆಲವರು ವಿಶೇಷ ಅನುಮತಿ ಪಡೆದುಕೊಂಡು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ತೆರಳಿದರು. ಪದವೀಧರ ಕ್ಷೇತ್ರದ ಚುನಾವಣೆಯನ್ನು ತಾಲೂಕು ಮಿನಿ ವಿಧಾನ ಸೌಧದಲ್ಲಿ ನಡೆಸುವ ಬದಲಾಗಿ ಅಂಬೇಡ್ಕರ್‌ ಭವನ, ಸ್ತ್ರೀಶಕ್ತಿ ಭವನ ಹಾಗೂ ತಾಲೂಕು ಪಂಚಾಯಿತಿ ಕಟ್ಟಡ ಅಥವಾ ಯಾವುದಾದರೂ ಶಾಲೆಯಲ್ಲಿ ನಡೆಸಬೇಕಿತ್ತು ಎನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು. ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಸರ್ಕಾರಿ ಪ್ರೌಢಶಾಲೆಗಳಿಗೆ ಸಾಂದರ್ಭಿಕ ರಜೆ ನೀಡಲಾಗಿತ್ತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌