ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಸುರಕ್ಷತೆ ಹಾಗೂ ಸುಲಭ ನಿರ್ವಹಣೆಗೆ ಆದ್ಯತೆ ನೀಡುವ ಹೊಸ ತಲೆಮಾರಿನ ‘ಭಾರತ್ ಗ್ಯಾಸ್ ಲೈಟ್ ಜಿಪ್ ಸಿಲಿಂಡರ್’ ಇದೀಗ ಬಂಟ್ವಾಳದ ಗ್ರಾಹಕರಿಗೆ ಲಭ್ಯವಾಗಿದೆ.
ಬಂಟ್ವಾಳ : ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಸುರಕ್ಷತೆ ಹಾಗೂ ಸುಲಭ ನಿರ್ವಹಣೆಗೆ ಆದ್ಯತೆ ನೀಡುವ ಹೊಸ ತಲೆಮಾರಿನ ‘ಭಾರತ್ ಗ್ಯಾಸ್ ಲೈಟ್ ಜಿಪ್ ಸಿಲಿಂಡರ್’ ಇದೀಗ ಬಂಟ್ವಾಳದ ಗ್ರಾಹಕರಿಗೆ ಲಭ್ಯವಾಗಿದೆ.
ಭಾರತ್ ಪೆಟ್ರೋಲಿಯಂ ಸಂಸ್ಥೆಯ ಫೈಬರ್ ಕಾಂಪೊಸಿಟ್ ತಂತ್ರಜ್ಞಾನ ಆಧಾರಿತ ಈ ಹಗುರ ಸಿಲಿಂಡರ್‌ನ ವಿತರಣೆ ಸೇವೆಗೆ ಶುಕ್ರವಾರ ಭದ್ರಾ ಗ್ಯಾಸ್ ಏಜನ್ಸೀಸ್ನಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಮಾರುಕಟ್ಟೆ ಪ್ರಬಂಧಕ ದರ್ಶಿತ್ ಮಾಲವೀಯ, ಆಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಸಿಲಿಂಡರ್ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದರು.ಬಿಪಿಸಿಎಲ್ ಚೀಫ್ ಮ್ಯಾನೇಜರ್ ಶರತ್ ಕಾಂಬ್ಲೆ ಮಾತನಾಡಿ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ರೂಪುಗೊಂಡಿರುವ ಈ ಹೊಸ ಸಿಲಿಂಡರ್ ಭವಿಷ್ಯದ ಎಲ್‌ಪಿಜಿ ಸಿಲಿಂಡರ್‌ಗಳ ಮಾದರಿ ಎಂದರು.ಉದ್ಘಾಟಿಸಿದ ಬಂಟ್ವಾಳ ಕಾರ್ಮಿಕ ಇಲಾಖೆ ನಿರೀಕ್ಷಕಿ ಲವೀನಾ ಡಿಸೋಜ, ಉದ್ಯಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಉದ್ಯೋಗಾವಕಾಶಗಳೂ ವಿಸ್ತರಿಸಲಿ ಎಂದರು.ರೈ ಸ್ಪೈಸಿಸ್ ಮಾಲೀಕರಾದ ದಿವ್ಯಾ ರೈ ಹಾಗೂ ದೀಪಾ ಗೋಲ್ಡ್ ಜ್ಯುವೆಲರ್ಸ್ ಮಾಲೀಕರಾದ ದೀಪಾ ನರೇಶ್ ಬಾಳಿಗಾ ಶುಭ ಹಾರೈಸಿದರು.ಭಾರತ್ ಪೆಟ್ರೋಲಿಯಂ ಸಂಸ್ಥೆಯ ಟೆರಿಟರಿ ಮ್ಯಾನೇಜರ್ ಸಂದೀಪ್ ಕುಮಾರ್ ರೈನಾ ಮಾತನಾಡಿ, ‘ಭಾರತ್ ಗ್ಯಾಸ್ ಲೈಟ್ ಜಿಪ್’ ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆಗೆ ಬರಲಿರುವ ಉತ್ಪನ್ನವಾಗಿದೆ ಎಂದರು.ಸಾಂಪ್ರದಾಯಿಕ ಸಿಲಿಂಡರ್‌ಗಳಿಗೆ ಹೋಲಿಸಿದರೆ ಹೊಸ ಸಿಲಿಂಡರ್ ಹಗುರವಾಗಿದ್ದು, ನಿರ್ವಹಿಸಲು ಸುಲಭ ಮತ್ತು ಸುರಕ್ಷಿತವಾಗಿದೆ. ವಿಶೇಷವಾಗಿ ಮಹಿಳೆಯರು ಇದನ್ನು ಸುಲಭವಾಗಿ ಎತ್ತಿ ಸಾಗಿಸಬಹುದಾಗಿದ್ದು, ಆಧುನಿಕ ವಿನ್ಯಾಸವನ್ನೂ ಹೊಂದಿದೆ ಎಂದು ತಿಳಿಸಿದರು.ಭದ್ರಾ ಗ್ಯಾಸ್ ಮಾಲೀಕ ಮಂಜುನಾಥ ಆಚಾರ್ಯ, ಆಶಾಲತಾಬಾಯಿ ಹಾಗೂ ಮಧ್ವ ಎಂ. ಆಚಾರ್ಯ ಇದ್ದರು.
ಪಾಲುದಾರರಾದ ಮೇಘಾ ಎಂ. ಆಚಾರ್ಯ ಸ್ವಾಗತಿಸಿದರು. ಮಾಲ್ಸಿ ಎಂ. ಆಚಾರ್ಯ ವಂದಿಸಿದರು. ವಸಂತ ಪ್ರಭು ಪ್ರಾರ್ಥನೆ ನೆರವೇರಿಸಿದರು. ಮೌನೇಶ್ ವಿಶ್ವಕರ್ಮ ನಿರ್ವಹಿಸಿದರು.
ಭದ್ರಾ ಗ್ಯಾಸ್ ಸಂಸ್ಥೆಯ ವತಿಯಿಂದ ಮನೆ-ಮನೆಗೆ ಸಿಲಿಂಡರ್ ತಲುಪಿಸುವ ಜವಾಬ್ದಾರಿಯನ್ನು ಮಹಿಳಾ ಸಿಬ್ಬಂದಿ ನೇಮಿಸಲಾಗಿದ್ದು, ಈ ಸೇವೆಯ ವಾಹನಕ್ಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಸಿಲಿಂಡರ್ ತಲುಪಿಸುವ ಜವಾಬ್ದಾರಿ ಹೊತ್ತಿರುವ ಆಟೊ ಚಾಲಕಿ ವನಿತಾ, ಅನಿಲದ ಜಾಡಿಗಳನ್ನು ಸಾಗಿಸುವ ಮಿನಿ ಟೆಂಪೊವನ್ನು ಚಲಾಯಿಸುವ ಮೂಲಕ ನೂತನ ವಿತರಣಾ ಸೇವೆಗೆ ಅಧಿಕೃತ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.