ಬಪ್ಪನಾಡು ಕ್ಷೇತ್ರ ಭಜನೆಗಳ ಆಡಿಯೋ ಬಿಡುಗಡೆ

KannadaprabhaNewsNetwork |  
Published : Feb 01, 2026, 03:15 AM IST
ಬಪ್ಪನಾಡು ಕ್ಷೇತ್ರ ಭಜನೆಗಳ ಆಡಿಯೋ ಬಿಡುಗಡೆ  | Kannada Prabha

ಸಾರಾಂಶ

ಸತ್ಯಸಾಯಿ ಬಾಬಾ ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿದ ಸವಿನೆನಪಿನ ಸ್ಮರಣಾರ್ಥವಾಗಿ ಬಪ್ಪನಾಡು ದುರ್ಗಾ ಪಾರಾಯಣ ಗುಂಪು ವತಿಯಿಂದ ಬಪ್ಪನಾಡು ದೇವಸ್ಥಾನದಲ್ಲಿ ಬಪ್ಪನಾಡು ಅಮ್ಮನವರ ಮೂರು ಭಜನೆಗಳ ಆಡಿಯೋ ಬಿಡುಗಡೆ

ಮೂಲ್ಕಿ: ಸತ್ಯಸಾಯಿ ಬಾಬಾ ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿದ ಸವಿನೆನಪಿನ ಸ್ಮರಣಾರ್ಥವಾಗಿ ಬಪ್ಪನಾಡು ದುರ್ಗಾ ಪಾರಾಯಣ ಗುಂಪು ವತಿಯಿಂದ ಬಪ್ಪನಾಡು ದೇವಸ್ಥಾನದಲ್ಲಿ ಬಪ್ಪನಾಡು ಅಮ್ಮನವರ ಮೂರು ಭಜನೆಗಳ ಆಡಿಯೋ ಬಿಡುಗಡೆ ನಡೆಯಿತು.

ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಆಡಿಯೋ ಬಿಡುಗಡೆ ಮಾಡಿದರು. ದೇವಳ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಮತ್ತು ಪ್ರಧಾನ ಅರ್ಚಕ ಬಿ. ನರಸಿಂಹ ಭಟ್. ಬಪ್ಪನಾಡು ದುರ್ಗಾ ಪಾರಾಯಣ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು, ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಟ್ರಸ್ಟಿ ಗೀತಾ ಕುಮಾರ್, ಪುತ್ತೂರಿನ ಪ್ರಶಾಂತಿ ಸದ್ಭಾವನ ಟ್ರಸ್ಟ್ ಅಧ್ಯಕ್ಷ ಸಿ. ಎಂ. ಮಧುಸೂದನ್ ನಾಯಕ್‌ , ಭಜನೆ ರಚನೆಕಾರ ಅದಮಾರು ರಾಮಕೃಷ್ಣ ಭಟ್‌ ಎಂ ರಾಜಗೋಪಾಲಾಚಾರ್ಯ, ಸುಲೋಚನ ಜನಾರ್ದನ್ ಉಚ್ಚಿಲ್, ಗಾಯಕಿ ಶ್ರೀ ಸತ್ಯಸಾಯಿ ಸಂಸ್ಥೆ ಉತ್ತರ ವಿಭಾಗದ ಮಾಜಿ ರಾಜ್ಯ ಆಧ್ಯಾತ್ಮಿಕ ಸಂಯೋಜಕಿ ಮಂಜುಳಾ ಪ್ರಭಾಕರ್‌ರಾವ್, ಸಂಗೀತ ನಿರ್ದೇಶಕ ಭಾಸ್ಕರ ರಾವ್, ಸಂಸ್ಥೆಯ ನಾಗರಾಜ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ