ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಸುರತ್ಕಲ್‌ವರೆಗೆ ಸರ್ವಿಸ್ ರಸ್ತೆ ಕಾಮಗಾರಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ದೇವಳದ ಗೋಪುರವನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ದೇವಳದ ಸ್ವಾಗತ ಗೋಪುರ, ಕಾಣಿಕೆ ಡಬ್ಬಿ ಮತ್ತು ಸ್ಮಾರಕಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ದೇವಳಕ್ಕೆ ಪರಿಹಾರ ಧನ ನೀಡಲಾಗಿತ್ತು.
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರದಿಂದ ಸುರತ್ಕಲ್‌ವರೆಗೆ ಸರ್ವಿಸ್ ರಸ್ತೆ ಕಾಮಗಾರಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ದೇವಳದ ಗೋಪುರವನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ದೇವಳದ ಸ್ವಾಗತ ಗೋಪುರ, ಕಾಣಿಕೆ ಡಬ್ಬಿ ಮತ್ತು ಸ್ಮಾರಕಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ದೇವಳಕ್ಕೆ ಪರಿಹಾರ ಧನ ನೀಡಲಾಗಿತ್ತು.
1999ರಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತವರ ಸಹೋದರ ತಮ್ಮ ಹೆತ್ತವರ ನೆನಪಿಗಾಗಿ ದೇವಳದ ಪೂರ್ವ ದಿಕ್ಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸ್ವಾಗತ ಗೋಪುರ ನಿರ್ಮಿಸಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ನಿರ್ಮಾಣವಾಗಲಿರುವುದರಿಂದ ಹೆದ್ದಾರಿ ಇಲಾಖೆಯು ತೆರವುಗೊಳಿಸಲು ನಿರ್ಧರಿಸಿತ್ತು. ಮೂಲ್ಕಿಯ ಸಿವಿಲ್ ಇಂಜಿನಿಯರ್ ಜೀವನ್ ಶೆಟ್ಟಿ ಅವರು ಉತ್ತರ ಭಾರತದ ಇಂಜಿನಿಯರ್ ಗಳನ್ನು ಕರೆಸಿ ಸ್ವಾಗತ ಗೋಪುರವನ್ನು ಇದ್ದಂತೆಯೆ ತೆಗೆದು ಬೇರೆ ಕಡೆ ಇರಿಸಿ ಮತ್ತೆ ಪುನಾಸ್ಥಾಪಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಸುಮಾರು 10 ಲಕ್ಷ ರು. ವೆಚ್ಚ ತಗುಲಲಿದ್ದು ಸ್ಥಳಾಂತರ ಪ್ರಕ್ರಿಯೆಗೆ ಪೂರಕವಾಗಿ ಸ್ವಾಗತ ಗೋಪುರದ ತುದಿಯವರೆಗೆ ಕಲ್ಲುಗಳನ್ನು ಕಟ್ಟಲಾಗಿತ್ತು. ಸ್ವಾಗತ ಗೋಪುರ ತೆರವುಗೊಳಿಸುವ ಸಂದರ್ಭ ದೇವಳಕ್ಕೆ ಆಗಮಿಸುವ ವಾಹನಗಳಿಗೆ ಸ್ವಾಗತ ಗೋಪುರದ ಬದಿಯಲ್ಲಿ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯವರು ಈಗಾಗಲೇ ರಸ್ತೆ ಬದಿಯಲ್ಲಿದ್ದ ಸ್ಮಾರಕಗಳನ್ನು ತೆಗೆದಿದ್ದು ಎರಡು ದಿನಗಳ ಹಿಂದೆ ಕ್ರೇನ್ ಮೂಲಕ ಹೆದ್ದಾರಿ ಬದಿಯಲ್ಲಿದ್ದ ದೇವಳದ ಕಾಣಿಕೆ ಹುಂಡಿಯನ್ನು ಸ್ಥಳಾಂತರಿಸಲಾಗಿದೆ. ಸ್ವಾಗತ ಗೋಪುರದ ಸ್ಥಳಾಂತರದ ಪ್ರಕ್ರಿಯೆ ಸುಮಾರು 15 ದಿನಗಳಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಯಾವುದೇ ಕಡೆಯಲ್ಲಿ ಯಾವುದೇ ಕಟ್ಟಡವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಆದರೆ ಇಲ್ಲಿ ನೂತನ ತಂತ್ರಜ್ಞಾನ ಮೂಲಕ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ದ್ವಾರದ ಸ್ಥಳಾಂತರ ಕಾರ್ಯ ಆರಂಭಗೊಂಡಿಲ್ಲ. ಅದಕ್ಕೆ ಪೂರಕವಾಗಿ ಇತರ ಕಾರ್ಯಗಳು ನಡೆಯುತ್ತಿದ್ದು ಸ್ಥಳಾಂತರ ಕಾರ್ಯ ತುಂಬಾ ಸಮಯ ತೆಗೆದುಕೊಳ್ಳಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.