ಹಳಿಯಾಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಮತ್ತ ಸೇವೆಯ ಸಂದೇಶಗಳು ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ದೇಶದ ಮೇಲಿನ ಅಚಲ ನಿಷ್ಠೆ ಇಂದಿಗೂ ದೇಶವಾಸಿಗಳಿಗೂ ಸ್ಫೂರ್ತಿಯ ಸೆಲೆಯಾಗಿವೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಗಾಂಧೀಜಿಯವರು ನಡೆ- ನುಡಿಗಳು ಅವರು ನೀಡಿದ ಸಂದೇಶಗಳು, ಅವರ ತ್ಯಾಗಮಯ ಜೀವನ ಇಂದಿನ ಪೀಳಿಗಗೆ ಮಾದರಿಯಾಗಿದೆ. ಅದೇ ರೀತಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರು ನೀಡಿದ ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯ ದೇಶದ ಭದ್ರತೆಗೆ ಶ್ರಮಿಸುವ ಸೈನಿಕರು ಹಾಗೂ ದೇಶದ ಬೆನ್ನೆಲುಬಾದ ರೈತರ ಮಹತ್ವವನ್ನು ಜಗತ್ತಿಗೆ ಸಾರಿದವು ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ವಹಿಸಿದ್ದರು. ಪಕ್ಷದ ವಕ್ತಾರ ಉಮೇಶ ಬೊಳಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಶಂಕರ ಬೆಳಗಾಂವಕರ, ಬಿ.ಡಿ. ಚೌಗಲೆ, ಸಂಬಾಜಿ ವಾಲೇಕರ, ಸತ್ಯಜಿತ ಗಿರಿ, ರವಿ ತೋರಣಗಟ್ಟಿ, ಮಾರುತಿ ಕಲಬಾವಿ, ವಿಷ್ಣು ಮಿಶಾಳೆ, ಶಿವಾಜಿ ಡಾಂಗೇ, ಎಚ್.ಪಿ. ಪರಶುರಾಮ, ಖಲೀದ ದುಸಗಿ, ಮಾಲಾ ಬೃಗಾಂಜಾ, ಸುವರ್ಣ ಮಾದರ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು. ದೇಮಾಣಿ ಶಿರೋಜಿಯವರು ಕಾರ್ಯಕ್ರಮ ನಿರ್ವಹಿಸಿದರು.
ಸ್ವಚ್ಛತಾ ಆಂದೋಲನಕ್ಕೆ ತೆರೆ ಎಳೆದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳಿಯಾಳ ರೋಟರಿ ಕ್ಲಬಿನ್ ಅಧ್ಯಕ್ಷ ಕಮಲ ಸಿಕ್ವೇರಾ, ಪದಾಧಿಕಾರಿಗಳಾದ ಮಂಗಲಾ ಕಶೀಲಕರ, ವಕೀಲ ಸುರೇಖಾ ಗುನಗಾ, ಕರವೇ ಅಧ್ಯಕ್ಷ ಬಸವರಾಜ್ ಬೆಂಡಿಗೇರಿಮಠ, ಪಡ್ನೀಸ್, ಜಿ.ಡಿ., ಗಂಗಾಧರ, ಪುರಸಭೆಯ ಸಿಬ್ಬಂದಿ ಇದ್ದರು.