ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಯೂ ಗಣನೆಗೆ ಬರುತ್ತದೆ. ಯುವಕರಿಗಾಗಿ ಮೋದಿಯವರು ಮೇಕ್ ಇನ್ ಇಂಡಿಯಾ, ಕೌಶಲ್ಯಾಭಿವೃದ್ಧಿ, ಮುದ್ರಾ ಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಸಿದ್ದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೆಂದು ವಿಚಲಿತರಾಗುವ ಅಗತ್ಯತೆಯಿಲ್ಲ. ಕಳೆದ ೧೨ ವರ್ಷಗಳಿಂದ ವಿಧಾನಪರಿಷತ್ ಸದಸ್ಯನಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಹೇಳಿದರು.
ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸಂಘಟಿಸಿದ್ದ ಘಟನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರರ ಕ್ಷೇತ್ರವು ಬಹಳ ವಿಶಾಲವಾಗಿದ್ದು, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಿದೆ. ಒಟ್ಟೂ ೩೬ ತಾಲೂಕುಗಳು, ೨೩ ಶಾಸಕರು, ೪ ಸಂಸದರಿದ್ದಾರೆ. ಒಟ್ಟಾರೆಯಾಗಿ ೮೮ ಸಾವಿರಕ್ಕೂ ಮೀರಿ ಮತದಾರರಿದ್ದು, ಮತದಾನದ ಪ್ರಮಾಣ ಶೇ. ೯೦ಕ್ಕಿಂತ ಹೆಚ್ಚಾದಲ್ಲಿ ಶೇ. ೮೦ರಷ್ಟು ಮತಗಳು ಬಿಜೆಪಿಗೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆಯೂ ಗಣನೆಗೆ ಬರುತ್ತದೆ. ಯುವಕರಿಗಾಗಿ ಮೋದಿಯವರು ಮೇಕ್ ಇನ್ ಇಂಡಿಯಾ, ಕೌಶಲ್ಯಾಭಿವೃದ್ಧಿ, ಮುದ್ರಾ ಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇಲಾಖೆಗಳ ನೌಕರರು, ನಿವೃತ್ತ ನೌಕರರು, ನಿರುದ್ಯೋಗಿ ಪದವೀಧರರು, ಸ್ವಯಂ ಉದ್ಯೋಗ ನಡೆಸುತ್ತಿರುವ ಪದವೀಧರರು ಕ್ಷೇತ್ರದ ಮತದಾರರಾಗಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಅ. ೨೩ರಂದು ಚುನಾವಣೆ ನಡೆಯಲಿದ್ದು, ಪಕ್ಷದಲ್ಲಿ ವಿವಿಧ ಹಂತದ ಜವಾಬ್ದಾರಿ ಹೊತ್ತಿರುವವರು, ಘಟನಾಯಕರು, ಘಟ ಪ್ರಮುಖರು, ಉಸ್ತುವಾರಿಗಳು ಎಲ್ಲ ಪದವೀಧರರೂ ಮತ ಹಾಕಲು ಬರುವಂತೆ ಮಾಡುವಲ್ಲಿ ಪ್ರಯತ್ನಶೀಲರಾಗಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹರ್ತೆಬೈಲ, ಶಿವಾಜಿ ನರಸಾನಿ, ವಿಶೇಷ ಆಹ್ವಾನಿತ ಸುರೇಶ ನಾಯ್ಕ ಇತರರು ಉಪಸ್ಥಿತರಿದ್ದರು. ಉಸ್ತುವಾರಿ ಮಂಜುನಾಥ ಭಟ್ಟ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಕಾರ್ಯದರ್ಶಿ ತೋಟಪ್ಪ ನಾಯ್ಕ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.