ಸ್ವಚ್ಛತೆಯೇ ಮಹಾತ್ಮರಿಗೆ ನೀಡುವ ಗೌರವ

KannadaprabhaNewsNetwork |  
Published : Oct 03, 2026, 02:30 AM IST
ಫೋಟೋವಿವರ- (2ಎಚ್‌ಪಿಟಿ5)  ಹೊಸಪೇಟೆ ನಗರದ ವಡಕರಾಯ ದೇವಸ್ಥಾನದ ಯೋಗ ಕೇಂದ್ರದಲ್ಲಿ ಶುಕ್ರವಾರ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ನಮ್ಮ ಮನೆ ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರ ಸಹ ಸ್ವಚ್ಛವಾಗಿಡಬೇಕು. ನಾಲ್ಕು ಬಗೆಯ ಕಸ ವಿಂಗಡಿಸಿ ನೀಡಬೇಕು

ಹೊಸಪೇಟೆ: ಮಹಾತ್ಮ ಗಾಂಧೀಜಿ ನುಡಿದಂತೆ ನಡೆದವರು, ಸ್ವಚ್ಛತೆ ಜೀವನದ ಉಸಿರಾಗಿ ಮಾಡಿಕೊಂಡವರು. ನಮ್ಮ ಪರಿಸರ ಪ್ರತಿನಿತ್ಯ ಸ್ವಚ್ಛವಾಗಿಡುವುದೇ ಮಹಾತ್ಮರಿಗೆ ನೀಡುವ ನಿಜವಾದ ಗೌರವವಾಗಿರುತ್ತದೆ ಎಂದು ನಗರಸಭೆಯ ಸ್ವಚ್ಛತಾ ವಿಭಾಗದ ಸಮುದಾಯ ಸಂಘಟಕಿ ಗಂಗಮ್ಮ ಹೇಳಿದರು.

ಇಲ್ಲಿನ ವಡಕರಾಯ ದೇವಸ್ಥಾನದ ಯೋಗ ಕೇಂದ್ರದಲ್ಲಿ ಶುಕ್ರವಾರ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಮನೆ ಮಾತ್ರವಲ್ಲ, ಸುತ್ತಮುತ್ತಲಿನ ಪರಿಸರ ಸಹ ಸ್ವಚ್ಛವಾಗಿಡಬೇಕು. ನಾಲ್ಕು ಬಗೆಯ ಕಸ ವಿಂಗಡಿಸಿ ನೀಡಬೇಕು. ಕಸ ಎಲ್ಲೆಂದರಲ್ಲಿ ಚೆಲ್ಲಿದರೆ ದಂಡ ವಿಧಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಆದೇಶವೂ ಇರುವುದನ್ನು ಜನತೆ ಮರೆಯಬಾರದು ಎಂದರು.

ಮನೆ ಮನೆಗಳಿಂದ ಕಸ ಸಂಗ್ರಹಿಸಲು ಬರುವ ವಾಹನಗಳಿಗೆ ಕಸ ವಿಂಗಡಿಸಿ ಹಾಕುವ ವಿಧಾನ, ಜನರ ಹೊಣೆಗಾರಿಕೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅವರು, ಪ್ರಧಾನಿ ಮೋದಿ ಅವರಿಂದ 2014 ರಿಂದ ಸ್ವಚ್ಛತೆ ಬಗ್ಗೆ ಅರಿವು ಹೆಚ್ಚಾಗಿದ್ದರೂ ಅದು ಇನ್ನಷ್ಟು ಸುಧಾರಿಸಬೇಕಿದೆ, ಸ್ವಚ್ಛತೆ ಎಂಬುದು ನಮ್ಮ ರಕ್ತಗತವಾದಾಗ ಮಾತ್ರ ಸಮುದಾಯದ ಸ್ವಾಸ್ಥವೂ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.

ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಇ. ಸತ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಮುಖ ಬಾಲಚಂದ್ರ ಶರ್ಮಾ, ಪ್ರೊ. ಎಫ್‌.ಟಿ. ಹಳ್ಳಿಕೇರಿ, ರಾಜ್ಯ ಮಾಧ್ಯಮ ಪ್ರಭಾರಿ ಅನಂತ ಜೋಶಿ, ಉಮಾ ವಿಶ್ವನಾಥ್‌, ಗೀತಾ ಮಹಾರಾಜ್‌, ಲಲಿತಾ ಪಾಟೀಲ್‌, ನಗರದ ಎಲ್ಲ ಯೋಗ ಕೇಂದ್ರಗಳ ಸಂಚಾಲಕರು, ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯ ಮಾಧ್ಯಮ ಪ್ರಬಾರಿ ಅನಂತ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಕಳಕಪ್ಪ ನಿರೂಪಿಸಿದರು, ಆರಂಭದಲ್ಲಿ ನಿತ್ಯದಂತೆ ಯೋಗ ಶಿಬಿರ ನಡೆದ ಬಳಿಕ ಬಾಪೂಜಿಗೆ ಇಷ್ಟವಾದ ಭಜನೆ ಪ್ರಸ್ತುತಪಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ