ಸರಳ ಜೀವನ, ಆದರ್ಶಗಳು ಬೆಳವಣಿಗೆಗೆ ಪೂರಕ

KannadaprabhaNewsNetwork |  
Published : Oct 03, 2026, 02:30 AM IST
ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಮಹಾತ್ಮ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆಯನ್ನು ಆಚರಿಸಿ ಪ್ರಾಚಾರ್ಯ ಡಾ.ಎಂ.ರವಿಕುಮಾರ ಮಾತನಾಡಿದರು. | Kannada Prabha

ಸಾರಾಂಶ

ಗಾಂಧೀಜಿ ನೆನಪು ಸದಾ ಇರುವಂತೆ ಮಾಡಿದೆ. ಇದರ ಜತೆಗೆ ಸ್ವದೇಶಿ ಚಳವಳಿ ಸ್ವಚ್ಛತೆ ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ಸಮಾನತೆಯ ಚಿಂತನೆ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಯವರಲ್ಲಿ ಅಳವಡಿಸಿಕೊಂಡ ಕಾರಣಕ್ಕಾಗಿ ಅವರ ಎಲ್ಲ ಬಗೆಯ ಹೋರಾಟಕ್ಕೆ ಜಯ ತಂದಿತು

ಕೊಟ್ಟೂರು: ಸತ್ಯ, ಅಹಿಂಸೆ, ಶಾಂತಿ, ಸ್ವಚ್ಛತೆ ಮತ್ತು ಸರಳ ಜೀವನದ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ರಾಷ್ಟ್ರದ ಹಿರಿಯ ಚೇತನರನ್ನು ಸದಾ ಸ್ಮರಿಸಿಕೊಳ್ಳಬೇಕಿದೆ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ರವಿಕುಮಾರ ಹೇಳಿದರು.

ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ಅಂಗವಾಗಿ ಈ ಇಬ್ಬರ ಮಹಾನ್ ಚೇತನರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಜನ್ಮ ದಿನಾಚರಣೆ ಆಚರಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸತ್ಯ, ಅಹಿಂಸೆಯ ತತ್ವ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು, ಗಾಂಧೀಜಿ ನೆನಪು ಸದಾ ಇರುವಂತೆ ಮಾಡಿದೆ. ಇದರ ಜತೆಗೆ ಸ್ವದೇಶಿ ಚಳವಳಿ ಸ್ವಚ್ಛತೆ ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ಸಮಾನತೆಯ ಚಿಂತನೆ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಯವರಲ್ಲಿ ಅಳವಡಿಸಿಕೊಂಡ ಕಾರಣಕ್ಕಾಗಿ ಅವರ ಎಲ್ಲ ಬಗೆಯ ಹೋರಾಟಕ್ಕೆ ಜಯ ತಂದಿತು ಎಂದು ಹೇಳಿದರು.

ದೇಶ ಭಕ್ತಿ, ಶಿಸ್ತು ಸ್ವಚ್ಛತೆ, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳಸಿಕೊಳ್ಳುವತ್ತ ಮುಂದಾಗುವ ಮೂಲಕ ವಿದ್ಯಾರ್ಥಿಗಳು ಸದಾ ಈ ಇಬ್ಬರು ಮಹಾತ್ಮರ ನೆನಪನ್ನು ಹಸಿರಾಗಿಸಿಕೊಳ್ಳಬಹುದಾಗಿದೆ ಎಂದರು.

ಹಿರಿಯ ಉಪನ್ಯಾಸಕ ಡಾ. ಜೆ.ಬಿ. ಸಿದ್ದನಗೌಡ್ರು, ಸಿ.ಬಸವರಾಜ, ಶ್ರೀನಿವಾಸ ನಾಯ್ಕ, ಸ್ವಾಮಿ ಆರಾಧ್ಯ ಮಠ್, ಉಮೇಶ ಕೆ, ಕೂಡ್ಲಿಗಿ ಕೊಟ್ರೇಶ, ಶಿವಪ್ರಕಾಶ, ಕರಿಬಸವಯ್ಯ ಸ್ವಾಮಿ, ಕೊಟ್ರೇಶ, ಎನ್ ಸಿಸಿ ಅಧಿಕಾರಿ ಬಸವರಾಜ್ ಬಿ ಮತ್ತಿತರರು ಮತ್ತು ವಿದ್ಯಾರ್ಥಿಗಳು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ