ಕುರುಗೋಡು: ಇಲ್ಲಿನ ತಾಲೂಕಾಡಳಿತ ಕಚೇರಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತಿ ಶುಕ್ರವಾರ ಆಚರಿಸಿದರು.
ನಿಜ ಅಥವಾ ಸತ್ಯದ ಪರಿಶೋಧನೆಯೆಂಬ ವಿಸ್ತ್ರತ ಉದ್ದೇಶಕ್ಕಾಗಿ ಗಾಂಧೀಜಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೇಯೇ ಪ್ರಯೋಗ ಮಾಡಿಕೊಂಡು ಅದನ್ನು ಸಾಧಿಸಲು ಯತ್ನಿಸಿದವರು. ಬರಿ ಯುದ್ದದಿಂದ ಅಲ್ಲ ಶಾಂತಿಯಿಂದಲೂ ಏನು ಬೇಕಾದರೂ ಸಾಧಿಸಬಹುದು ಎಂದು ವಿಶ್ವಕ್ಕೆ ತೋರಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧಿ ತತ್ವ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ಗಾಂಧೀಜಿ ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗ್ರಾಪಂ ಮುಖಾಂತರ ಅನೇಕ ಜನಪರ ಯೋಜನೆ ಜಾರಿಗೆ ತಂದಿವೆ. ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸರಳತೆ ಎಂದರೆ ದುರ್ಬಲತೆ ಅಲ್ಲ. ಅದು ಮಹತ್ವದ ಶಕ್ತಿ ಎಂಬುದನ್ನು ತೋರಿಸಿದ ಮಹಾನ್ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ. ಅವರ ಜೀವನ ಶೈಲಿಯೇ ತ್ಯಾಗದ ಪಾಠಶಾಲೆಯಾಗಿತ್ತು ಎಂದರು.