ಬಾರ್ಕೂರು-ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ

KannadaprabhaNewsNetwork | Published : Dec 18, 2024 12:50 AM

ಸಾರಾಂಶ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಎಂಜಿಎಂ ಕಾಲೇಜುಗಳ ಆಶ್ರಯದಲ್ಲಿ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಎಂಜಿಎಂ ಕಾಲೇಜುಗಳ ಆಶ್ರಯದಲ್ಲಿ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆ ಶನಿವಾರ ನಡೆಯಿತು.ಸ್ಪರ್ಧೆಯಲ್ಲಿ ಚಿತ್ರಕಲಾವಿದೆ ಪುಷ್ಪಾಂಜಲಿ ಮಂಗಳೂರು, ಚಿತ್ರಕಲಾ ಶಿಕ್ಷಕ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕೇಂದ್ರದ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್ ಕಾರ್ಯಕ್ರಮ ನಿರ್ವಹಿಸಿದರು. ಆರ್.ಜಿ.ಪೈ ಹಾಗೂ ಆರ್.ಆರ್.ಸಿಯ ಸಿಬ್ಬಂದಿ ಕಾರ್ಯಕ್ರಮ ಆಯೋಜಿಸಿದ್ದರು.ವಿಜೇತರ ವಿವರ:

ಪೂರ್ವಪ್ರಾಥಮಿಕ ವಿಭಾಗ- ೧ರಿಂದ ೪ನೇ ತರಗತಿ ವಿಷಯ: ಐಚ್ಛಿಕ

ತೇಜಸ್ವಿ ಯು. ರಾವ್, ಮುಕುಂದಕೃಪಾ ಆಂಗ್ಲಮಾಧ್ಯಮ ಶಾಲೆ, ಉಡುಪಿ - ಪ್ರಥಮ, ಆರ್ಯ ಪೈ, ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್, ಉಡುಪಿ - ದ್ವಿತೀಯ, ದೇಷ್ಣ ಕುಲಾಲ್, ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ - ತೃತೀಯ, ಪ್ರವಿತ್ ವಿ., ಅಮೃತಭಾರತಿ ವಿದ್ಯಾ ಕೇಂದ್ರ, ಹೆಬ್ರಿ -ಸಮಾಧಾನಕರಪ್ರಾಥಮಿಕ ವಿಭಾಗ- ೫ರಿಂದ ೭ನೇ ತರಗತಿ ವಿಷಯ: ಐಚ್ಛಿಕ

ನಿಹಾರ್ ಜೆ. ಎಸ್., ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ -ಪ್ರಥಮ, ನಿಧಿಶ್ ಜೆ. ನಾಯ್ಕ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ -ದ್ವಿತೀಯ, ಪ್ರಿಯದರ್ಶಿನಿ ಎಸ್.ಡಿ, ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ- ತೃತೀಯ, ಸುಗೋಶ್ ಎಸ್. ಸಾಲ್ಯಾನ್, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ - ಸಮಾಧಾನಕರ೮ರಿಂದ ೧೦ನೇ ತರಗತಿ - ವಿಷಯ: ಮಕ್ಕಳ ದಿನಾಚರಣೆ ಅಥವಾ ಸಂತೆ

ಧನ್ವಿ ವಿ. ಪೂಜಾರಿ, ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ-ಪ್ರಥಮ, ಸಿಂಚನ ಮೆಂಡನ್, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ- ದ್ವಿತೀಯ, ಕೃಷ್ಣಪ್ರಸಾದ್ ಭಟ್, ಅಮೃತಭಾರತಿ ವಿದ್ಯಾಕೇಂದ್ರ, ಹೆಬ್ರಿ - ತೃತೀಯ, ಅವನಿ ಎಂ. ಮೆಸ್ತಾ, ಸರ್ಕಾರಿ ಹೆಣ್ಣುಮಕ್ಕಳ ಶಾಲೆ, ಉಡುಪಿ, ಸಮಾಧಾನಕರ

ಪದವಿಪೂರ್ವ ವಿಭಾಗ : ವಿಷಯ: ಕನ್ನಡ ಜ್ಞಾನಪೀಠ ಪುರಸ್ಕೃತರು ಅಥವಾ ಪರಿಸರ ಸಂರಕ್ಷಣೆ

ನಿಧಿಶ್, ಕೆ.ಪಿ.ಎಸ್. ಹಿರಿಯಡ್ಕ- ಪ್ರಥಮ, ಚೈತನ್ಯ ಗಣೇಶ್ ಪೂಜಾರಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ-ದ್ವಿತೀಯ, ಶ್ರೀಶಾಂತ್ ಆಚಾರ್ಯ, ಪೂರ್ಣಾ ಪ್ರಜ್ಞಾ ಕಾಲೇಜು, ಉಡುಪಿ-ತೃತೀಯ, ಶರಧಿ, ವಿವೇಕ ಪದವಿಪೂರ್ವ ಕಾಲೇಜು, ಕೋಟ - ಸಮಾಧಾನಕರ

ಪದವಿ ವಿದ್ಯಾರ್ಥಿಗಳಿಗೆ ವಿಷಯ: ಪ್ಲಾಸ್ಟಿಕ್ ಪೊಲ್ಯೂಷನ್ ಅಥವಾ ಇಂಡಿಯನ್ ಹೆರಿಟೇಜ್

ಆಶ್ಲೇಷ್ ಆರ್. ಭಟ್, ಚಿತ್ರಕಲಾ ಮಂದಿರ ಉಡುಪಿ - ಪ್ರಥಮ, ಮಿಥುನ್ ಕುಮಾರ್ ಚಿತ್ರಕಲಾ ಮಂದಿರ ಉಡುಪಿ- ದ್ವಿತೀಯ, ಅನಿಶ್, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ- ತೃತೀಯ

Share this article