ರೋಣ: ಸ್ಥಳೀಯ ಪುರಸಭೆ 2ನೇ ಅವಧಿಯ ಉಳಿದ ಅವಧಿಗೆ ನೂತನ ಅಧ್ಯಕ್ಷರಾಗಿ 18ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷರಾಗಿ 22ನೇ ವಾರ್ಡ್‌ನ ಸದಸ್ಯ ಹನುಮಂತಪ್ಪ ತಳ್ಳಿಕೇರಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿಯಾಗಿ ತಹಸೀಲ್ದಾರ್ ನಾಗರಾಜ ಕೆ. ಕಾರ್ಯ ನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸಮ್ಮ ಕೊಪ್ಪದ, ಉಪಾಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ತಳ್ಳಿಕೇರಿ ಅವರನ್ನು ಪುರಸಭೆ ಸಭಾಭವನದಲ್ಲಿ ಪುರಸಭೆ ಮುಖ್ಯಾಧಿಕಾರಿ, ಸದಸ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದರು. ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು.ನಿಕಟಪೂರ್ವ ಅಧ್ಯಕ್ಷೆ ಗೀತಾ ಮಾಡಲಗೇರಿ, ನಿಕಟಪೂರ್ವ ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸದಸ್ಯರಾದ ಮಿಥುನ ಪಾಟೀಲ, ಗದಿಗೆಪ್ಪ ಕಿರೇಸೂರ, ಬಾವಾಸಾಬ ಬೇಟಗೇರಿ, ಮಲ್ಲಯ್ಯ ಮಹಾಪುರುಷಮಠ, ದಾವಲಸಾಬ ಬಾಡಿನ, ಚನ್ನಬಸಮ್ಮ ಹಿರೇಮಠ, ರಂಗವ್ವ ಭಜಂತ್ರಿ, ಶಕುಂತಲಾ ಚಿತ್ರಗಾರ, ವಿದ್ಯಾ ದೊಡ್ಡಮನಿ, ಸಂಗಪ್ಪ ಜಿಡ್ಡಿಬಾಗೀಲ, ಅಫ್ತಾಬ್ ಅಹ್ಮದ ತಹಶೀಲ್ದಾರ, ಈಶ್ವರ ಕಡಬಿನಕಟ್ಟಿ, ಅಂದಪ್ಪ ಗಡಗಿ, ಹಿರಿಯ ಮುಖಂಡ ವಿ.ಆರ್. ಗುಡಿಸಾಗರ, ಆನಂದ ಚಂಗಳಿ, ಲಕ್ಷ್ಮೀ ಗಡಗಿ, ನಾಜಬೇಗಂ ಯಲಿಗಾರ ಇದ್ದರು.