ಕನ್ನಡಪ್ರಭ ವಾರ್ತೆ ಮಂಡ್ಯ
ದೇವಾಲಯದ ಹಿಂದಿನ ಅರ್ಚಕರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಹೊಸ ಅರ್ಚಕರ ನೇಮಕಕ್ಕೆ ಸೋಮವಾರ ದಿನ ನಿಗದಿಪಡಿಸಿತ್ತು. ಗ್ರಾಮದ ಶ್ರೀ ಬಲಮುರಿ ಗಣಪತಿ ದೇವಸ್ಥಾನ ಆವರಣದಲ್ಲಿ ಚನ್ನಪಟ್ಟಣದ ‘ಶಿವ ಸಾರಥಿ ಬಸಪ್ಪ’ನನ್ನು ಕರೆತಂದು ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮದ ಶ್ರೀದೊಡ್ಡಯ್ಯ ಸ್ವಾಮಿ ಬಸವಪ್ಪನ ಸಮೇತ, ತಮಟೆ, ನಗರಿ, ವಾದ್ಯಗಳ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀದೊಡ್ಡಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅರ್ಚಕರ ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು.
ಶ್ರೀಮಡಿವಾಳ ಮಾಚಿ ದೇವರ ಕುಲಬಾಂಧವರು ಯಾರೆಲ್ಲಾ ಅರ್ಚಕರಾಗಬೇಕು ಎಂಬುವರು ಬಸವನ ಎದುರಿಗೆ ಸಾಲಾಗಿ ಹತ್ತು ಮಂದಿ ಕುಳಿತರು. ಬಸಪ್ಪನ ಪವಾಡ ನೋಡಲು ನೂರಾರು ಭಕ್ತರು ಹಾಜರಿದ್ದರು.ಅರ್ಚಕರಾಗಲು ಕುಳಿತಿದ್ದವರ ಪೈಕಿ ಗಿರೀಶ್ ಎಂಬುವವರನ್ನು ಗುರುತಿಸಿ ತಲೆಯಿಂದ ಬೆನ್ನಿಗೆ ಸವರಿ ಆಯ್ಕೆ ಮಾಡಿತು. ನಂತರ ನೂತನ ಅರ್ಚಕರಿಗೆ ಸ್ನಾನ ಮಾಡಿಸಿ ದೇವಸ್ಥಾನಕ್ಕೆ ಕರೆತಂದು ದೇವತಾ ಕಾರ್ಯಗಳನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಮುಖಂಡರಾದ ಸದಾನಂದ, ಶಂಕರ್ ಪೂಜಾರಿ, ಯೋಗೇಶ್ ಕುಮಾರ್, ಪುಟ್ಟಸ್ವಾಮಿ, ನಾಗರಾಜು, ಕುಮಾರ್, ಜಯಸ್ವಾಮಿ, ಪುಟ್ಟ ಹುಚ್ಚಯ್ಯ, ಹಾಗೂ ಶ್ರೀ ಮಡಿವಾಳ ಮಾಚಿದೇವರ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಜಗದೀಶ್, ಗುಣಶೇಖರ, ಕುಮಾರ್ ಮಡಿವಾಳ್, ನಾಗರಾಜ್ (ರೈತ ಸಂಘ), ತಾಂಡವ್, ಅಮಾವಾಸ್ಯೆ ಕುಮಾರ್, ಮಂಜುನಾಥ್, ರವಿಕುಮಾರ್ (ಬೆಲ್ಲ) ಇತರರಿದ್ದರು.