ಹನೂರಲ್ಲೂ ಬಸವ ಜಯಂತಿ ಆಚರಣೆ

KannadaprabhaNewsNetwork |  
Published : May 10, 2024, 11:49 PM IST
10ಸಿಎಚ್‌ಎನ್‌52ಹನೂರು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಗಳಾದ ಶಾಂತಮ್ಮ ಮಲ್ಲಿಕಾರ್ಜುನ ಸ್ವಾಮಿ ಕಾರ್ಯದರ್ಶಿ ರಘು ಸಿಬ್ಬಂದಿ ವರ್ಗ ಇದ್ದರು. | Kannada Prabha

ಸಾರಾಂಶ

ಜಗಜ್ಯೋತಿ ಬಸವಣ್ಣ ಭಕ್ತಿ ಭಂಡಾರಿ ವಿಶ್ವಗುರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಜನರಲ್ಲಿ ಜ್ಞಾನ ದೀವಿಗೆ ಹಚ್ಚಿದ ಮಹಾನು ಮಾನವತಾವಾದಿ ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಜಗಜ್ಯೋತಿ ಬಸವಣ್ಣ ಭಕ್ತಿ ಭಂಡಾರಿ ವಿಶ್ವಗುರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಜನರಲ್ಲಿ ಜ್ಞಾನ ದೀವಿಗೆ ಹಚ್ಚಿದ ಮಹಾನು ಮಾನವತಾವಾದಿ ಬಸವಣ್ಣನವರ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಬಹುದೊಡ್ಡ ಸಮಾಜದ ಸುಧಾರಕರು ಬಸವಣ್ಣನವರ ಸಾರಥ್ಯದಲ್ಲಿ ನಡೆದ ಬದಲಾವಣೆಯ ಚಿಂತನೆ ರೂಪಗೊಂಡ ಕಾಲವದು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟದಲ್ಲಿ ಬಸವಣ್ಣ ತಮ್ಮ ಸರಳ ವಚನಗಳ ಮೂಲಕ ಬದಲಾವಣೆಯನ್ನು ತರಲು ಪ್ರಯತ್ನಪಟ್ಟಿದ್ದರು.

ಬಸವಣ್ಣನವರ ಸಾಕ್ಷರತಾ ಕೃತಿಗಳು ವಚನಗಳು ಇಂದಿಗೂ ಎಲ್ಲರಿಗೂ ಮಾದರಿಯಾಗಿದೆ. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾಗಿರಬೇಕು ಎಂದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ, ಭಕ್ತಿ ಭಂಡಾರಿ ಜಗಜ್ಯೋತಿ ಬಸವಣ್ಣನವರು ಜ್ಞಾನದ ದೀವಿಗೆ ಬೆಳಗಿಸಿದ ವಿಶ್ವಗುರು ಬಸವಣ್ಣನವರ ಕೊಡುಗೆ ದೇಶಕ್ಕೆ ನೀಡಿದಂತಹ ಮಹಾನು ಗ್ರಂಥಗಳಿಂದ ದೇಶದಲ್ಲಿ ಅತ್ಯುತ್ತಮ ಸಮಾಜ ಸೇವಕರಲ್ಲಿ ಸಹ ಅವರು ಒಬ್ಬರಾಗಿದ್ದರು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಜಯಂತಿ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿರಬೇಕು ಎಂದು ತಿಳಿಸಿದರು. ಈ ವೇಳೆ ದಾಸೋಹ ಅಧಿಕಾರಿ ಸ್ವಾಮಿ ಮತ್ತು ಶಾಸ್ತ್ರಿ ಸರಗೂರು ಮಹದೇವಸ್ವಾಮಿ ಜನಾರ್ಧನ್ ಜಿ ಮಹದೇವಸ್ವಾಮಿ ಪಾರು ಪತ್ತೆಗಾರ ಮಲ್ಲಿಕಾರ್ಜುನ್, ಸಹಾಯಕ ಪಾರು ಪತ್ತೆಗಾರ ಪುಟ್ಟಯ್ಯ ರವೀಂದ್ರ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''