ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯ ಹರೀಶ್ ನೇತೃತ್ವದಲ್ಲಿ ಗ್ರಾಮದಿಂದ ಆಗಮಿಸಿದ್ದ ಮಹಿಳೆಯರು ಸೇರಿದಂತೆ ನೂರಾರು ಗ್ರಾಮಸ್ಥರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ತಾಲೂಕು ಆಡಳಿತ, ತಾಪಂ ಮತ್ತು ಗ್ರಾಪಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಬಸವನಪುರ ಗ್ರಾಮದ ಬೆಂಗಳೂರು ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಅತಿಕ್ರಮಣ ರಸ್ತೆಯನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮದ ರಸ್ತೆಯನ್ನು ಕೆಲವು ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಅಕ್ರಮ ಒತ್ತುವರಿಯನ್ನು ತೆರುವುಗೊಳಿಸುವಂತೆ ತಾಲೂಕು ಕಚೇರಿ ಎದುರು ಹಲವು ಬಾರಿ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದರೂ ಸಹ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ಹರೀಶ್ ಆರೋಪಿಸಿದರು.
ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಗ್ರೇಟ್ ಟು ತಹಸೀಲ್ದಾರ್ ಸೋಮಶೇಖರ್, ಭೂಮಾಪನಾಧಿಕಾರಿ ಭುವನ ಕುಮಾರ್ ಹಾಗೂ ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ಧರಣಿ ನಿರತರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೈರಮುಡಿ, ಕೃಷ್ಣ, ಶಿವಣ್ಣ,ಪುಟ್ಟಸ್ವಾಮಿ, ದಾಸಯ್ಯ, ಪುಟ್ಟ ಲಿಂಗಮ್ಮ, ಸತ್ಯ ಪ್ರೇಮ ಕುಮಾರಿ, ಜಯಮ್ಮ, ಪ್ರೇಮ, ನಿಂಗಮ್ಮ, ಪುಷ್ಪ, ಲಕ್ಷ್ಮಮ್ಮ, ಸುಧಾ, ಜಯಮ್ಮ , ಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.