ಕುಕನೂರು:
ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಜರುಗಿದ ಬಸವೇಶ್ವರ ಭಾವಚಿತ್ರ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಸಮಾಜದ ಮೌಢ್ಯಗಳನ್ನು ಹೋಗಲಾಡಿಸಲು ಬಸವೇಶ್ವರರು ಕಲ್ಯಾಣದಲ್ಲಿ ಸಮಾನತೆ ಕ್ರಾಂತಿ ಮಾಡಿದರು. ಅನುಭವ ಮಂಟಪದಲ್ಲಿ ಸಮಾಜದಲ್ಲಿ ಸರ್ವ ಶ್ರೇಷ್ಠತೆ ನೀಡುವ ಅನುಭವ ಹಂಚುವ ಮಹನೀಯರಿದ್ದರು. ಅವರ ಅಮೃತಧಾರೆಯಿಂದ ಸಮಾಜ ಇಂದು ಸಮಾನತೆ ಹಾದಿಯಲ್ಲಿ ಹೆಜ್ಜೆಹಾಕುತ್ತಿದೆ ಎಂದರು.ಬಸವಣ್ಣನವರ ವಚನಗಳು ಬಾಳಿಗೆ ಶಕ್ತಿ ನೀಡುವ ಶ್ರೇಷ್ಠತೆ ಹೊಂದಿವೆ. ಕಾಯಕ ಮಾಡಿ ಬದುಕಿದರೆ ಅದುವೇ ಕೈಲಾಸ. ಪ್ರತಿಯೊಬ್ಬರು ಕಾಯಕವೇ ಕೈಲಾಸ ಎಂದು ದುಡಿದು ಬದುಕಿ ಎಂದು ಸಾರಿದರು ಎಂದರು.
ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ ಹಾಗೂ ಗ್ರಾಮಸ್ಥರಿದ್ದರು. ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ಜರುಗಿತು.