ಮುಂಡರಗಿ:
ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಬಸವೇಶ್ವರ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಜಾತ್ಯತೀತವಾಗಿ ಎಲ್ಲ ಜಾತಿ, ಧರ್ಮದವರಿಗೆ ಬಸವಣ್ಣ ಆಸರೆ ನೀಡಿ ಜಾತ್ಯತೀತ ಮನೋಭಾವನೆ ಬೆಳೆಸಿದರು. ದಯವಿಲ್ಲದ ಧರ್ಮ ಯಾವುದಯ್ಯ, ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲಿ ಎಂದು ತಿಳಿ ಹೇಳಿದ್ದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ. ಬಿ.ಎಸ್. ಮೇಟಿ, ಕೊಟ್ರೇಶ ಅಂಗಡಿ, ವೀರಣ್ಣ ಮೇಟಿ, ಪ್ರಭುಗೌಡ ಪಾಟೀಲ, ಬಾಬಣ್ಣ ಚೆನ್ನಳ್ಳಿ, ಮಂಜುನಾಥ ಮುಧೋಳ, ಹರಗಿನಡೋಣಿ ವಿರೂಪಾಕ್ಷಗೌಡ, ಉಮೇಶ ಮೇಟಿ, ವಿಶ್ವನಾಥ ಪಾಟೀಲ, ಬಸವರಾಜ ನವಲಗುಂದ, ಮಂಜುನಾಥ ತಾಂಬ್ರಗುಂಡಿ, ಮಂಜುನಾಥ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.