ಕನ್ನಡಪ್ರಭ ವಾರ್ತೆ ಕಮಲಾಪುರ
ಕಮಲಾಪುರ ಪಟ್ಟಣ ಸಾಂಸ್ಕೃತಿಕ ನಾಯಕ ಬಸವಣ್ಣನವರ ತಾಲೂಕು ವತಿಯಿಂದ ಆಯೋಜಿಸಿದ್ದ 892ನೇ ತಾಲೂಕು ಮಟ್ಟದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕ ಯಾರು ಬಸವಣ್ಣನವರನ್ನು ಅನುಕರಿಸುತ್ತಾರೋ ಎಲ್ಲರೂ ಲಿಂಗವಂತರು ಎಂದು 12ನೇ ಶತಮಾನದ ಶರಣರು ಹೇಳಿದ್ದಾರೆ.
ಈ ಧರ್ಮಕ್ಕೆ ಹೆಚ್ಚಿನ ಒಲವು ಬಂದಿರುವುದು ಬುದ್ಧ ತತ್ವಗಳನ್ನು ಅಳವಡಿಸಿಕೊಂಡು, ಸರ್ವ ಜಾತಿಯ ಜನಾಂಗದ ನಾಯಕರನ್ನು ಅನುಸರಿಸಿಕೊಂಡ ಬಂದಿರುವ ಧರ್ಮವೇ ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವಂತಹ ಹಿಂದುಳಿದ ವರ್ಗದವರು ಬರೆದಿರುವಂತಹ ವಚನ ಸಾಹಿತ್ಯಕ್ಕೆ ಸಿಂಹ ಪಾಲಿದೆ ಎಂದರು.ಗುರುಲಿಂಗ ಪೆದ್ದಿಗಳು, ಮಾದರ ಚೆನ್ನಯ್ಯನವರು , ಭಕ್ತ ಕನಕದಾಸ,ಅಂಬಿಗರಚೌಡಯ್ಯನವರು,ಡೋಹಾರ ಕಕ್ಕಯ್ಯನವರು,ಅನೆಕ ಶರಣರು ರಚಿಸಿದ ವಚನಗಳ ಮೇಲೆ ನಿಂತಿದೆ ಲಿಂಗಾಯತ ಧರ್ಮ ಎಂದು ತಿಳಿಸಿದರು.
ಬಸವಣ್ಣನವರು 12ನೇ ಶತಮಾನದಲಿಯೇ ಸಾಮಾಜಿಕ ಕ್ರಾಂತಿ ಆರಂಬಿಸಿದರು. ಅಲ್ಲದೇ ಮೂಢನಂಬಿಕೆ, ಅಂಧ ಶ್ರದ್ದೆಗಳನ್ನು ದಿಕ್ಕರಿಸಿ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದರು.
ರಾಜಶೇಖರ ಸ್ವಾಮೀಜಿ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜುನಾಥ ತಡಕಲ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ರವಿ ಬಿರಾದಾರ್, ಸಂತೋಷ್ ರಾಂಪುರೆ, ಅಬ್ದುಲ್ ಸತ್ತರ್, ಪರಮೇಶ್ವರ ಓಕಳಿ, ಅಮರ್ ಚಿಕ್ಕೆಗೌಡ, ಗುರುರಾಜ ಬಮಾಣ್ಣ, ನಡರಾಜ ಕಲ್ಯಾಣ ಇದ್ದರು.