ಬಸವಣ್ಣ ವ್ಯಕ್ತಿ ಮಾತ್ರವಲ್ಲ ಒಂದು ಚೈತನ್ಯ: ಬಾಲಯೋಗಿ ಜಗದೀಶ್ವರ ಶ್ರೀ

KannadaprabhaNewsNetwork |  
Published : Apr 21, 2026, 04:00 AM IST
20ಎಚ್‌ಆರ್‌ಆರ್03ಹರಿಹರದ ಅ.ಭಾ.ವೀ.ಲಿಂ ಮಹಾಸಭಾದ ವತಿಯಿಂದ ಸೋಮವಾರ ಬಸವೇಶ್ವರ ಜಯಂಯೋತ್ಸವ ಕಾರ್ಯಕ್ರಮದಲ್ಲಿ   ಬಾಲಯೋಗಿ ಜಗದೀಶ್ವರ ಶ್ರೀ,  ಹಾಗೂ ಇತರರು2೦ಎಚ್‌ಆರ್‌ಆರ್ 03 Aಹರಿಹರದಲ್ಲಿ ಸೋಮವಾರ ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಜೋಡೆತ್ತುಗಳ ಮೆರವಣಿಗೆಗೆ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಚಾಲನೆ ನೀಡಿದರು. ಡಿ.ಜಿ.ಶಿವಾನಂದಪ್ಪ ಮತ್ತಿತರರಿದ್ದರು. | Kannada Prabha

ಸಾರಾಂಶ

ಬಸವಣ್ಣ ಕೇವಲ ವ್ಯಕ್ತಿಯಲ್ಲ ಅದೋಂದು ಚೈತನ್ಯ,12ನೇ ಶತಮಾನದ ಧಾರ್ಮಿಕ ಕ್ರಾಂತಿಯ ಸಂಕೇತವಲ್ಲ, ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದರು ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಬಸವಣ್ಣ ಕೇವಲ ವ್ಯಕ್ತಿಯಲ್ಲ ಅದೋಂದು ಚೈತನ್ಯ,12ನೇ ಶತಮಾನದ ಧಾರ್ಮಿಕ ಕ್ರಾಂತಿಯ ಸಂಕೇತವಲ್ಲ, ಸಾಮಾಜಿಕ ನ್ಯಾಯದ ಧ್ವನಿಯಾಗಿದ್ದರು ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಸೋಮವಾರ ಭರಂಪುರದ ಕುಂಭಳೇಶ್ವರ ಶ್ರೀ 108 ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ವೀರಶೈವ ಲಿಂಗಾಯತ ಧರ್ಮ ಎಲ್ಲರನ್ನು ಅಪ್ಪಿಕೊಳ್ಳುವ ವೈಚಾರಿಕವಾದ ಧರ್ಮ ಎನ್ನುವದನ್ನೂ ಅರಿತು ಬಸವಣ್ಣನವರು ತಾನು ಹುಟ್ಟಿದ ಜಾತಿಯನ್ನು ತ್ಯಜಿಸಿ ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿಕೊಂಡರು ಎಂದು ಹೇಳಿದರು.

ಅಕ್ಕ ಮಹಾದೇವಿಯು ಸೇರಿದಂತೆ ಅನೇಕ ಮಹಿಳಾ ವಚನಕಾರರು ಬಸವಣ್ಣ ನವರ ಕಾಲದಲ್ಲಿ ಬೆಳಕಿಗೆ ಬರುವ ಮೂಲಕ ಮಹಿಳೆಯರು ಮನೆಗೆ ಮಾತ್ರ ಸೀಮಿತವಲ್ಲ ಎನ್ನುವದನ್ನು ತೋರಿಸಿಕೊಟ್ಟಿದ್ದರು ಎಂದು ನೆನಪಿಸಿಕೊಂಡರು.

ತಾಪಂ ಮಾಜಿ ಸದಸ್ಯ ಬಿ.ಜಿ.ಹಾಲೇಶ್ ಗೌಡ್ರು ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾಜೋದ್ಧಾರಕ ಕ್ರಾಂತಿ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಜಗಜ್ಯೋತಿ ಬಸವೇಶ್ವರರು ಎಂದರು.

ಬಿಜೆಪಿ ಮುಖಂಡ ಎಸ್.ಎಂ.ವೀರೇಶ್ ಹನಗವಾಡಿ, ನಿವೃತ್ತ ಪ್ರಾಂಶುಪಾಲ ಡಾ.ಎಚ್.ಎ.ಬಿಕ್ಷಾವರ್ತಿ ಮಠ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, 108 ಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ರೇವಣಸಿದ್ದಪ್ಪ ಬೆಣ್ಣಿ, ಶೇರಾಪುರದ ರಾಜಣ್ಣ, ವೀರೇಶ್ ಯಾದವಾಡ್, ಜಿ.ಕೆ.ಮಲ್ಲಿಕಾರ್ಜುನ, ಬೆಣ್ಣಿ ಸಿದ್ದೇಶ್, ಮಾಲತೇಶ್, ಗಜೇಂದ್ರ ಬೇಲೂರು, ಬೆಟ್ಟಪ್ಪ, ಹರಪನಹಳ್ಳಿ ಬಸಣ್ಣ, ವೀರೇಶ್ ಅಜ್ವಣ್ಣನವರ್, ಮಹಿಳಾ ಘಟಕ ರೂಪಾ ನಾಗರಾಜ್, ಕುಸುಮಾ ನಾಗರಾಜ್ , ಡಾ.ಶ್ವೇತಾ ಈಶ್ವರ, ಸುಪ್ರೀತಾ ಸುಜಯ, ಉಮಾದೇವಿ, ನಗರ ಘಟಕದ ಶಶಿಧರ ಗೌಡ, ಯುವ ಘಟಕ ಡಿ.ಕೆ.ಬಸವನಗೌಡ, ರೇಣುಕಾರಾಧ್ಯ, ರಮೇಶ್ ಕರೂರು, ಸ್ವಾಮಿ ಲಿಂಗಪ್ಪ ಇತರರು ಇದ್ದರು.

ವೀರಶೈವ ಲಿಂಗಾಯತ ಮಹಾಸಭಾದಿಂದ ಪಲ್ಲಕ್ಕಿ ಉತ್ಸವ

ಜಗಜ್ಯೋತಿ ಬಸವೇಶ್ವರರ ಜಯಂತಿಯ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಎತ್ತುಗಳ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಚಾಲನೆ ನೀಡಿದರು.

ನಗರದ ಹೊಸ ಭರಂಪುರ ದಿಂದ ಆರಂಭವಾದ ಬಸವಣ್ಣನವರ ಭಾವಚಿತ್ರ ಮತ್ತು ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಹೊತ್ತ ಅಲಂಕೃತ ಟ್ರ‍್ಯಾಕ್ಟರ್ ಮತ್ತು ಕಸಬಾ ಮತ್ತು ಮಹಜೇನಹಳ್ಳಿ ಭಾಗದ ರೈತರ ಅಲಂಕೃತ ಜೋಡೆತ್ತುಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿತು, ದಾರಿಯುದ್ದಕ್ಕೂ ಸುಮಂಗಲಿಯರು ಪೂಜೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಹೊಸ ಭರಂಪುರ ಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಹಳೆ ಪಿ.ಬಿ ರಸ್ತೆ, ಗಾಂಧಿ ವೃತ್ತ, ಮುಖ್ಯರಸ್ತೆ, ಕಿತ್ತೂರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ, ಹಳ್ಳದ ಕೇರಿಯ ತಹಸೀಲ್ದಾರ್ ರಸ್ತೆ, ಸಂಗಮೇಶ್ವರ ರಸ್ತೆ, ದೇವಸ್ಥಾನ ರಸ್ತೆ, ಹರಿಹರೇಶ್ವರ ದೇವಸ್ಥಾನ ಮುಂಭಾಗದಿಂದ ಶಿಭಾರ ವೃತ್ತ, ಪ್ರವಾಸಿ ಮಂದಿರ ರಸ್ತೆಯ ಮೂಲಕ 108 ಲಿಂಗೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.

ಮಾಜಿ ಶಾಸಕ ಎಸ್.ರಾಮಪ್ಪ, ತಹಸೀಲ್ದಾರ್ ಜಿ.ಸಂತೋಷ್ ಕುಮಾರ್, ಮಾತೆಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊನೆಗೂ ಬನ್ನೇರುಘಟ್ಟ ರಸ್ತೆಗೆ ಡಾಂಬರೀಕರಣ
ಗಣತಿಗೆ ಪಿಯು ಓದಿದವರಿಗೆ ಅವಕಾಶ: ಆಯ್ಕೆಗಾಗಿ ನಾಳೆ ಟೌನ್‌ಹಾಲ್‌ನಲ್ಲಿ ನೇರ ಸಂದರ್ಶನ